ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಹುರುನ್ ಇಂಡಿಯಾ ರಿಚ್ ಲಿಸ್ಟ್ 2023 ರಲ್ಲಿ ಭಾರತದ ಶ್ರೀಮಂತ ವ್ಯಕ್ತಿ ಎಂಬ ಬಿರುದನ್ನು ಮರುಪಡೆದುಕೊಂಡಿದ್ದಾರೆ. ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರನ್ನು ಹಿಂದಿಕ್ಕಿದ್ದಾರೆ. ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ ನೋಡೋಣ?
ಮುಂಬೈ: ಹುರೂನ್ ಇಂಡಿಯಾ ಸಂಸ್ಥೆ ಭಾರತದ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಅವರನ್ನು ಹಿಂದಿಕ್ಕಿರುವ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮರಳಿ ದೇಶದ ನಂ.1 ಶ್ರೀಮಂತನಾಗಿ ಹೊರಹೊಮ್ಮಿದ್ದಾರೆ. ಇನ್ನು ಸ್ವಯಂ ಶ್ರೀಮಂತರಾದ ಮಹಿಳೆಯರ ಪಟ್ಟಿಯಲ್ಲಿ ನಾಯಿಕಾ ಸಂಸ್ಥೆಯ ಪಲ್ಗುಣಿ ಪಾಠಕ್ ಹಿಂದಿಕ್ಕಿರುವ ಜೋಹೋದ ರಾಧಾ ವೆಂಬು ನಂ.1 ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಹುರುನ್ ಇಂಡಿಯಾ ಮತ್ತು 360 ವೆಲ್ತ್ ಜಂಟಿಯಾಗಿ ಬಿಡುಗಡೆ ಮಾಡಿದ 360 ಒನ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2023, ದೇಶದ ಶ್ರೀಮಂತ ವ್ಯಕ್ತಿಗಳ ಹೆಸರನ್ನು ಅನಾವರಣಗೊಳಿಸಿದೆ
ಭಾರತದ ಟಾಪ್ 10 ಶ್ರೀಮಂತರು ಯಾರು?
ರಿಲಯನ್ಸ್ ಇಂಡಸ್ಟ್ರೀಸ್‌ನ ಮುಕೇಶ್ ಅಂಬಾನಿ 8.08 ಲಕ್ಷ ಕೋಟಿ ರೂ. ಆಸ್ತಿಯೊಂದಿಗೆ ದೇಶದ ನಂ.1 ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮುಕೇಶ್ ಅಂಬಾನಿ ಆಸ್ತಿಯಲ್ಲಿ ಶೇ.2.2ರಷ್ಟು ಮಾತ್ರವೇ ಏರಿಕೆಯಾಗಿದೆ. ಆದರೆ ಕಳೆದ ವರ್ಷದ ಮೊದಲ ಸ್ಥಾನದಲ್ಲಿದ್ದ ಗೌತಮ್ ಅದಾನಿ ಆಸ್ತಿ, ಹಿಂಡನ್‌ಬರ್ಗ್ ವರದಿ ಪ್ರಕಟ ಬಳಿಕ ಶೇ.57ರಷ್ಟು ಕುಸಿತ ಕಂಡು 4.74 ಲಕ್ಷ ಕೋಟಿಗೆ ಇಳಿದ ಪರಿಣಾಮ ಅವರು 2ನೇ ಸ್ಥಾನ ಪಡೆದುಕೊಂಡಿದ್ದಾರೆ.
ನೀತಾ ಅಂಬಾನಿ, ಚಿನ್ನಲೇಪಿತ, ವಜ್ರ ಹುದುಗಿಸಿದ ವಿಶ್ವದ ಅತೀ ದುಬಾರಿ ಐಫೋನ್ ಬಳಸ್ತಾರಾ? ಸತ್ಯಾಂಶವೇನು?
