ಬಟ್ಟೆಗೆ ತಕ್ಕಂತೆ ಚಪ್ಪಲಿ ಖರೀದಿ ಮಾಡುವ ಜನರಿದ್ದಾರೆ. ಹತ್ತಾರು ಜೊತೆ ಚಪ್ಪಲಿ ಕಲೆಕ್ಷನ್ ಈಗ ಜನರ ಬಳಿ ಇರುತ್ತೆ. ಎಲ್ಲರಿಗೂ ಅಗತ್ಯವಾದ ಈ ಚಪ್ಪಲಿಗಳು ನಿಮ್ಮ ಆದಾಯಕ್ಕೆ ಮೂಲವಾಗ್ಬಹುದು. ಪಾದರಕ್ಷೆ ಬ್ಯುಸಿನೆಸ್ ನಲ್ಲಿ ಲಾಭವೆಷ್ಟು ಗೊತ್ತಾ?
ಇದು ಫ್ಯಾಷನ್ ಯುಗ. ಇಲ್ಲಿ ಬಟ್ಟೆ, ಸೌಂದರ್ಯ ವರ್ದಕದ ಜೊತೆ ಚಪ್ಪಲಿಗೂ ಹೆಚ್ಚಿನ ಮಹತ್ವವಿದೆ. ಎಲ್ಲ ಕಡೆ ಒಂದೇ ಚಪ್ಪಲಿ ಹಾಕಿಕೊಂಡು ಹೋಗುವ ಯುಗ ಇದಲ್ಲ. ಮನೆಯಲ್ಲಿ ಬೇರೆ, ಬಾತ್ ರೂಮಿಗೆ ಬೇರೆ, ಅಂಗಡಿಗೆ ಬೇರೆ, ಮಾಲ್ ಗೆ ಬೇರೆ, ಪಾರ್ಟಿಗೆ ಬೇರೆ, ಡ್ರೆಸ್ ಗೆ ತಕ್ಕಂತೆ ಭಿನ್ನ ಭಿನ್ನ ಚಪ್ಪಲಿ, ಶೂ ಧರಿಸುವ ಕಾಲ ಇದು. ಮಹಿಳೆಯರು ಮಾತ್ರವಲ್ಲ ಪುರುಷರೂ ಕೂಡ ವೆರೈಟಿ ಚಪ್ಪಲಿ, ಶೂ ಕೇಳ್ತಾರೆ. ಈ ಚಪ್ಪಲಿ ನಿಮ್ಮ ಹೊಟ್ಟೆ ತುಂಬಿಸುತ್ತದೆ. ನೀವು ವ್ಯವಹಾರ ಮಾಡುವ ಪ್ಲಾನ್ ನಲ್ಲಿದ್ದರೆ ಚಪ್ಪಲಿ ಬ್ಯುಸಿನೆಸ್ ಆಯ್ದುಕೊಳ್ಳಬಹುದು.
ಎಂದೂ ಬೇಡಿಕೆ ಕಡಿಮೆಯಾಗದ ಬ್ಯುಸಿನೆಸ್ (Business) ನಲ್ಲಿ ಇದು ಒಂದು. ಒಂದೇ ಬೀದಿಯಲ್ಲಿ ಎರಡು ಮೂರು ಚಪ್ಪಲಿ (Slippers) ಅಂಗಡಿ ಇದ್ರೂ ಎಲ್ಲರ ವ್ಯಾಪಾರ ಚೆನ್ನಾಗಿಯೆ ನಡೆಯುತ್ತಿರುತ್ತದೆ. ಇದ್ರ ಮೇಲೆ ನೀವು ಚಪ್ಪಲಿ ಬ್ಯುಸಿನೆಸ್ ಎಷ್ಟು ಲಾಭ (Profit) ದಾಯಕ ಎಂಬುದನ್ನು ಅಂದಾಜಿಸಬಹುದು. ನೀವು ಸಗಟು ಶೂಗಳು ಮತ್ತು ಚಪ್ಪಲಿಗಳನ್ನು ಖರೀದಿಸಿ ಅದನ್ನು ಮಾರಾಟ ಮಾಡಬಹುದು. ಇಲ್ಲವೆ ಪೂರೈಕೆದಾರರಾಗಬಹುದು. ಅಂದ್ರೆ ದೊಡ್ಡ ಮಟ್ಟದಲ್ಲಿ ಚಪ್ಪಲಿ ಮತ್ತು ಶೂಗಳನ್ನು ತಂದು ಅದನ್ನು ನೀವು ಚಪ್ಪಲಿ ಅಂಗಡಿಗೆ ಮಾರಾಟ ಮಾಡಬಹುದು. ಕಡಿಮೆ ಬಜೆಟ್ ನಲ್ಲಿ ವ್ಯಾಪಾರ ಮಾಡ್ತೇವೆ ಎನ್ನುವವರಿಗೆ ಸಗಟು ವ್ಯಾಪಾರ ಬೆಸ್ಟ್.
