ಇಂಟರ್ನೆಟ್, ಗೂಗಲ್ ಪೇ, ಪೇಟಿಎಂ ಯಾವುದೂ ಇಲ್ಲದೆ ಯುಪಿಐ ಪಾವತಿ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ

By Suvarna NewsFirst Published Aug 13, 2022, 6:28 PM IST
Highlights

ಯುಪಿಐ ಪಾವತಿಗೆ ಇಂಟರ್ನೆಟ್ ಕನೆಕ್ಷನ್ ಬೇಕೇಬೇಕು ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ. ಆದರೆ, ಸಕ್ರಿಯ ಇಂಟರ್ನೆಟ್ ಸಂಪರ್ಕವಿಲ್ಲದೆಯೋ ಯುಪಿಐ ಪಾವತಿ ಮಾಡಬಹುದು. ಅದು ಹೇಗೆ? ಇಲ್ಲಿದೆ ಮಾಹಿತಿ.
 

Business Desk:ಇತ್ತೀಚಿನ ದಿನಗಳಲ್ಲಿ ಯುನಿಫೈಡ್‌ ಪೇಮೆಂಟ್ ಇಂಟರ್ಫೇಸ್ (ಯುಪಿಐ) ದೇಶಾದ್ಯಂತ ಅತೀಹೆಚ್ಚು ಬಳಕೆಯಲ್ಲಿರುವ ಡಿಜಿಟಲ್ ಪಾವತಿ ವಿಧಾನವಾಗಿದೆ. ಎನ್ ಪಿಸಿಐ 2016ರಲ್ಲಿ ಯುಪಿಐ ವ್ಯವಸ್ಥೆಯನ್ನು ಪರಿಚಯಿಸಿತು. ಯುಪಿಐ ನಿಧಾನವಾಗಿ ಭಾರತದ ಪ್ರಮುಖ ಹಣಕಾಸು ವಹಿವಾಟಿನ ಸಾಧನವಾಗುತ್ತಿದೆ. ಅದರಲ್ಲೂ ಕೋವಿಡ್ -19 ಬಳಿಕ ಭಾರತದಲ್ಲಿ ಯುಪಿಐ ಬಳಕೆ ಹೆಚ್ಚಿತು. ಸಂಪರ್ಕರಹಿತ ಪಾವತಿಗೆ ಪ್ರತಿಯೊಬ್ಬರೂ ಪ್ರಾಮುಖ್ಯತೆ ನೀಡಲು ಪ್ರಾರಂಭಿಸಿದ ಹಿನ್ನೆಲೆಯಲ್ಲಿ ಯುಪಿಐ ಬಳಕೆ ಹೆಚ್ಚಿತು. ಯುಪಿಐ ಪ್ರಾರಂಭವಾದ ದಿನದಿಂದ ಈ ತನಕ ಇದಕ್ಕೆ ಸಂಬಂಧಿಸಿದ ತಂತ್ರಜ್ಞಾನಗಳಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ. ಅದಾಗ್ಯೂ ಯುಪಿಐ ಕುರಿತು ಜನರಲ್ಲಿ ಒಂದು ತಪ್ಪು ಕಲ್ಪನೆಯಿದೆ. ಅದೇನೆಂದ್ರೆ ಇಂಟರ್ನೆಟ್ ಸಂಪರ್ಕವಿಲ್ಲದೆ ಯುಪಿಐ ಕಾರ್ಯನಿರ್ವಹಿಸೋದಿಲ್ಲ ಎಂಬುದು. ಆದರೆ, ಇದು ತಪ್ಪು ಕಲ್ಪನೆ. ಇಂಟರ್ನೆಟ್ ಸಂಪರ್ಕವಿಲ್ಲದೆ ಯುಪಿಐ ಐಡಿ ಹಾಗೂ ಪಿನ್ ಬಳಸಿ ಹಣ ಕಳುಹಿಸಬಹುದು ಹಾಗೂ ಸ್ವೀಕರಿಸಬಹುದು. ಮೊಬೈಲ್ ಸಂಖ್ಯೆ ಅಥವಾ ವರ್ಚುವಲ್ ಪಾವತಿ ವಿಳಾಸ ಬಳಸಿಯೂ ಪಾವತಿಗಳನ್ನು ಮಾಡಬಹುದು.

ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹಾಗೂ ಭಾರತದ ರಾಷ್ಟ್ರೀಯ ಪಾವತಿಗಳ ನಿಗಮ (NPCI) ಹೊಸ ಯುಪಿಐ 123 ಪೇ ಯೋಜನೆಯನ್ನು ಬಿಡುಗಡೆ ಮಾಡಿದೆ. ಇದ್ರಿಂದ 40 ಕೋಟಿ ಫೀಚರ್ ಫೋನ್ ಬಳಕೆದಾರರಿಗೆ ಇಂಟರ್ನೆಟ್ ಸಂಪರ್ಕವಿಲ್ಲದೆ  ಡಿಜಿಟಲ್ ಪಾವತಿಗಳನ್ನು ಮಾಡಲು ಅವಕಾಶ ಸಿಕ್ಕಿದೆ. ಯುಪಿಐ ಸೇವೆ ಬಳಸಿಕೊಂಡು ಬಳಕೆದಾರರು (Users)ತಕ್ಷಣ ಹಣ ವರ್ಗಾವಣೆ ಮಾಡಬಹುದು. ಯುಪಿಐ 123 ಪೇ (UPI 123 Pay) ಬಳಸಿಕೊಂಡು ಅನೇಕ ವಹಿವಾಟುಗಳನ್ನು ನಡೆಸಬಹುದು. 