ಉಳಿದಂತೆ ಪುಣೆ ಸೀರಂ ಇನ್‌ಸ್ಟಿಟ್ಯೂಟ್ ಮಾಲೀಕ ಸೈರಸ್ ಪೂನಾವಾಲಾ (2.78 ಲಕ್ಷ ಕೋಟಿ ರು.), ಎಚ್‌ಸಿಎಲ್‌ನ ಶಿವ ನಾಡಾರ್ (2.28 ಲಕ್ಷ ಕೋಟಿ ರು.), ಗೋಪಿಚಂದ್ ಹಿಂದೂಜಾ , ದಿಲೀಪ್ ಸಿಂಘ್ವಿ , ಲಕ್ಷ್ಮೀ ನಿವಾಸ್ ಮಿತ್ತಲ್ , ರಾಧಾಕೃಷ್ಣನ್ ದಮಾನಿ , ಕುಮಾರ ಮಂಗಳಂ ಬಿರ್ಲಾ , ನೀರಜ್ ಬಜಾಜ್ ಕ್ರಮವಾಗಿ 3ರಿಂದ 10 ಸ್ಥಾನ ಪಡೆದಿದ್ದಾರೆ. 138 ನಗರಗಳ 1319 ಶ್ರೀಮಂತರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಪ್ರಿಸಿಷನ್ ವೈರ್ಸ್‌ನ ಮುಖ್ಯಸ್ಥ ಮಹೇಂದ್ರ ರತಿಲಾಲ್ ತಮ್ಮ 94ನೇ ವಯಸ್ಸಿನಲ್ಲಿ ಸಿರಿವಂತರ ಪಟ್ಟಿ ಸೇರಿದ್ದರೆ, ಜೆಪ್ಟೋ ಸ್ಟಾರ್ಟಪ್‌ನ ಕೈವಲ್ಯ ವೋಹ್ರಾ (20 ವರ್ಷ) ಪಟ್ಟಿಯಲ್ಲಿ ಸ್ಥಾನ ಪಡೆದ ಅತಿ ಕಿರಿಯ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಝೆಪ್ಟೋ ಸಂಸ್ಥಾಪಕ ಶ್ರೀಮಂತ ಪಟ್ಟಿಯಲ್ಲಿರುವ ಅತೀ ಕಿರಿಯ ಸದಸ್ಯ
ಈ ಪಟ್ಟಿಯಲ್ಲಿ ಝೆಪ್ಟೋ ಸಂಸ್ಥಾಪಕ ಕೈವಲ್ಯ ವೋಹ್ರಾ (20) ಅವರು ಕಿರಿಯ ಸದಸ್ಯರಾಗಿದ್ದಾರೆ, ಇದು ಭಾರತದ ಸ್ಟಾರ್ಟ್ಅಪ್ ಕ್ರಾಂತಿಯ ಪರಿಣಾಮವನ್ನು ಒತ್ತಿಹೇಳುತ್ತದೆ. 360 ಒನ್‌ನ ಸಹ-ಸಂಸ್ಥಾಪಕ ಮತ್ತು 360 ಒನ್ ವೆಲ್ತ್‌ನ ಜಂಟಿ ಸಿಇಒ ಯತಿನ್ ಶಾ ಈ ಬಗ್ಗೆ ಮಾತನಾಡಿ, 'ಈ ವರ್ಷದ ಪಟ್ಟಿಯು ನಮ್ಮ ದೇಶದಲ್ಲಿ ಗಮನಾರ್ಹವಾದ ಉದ್ಯಮಶೀಲತೆಯ ಮನೋಭಾವವನ್ನು ಒತ್ತಿಹೇಳುತ್ತದೆ, 64% ವ್ಯಕ್ತಿಗಳು ಸ್ವಯಂ-ನಿರ್ಮಿತರಾಗಿದ್ದಾರೆ' ಎಂದು ತಿಳಿಸಿದ್ದಾರೆ.
ಇಶಾ ಅಂಬಾನಿ ಅತ್ತಿಗೆ ಬ್ರಿಲಿಯೆಂಟ್ ಮಹಿಳಾ ಉದ್ಯಮಿ, ಆಸ್ತಿಯಲ್ಲಿ ಅಪ್ಪನನ್ನೇ ಮೀರಿಸುವಂತಿದ್ದಾಳೆ ಮಗಳು!
360 ಒನ್ ವೆಲ್ತ್‌ನ ಸಹ-ಸಂಸ್ಥಾಪಕ ಮತ್ತು ಜಂಟಿ ಸಿಇಒ ಅನಿರುಧಾ ತಪರಿಯಾ, 'ಕಳೆದ ಐದು ವರ್ಷಗಳಲ್ಲಿ, ಅನೇಕ ಉದ್ಯಮಿಗಳು ಅಸಾಧಾರಣ ಸಂಪತ್ತಿನ ಬೆಳವಣಿಗೆಯನ್ನು ಕಂಡಿದ್ದಾರೆ, ಕೆಲವರು ಆಶ್ಚರ್ಯಕರವಾಗಿ 1,000 ಪ್ರತಿಶತ ಏರಿಕೆಯನ್ನು ಅನುಭವಿಸಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ.