ಅಬ್ಬಾ! ಈ ಮಹಿಳೆ ಕಟ್ಟಿದ ಆದಾಯ ತೆರಿಗೆ ಎಷ್ಟು ಗೊತ್ತಾ?:

Published : Jul 24, 2018, 04:37 PM IST
ಅಬ್ಬಾ! ಈ ಮಹಿಳೆ ಕಟ್ಟಿದ ಆದಾಯ ತೆರಿಗೆ ಎಷ್ಟು ಗೊತ್ತಾ?:

ಸಾರಾಂಶ

ಬರೋಬ್ಬರಿ 9 ಕೋಟಿ ರೂ. ತೆರಿಗೆ ಕಟ್ಟಿದ ಮಹಿಳೆ ಆಂಧ್ರಪ್ರದೇಶ, ತೆಲಂಗಾಣ ರಾಜ್ಯದಲ್ಲೇ ಅತ್ಯಧಿಕ 30 ಕೋಟಿ ರೂ. ಆದಾಯಕ್ಕೆ 9 ಕೋಟಿ ರೂ. ತೆರಿಗೆ ಆದಾಯ ತೆರಿಗೆ ಇಲಾಖೆ ಮುಖ್ಯ ಆಯುಕ್ತರ ಮಾಹಿತಿ

ಹೈದರಾಬಾದ್(ಜು.24): ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಹೈದರಾಬಾದ್ ಮೂಲದ ಮಹಿಳೆ, 2017-18ರ ಆರ್ಥಿಕ ವರ್ಷದಲ್ಲಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ವೈಯಕ್ತಿಕ ತೆರಿಗೆದಾರರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

ಒಟ್ಟು 30 ಕೋಟಿ ರೂ. ಆದಾಯಕ್ಕೆ 9 ಕೋಟಿ ರೂ. ತೆರಿಗೆಯನ್ನು ಈ ಮಹಿಳೆ ಕಟ್ಟಿದ್ದಾರೆ. ಸಾಂಸ್ಥಿಕ ವಲಯದಲ್ಲಿ 2,259 ಕೋಟಿ ರೂ. ತೆರಿಗೆ ಕಟ್ಟಿರುವ ರಾಷ್ಟ್ರೀಯ ಮಿನರಲ್ ಡೆವಲಪ್ಮೆಂಟ್ ಕಾರ್ಪೊರೇಷನ್ (ಎನ್ಎಂಡಿಸಿ) ಅತ್ಯಧಿಕ ತೆರಿಗೆ ಕಟ್ಟಿರುವ ಸಂಸ್ಥೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಉತ್ಪಾದನಾ ಕ್ಷೇತ್ರವು 4,924 ಕೋಟಿ ರೂ. ತೆರಿಗೆ ಪಾವತಿಯೊಂದಿಗೆ ಮೊದಲ ಸ್ಥಾನದಲ್ಲಿದ್ದು, ನಂತರದ ಸ್ಥಾನ ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳಿಗೆ ಸೇರಿದೆ. ಇವೆರಡೂ ಕ್ಷೇತ್ರಗಳು ಒಟ್ಟು 1,645 ಕೋಟಿ ರೂ. ಆದಾಯ ತೆರಿಗೆ ಪಾವತಿಸಿವೆ ಎಂಧು ಆದಾಯ ತೆರಿಗೆ ಇಲಾಖೆಯ ಮುಖ್ಯ ಆಯುಕ್ತ ಎಸ್ ಪಿ ಚೌಧರಿ ತಿಳಿಸಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!
ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್