Retail Inflation:ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7ಕ್ಕೆ ಇಳಿಕೆ; ಅಗತ್ಯ ವಸ್ತುಗಳ ಬೆಲೆ ತಗ್ಗುತ್ತಾ?

ಯುಪಿಐ 123 ಪೇ ಬಳಸಿಕೊಂಡು ಯಾರು ಬೇಕಾದರೂ ಕಾರುಗಳಿಗೆ (Cars) ಫಾಸ್ಟ್ ಟ್ಯಾಗ್ಸ್  (Fast Tag) ಹಾಗೂ ಇತರ ಬಿಲ್ ಗಳನ್ನು ಪಾವತಿಸಬಹುದು. ನೋಂದಾಯಿತ ಮೊಬೈಲ್ ಸಂಖ್ಯೆ ಬಳಸಿಕೊಂಡು ಯುಪಿಐ ಖಾತೆ ಬ್ಯಾಲೆನ್ಸ್ ಚೆಕ್ ಮಾಡಬಹುದು. ದಿನದಲ್ಲಿ 24 ಗಂಟೆಗಳ ಕಾಲ ಲಭ್ಯವಿರುವ ಸಂಖ್ಯೆಯನ್ನು ಎನ್ ಪಿಸಿಐ (NPCI) ಒದಗಿಸಿದೆ. www.digisaathi.info ಭೇಟಿ ನೀಡುವ ಮೂಲಕ ಅಥವಾ 14431 ಹಾಗೂ 1800 891 3333 ಸಂಖ್ಯೆಗೆ ಕರೆ ಮಾಡುವ ಮೂಲಕ ಡಿಜಿಟಲ್ ಪಾವತಿಗಳು ಹಾಗೂ ಇತರ ಮಾಹಿತಿಗಳನ್ನು ಸುಲಭವಾಗಿ ಚೆಕ್ ಮಾಡಬಹುದು.

ಇಂಟರ್ನೆಟ್ ಸಂಪರ್ಕವಿಲ್ಲದೆ ಯುಪಿಐ ಪಾವತಿ ಹೇಗೆ?
ಯುಪಿಐ (UPI) ಪಾವತಿ ಪ್ರಕ್ರಿಯೆ ಪೂರ್ಣಗೊಳಿಸಲು ಕೆಲವು ಮೂಲ ಹಂತಗಳನ್ನು ಅನುಸರಿಸಬೇಕು. ಯುಪಿಐ 123ಪೇ ಫೀಚರ್ ಅನ್ನು ಐವಿಆರ್ ಸೇವೆ ಮೂಲಕ ಪಡೆಯಬಹುದು. ಬಳಕೆದಾರರು ಭದ್ರತೆಗೆ ಯುಪಿಐ ಪಿನ್  ಅಳವಡಿಸುವ ಮುನ್ನ ತಮ್ಮ ಫೋನ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿಬೇಕು. 
ಹಂತ 1: ಮೊದಲ ಹಂತವಾಗಿ 08045163666 ಫೋನ್ ಸಂಖ್ಯೆಯನ್ನು ಡಯಲ್ ಮಾಡಿ. ಯುಪಿಐ ಪೇ ಪ್ರಕ್ರಿಯೆಯನ್ನು ನಿಮಗೆ ಸರಳವಾಗಿಸಲು ಭಾಷೆ ಆಯ್ಕೆ ಮಾಡಿ.

GST On Rent:ಮನೆ ಬಾಡಿಗೆ ಮೇಲೂ ಶೇ.18 ಜಿಎಸ್ ಟಿ; ಆದ್ರೆ ಈ ಬಾಡಿಗೆದಾರರಿಗೆ ಮಾತ್ರ ಇದು ಅನ್ವಯ

ಹಂತ  2: ಹಣ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಲು 1 ಸಂಖ್ಯೆಯನ್ನು ಒತ್ತಿ.
ಹಂತ 3: ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಯುಪಿಐ ಜೊತೆಗೆ ಕಾರ್ಯನಿರ್ವಹಿಸುವ ಬ್ಯಾಂಕ್ ಆಯ್ಕೆ ಮಾಡಿ. ಬಳಕೆದಾರರು ಆ ಬಳಿಕ ಮತ್ತೆ 1 ಸಂಖ್ಯೆಯನ್ನು ಒತ್ತುವ ಮೂಲಕ ಮಾಹಿತಿ ದೃಢೀಕರಿಸಿ.
ಹಂತ  4: ವಹಿವಾಟು ಪೂರ್ಣಗೊಳಿಸಲು 1 ಅನ್ನು ಇನ್ನೊಮ್ಮೆ ಒತ್ತಿ. ಆ ಬಳಿಕ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ ಹಾಗೂ ಮಾಹಿತಿ ಚೆಕ್ ಮಾಡಿ.

click me!