Business Ideas : ಆನ್ಲೈನ್ ಯುಗದಲ್ಲಿ ಈ ಬ್ಯುಸಿನೆಸ್ ಶುರು ಮಾಡಿ, ಕೈಗೆ ಸೇರುತ್ತೆ ದುಡ್ಡು
ಪಾದರಕ್ಷೆ ಅಂಗಡಿ (Footwear Shop) ವ್ಯಾಪಾರ ಶುರು ಮಾಡೋದು ಹೇಗೆ? : ಈ ವ್ಯಾಪಾರಕ್ಕೆ ಗಡಿಯಿಲ್ಲ. ಹಳ್ಳಿ ಹಾಗೂ ನಗರ ಎಲ್ಲಿಯಾದ್ರೂ ನೀವು ಶುರು ಮಾಡಬಹುದು. ನಿಮ್ಮ ಹಳ್ಳಿಯಲ್ಲಿ ಸಣ್ಣ ಚಪ್ಪಲಿ ಅಂಗಡಿ ಕೂಡ ನೀವು ತೆರೆಯಬಹುದು. ಮನೆಯಲ್ಲಿಯೇ ವ್ಯಾಪಾರ ನಡೆಸುತ್ತಿರುವವರು ಕೂಡ ಅನೇಕರಿದ್ದಾರೆ. ಮನೆಯಲ್ಲಿ ಬೇಡ ಎನ್ನುವವರು ಜನನಿಬಿಡಿ ಪ್ರದೇಶದಲ್ಲಿ ಸಣ್ಣ ಜಾಗ ಬಾಡಿಗೆ ಪಡೆದು ವ್ಯಾಪಾರ ಮಾಡಬಹುದು. ಆದಾಯ ಹೆಚ್ಚಾದಂತೆ ಅಂಗಡಿ ವಿಸ್ತರಿಸಲು ಅವಕಾಶವಿರುತ್ತದೆ. ನಗರದಲ್ಲಿ ಈ ವ್ಯಾಪಾರ ಶುರು ಮಾಡ್ಬೇಕು ಎನ್ನುವವರು ಮಾರುಕಟ್ಟೆ ಪ್ರದೇಶವನ್ನು ಆಯ್ದುಕೊಳ್ಳಿ. ಯಾಕೆಂದ್ರೆ ಮಾರುಕಟ್ಟೆಯಲ್ಲಿ ಜನಸಂಖ್ಯೆ ಹೆಚ್ಚಿರುತ್ತದೆ. ಅವರ ಗಮನ ನಿಮ್ಮಅಂಗಡಿ ಮೇಲೆ ಹೋಗುತ್ತದೆ.
ಚಪ್ಪಲಿ ವ್ಯಾಪಾರಕ್ಕಾಗಿ ನೋಂದಣಿ ಅಗತ್ಯವೇ? : ಸಣ್ಣ ಪ್ರಮಾಣದಲ್ಲಿ ವ್ಯಾಪಾರ ಮಾಡ್ತೀರಿ ಎಂದಾದ್ರೆ ಅದಕ್ಕೆ ನೋಂದಣಿ ಅಗತ್ಯವಿರುವುದಿಲ್ಲ. ಸ್ವಂತ ಪಾದರಕ್ಷೆಗಳ ಅಂಗಡಿ ತೆರೆಯಲು ಬಯಸಿದರೆ ಅದಕ್ಕೆ ಜಿಎಸ್ಟಿ ನೋಂದಣಿ ಅಗತ್ಯವಾಗುತ್ತದೆ. ಹಾಗೆಯೇ ನಿಮ್ಮ ವ್ಯಾಪಾರಕ್ಕೆ ಪರವಾನಗಿ ಪಡೆಯಬೇಕಾಗುತ್ತದೆ.
ಹೀಗಿರಲಿ ನಿಮ್ಮ ಚಪ್ಪಲಿ ಅಂಗಡಿ : ನಿಮ್ಮ ಚಪ್ಪಲಿ ಅಂಗಡಿಯಲ್ಲಿ ಎಲ್ಲ ರೀತಿಯ ಚಪ್ಪಲಿ ಇರುವಂತೆ ನೋಡಿಕೊಳ್ಳಿ. ಶೂ, ಚಪ್ಪಲಿ, ಫ್ಲಾಟ್ ಸ್ಲೀಪರ್, ದಿನ ಬಳಕೆ ಚಪ್ಪಲಿ, ಮಕ್ಕಳ ಚಪ್ಪಲಿ ಎಲ್ಲವನ್ನೂ ಇಡುವುದು ಒಳ್ಳೆಯದು.
ಯಾವ ಬ್ರ್ಯಾಂಡ್ ಬೆಸ್ಟ್ : ನೀವು ಯಾವ ಪ್ರದೇಶದಲ್ಲಿ ಚಪ್ಪಲಿ ಅಂಗಡಿ ಇಡುತ್ತಿದ್ದೀರಿ ಎಂಬುದು ಮುಖ್ಯವಾಗುತ್ತದೆ. ಕೆಲ ಸ್ಥಳಗಳಲ್ಲಿ ಜನರು ಕಡಿಮೆ ಬೆಲೆಯ ಚಪ್ಪಲಿಯನ್ನು ಹೆಚ್ಚು ಖರೀದಿ ಮಾಡ್ತಾರೆ. ಹಾಗಾಗಿ ನೀವು ಸ್ಥಳೀಯ ಹಾಗೂ ಬ್ರ್ಯಾಂಡೆಡ್ ಆಯ್ಕೆ ವೇಳೆ ಸ್ಥಳವನ್ನು ನೋಡಿ. ನಿಮಗೆ ಸಾಧ್ಯವಾದಲ್ಲಿ ಎರಡೂ ರೀತಿಯ ಚಪ್ಪಲಿಯನ್ನು ಇಡಬಹುದು.
ಚಪ್ಪಲಿ ವ್ಯಾಪಾರಕ್ಕೆ ತಗಲುವ ವೆಚ್ಚ : ಈ ವ್ಯವಹಾರವನ್ನು ಸಣ್ಣ ಪ್ರಮಾಣದಲ್ಲಿ ಮಾಡುತ್ತಿದ್ದರೆ ನೀವು ಹೆಚ್ಚು ಹೂಡಿಕೆ ಮಾಡುವ ಅಗತ್ಯವಿಲ್ಲ. ನಿಮಗೆ ಬೇಕಾದುದನ್ನು, ನಿಮ್ಮ ಅಗತ್ಯ ಅಥವಾ ನಿಮ್ಮ ಗ್ರಾಹಕರ ಪ್ರಕಾರ ನೀವು ಹೂಡಿಕೆ ಮಾಡಬೇಕು. ನಿಮಗೆ ಬಂದ ಲಾಭದಲ್ಲಿಯೇ ನೀವು ಮತ್ತೊಂದಿಷ್ಟು ಚಪ್ಪಲಿ ತರಬಹುದು. ದೊಡ್ಡ ಅಂಗಡಿಯನ್ನು ತೆರೆಯುತ್ತಿದ್ದರೆ ಮೂರರಿಂದ ನಾಲ್ಕು ಲಕ್ಷ ರೂಪಾಯಿ ಖರ್ಚು ಮಾಡಬೇಕಾಗುತ್ತದೆ.
ಮನೆ ಇರೋರು ಎಲ್ಲರೂ ಹಿಡಿ ಬಳಸ್ತಾರೆ, ವ್ಯಾಪಾರ ಆಗೋದು ಪಕ್ಕಾ
ಚಪ್ಪಲಿ ವ್ಯಾಪಾರದಲ್ಲಿ ಲಾಭ : ಚಪ್ಪಲಿ ವ್ಯವಹಾರ ಸದಾ ಬೇಡಿಕೆಯಲ್ಲಿರುವ ವ್ಯವಹಾರವಾಗಿದೆ. ಒಬ್ಬೊಬ್ಬರ ಬಳಿ ನಾಲ್ಕರಿಂದ ಐದು ಜೊತೆ ಚಪ್ಪಲಿಯಂತೂ ಇದ್ದೇ ಇರುತ್ತದೆ. ನೀವು ತಿಂಗಳಿಗೆ ಸರಾಸರಿ 30ರಿಂದ 50 ಸಾವಿರ ರೂಪಾಯಿ ಲಾಭವನ್ನು ಈ ಚಪ್ಪಲಿ ವ್ಯವಹಾರದಲ್ಲಿ ಪಡೆಯಬಹುದು.