Retail Inflation:ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7ಕ್ಕೆ ಇಳಿಕೆ; ಅಗತ್ಯ ವಸ್ತುಗಳ ಬೆಲೆ ತಗ್ಗುತ್ತಾ?

*ಜೂನ್ ನಲ್ಲಿ ಶೇ.7.01ರಷ್ಟಿದ್ದ ಚಿಲ್ಲರೆ ಹಣದುಬ್ಬರ
* ಜುಲೈನಲ್ಲಿ ಆಹಾರ ಹಣದುಬ್ಬರ ಶೇ.6.75ಕ್ಕೆ ಇಳಿಕೆ
*ಸತತ ಏಳು ತಿಂಗಳಿಂದ ಆರ್ ಬಿಐ ಸಹನ ಮಿತಿಗಿಂತ ಹೆಚ್ಚಿರುವ ಹಣದುಬ್ಬರ 
 

Retail Inflation in July Falls to 6.7percent Both Rural Urban Areas See Price Easing

ನವದೆಹಲಿ (ಜು.12): ಭಾರತದ ಚಿಲ್ಲರೆ ಹಣದುಬ್ಬರ ಸತತ ಮೂರು ತಿಂಗಳಿಂದ ಇಳಿಕೆಯ ಹಾದಿ ಹಿಡಿದಿದ್ದು, ಜುಲೈನಲ್ಲಿ ಶೇ.6.7ಕ್ಕೆ ತಗ್ಗಿದೆ. ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರಿತ ಚಿಲ್ಲರೆ ಹಣದುಬ್ಬರ ಜೂನ್ ನಲ್ಲಿ ಶೇ.7.01ರಷ್ಟಿತ್ತು. ಜುಲೈನಲ್ಲಿ ಆಹಾರ ಹಣದುಬ್ಬರ ಕೂಡ ಶೇ.6.75 ಕ್ಕೆ ಇಳಿಕೆಯಾಗಿದೆ. ಜೂನ್ ನಲ್ಲಿ ಆಹಾರ ಹಣದುಬ್ಬರ ಶೇ.7.75ರಷ್ಟಿತ್ತು. ಇನ್ನು ಜೂನ್ ನಲ್ಲಿ ಭಾರತದ ಕೈಗಾರಿಕ ಉತ್ಪಾದನೆ ಕೂಡ ಎರಡಂಕೆಗೆ ಬೆಳೆದಿದ್ದು, ಶೇ.12.3ಕ್ಕೆ ಏರಿಕೆಯಾಗಿದೆ. ಜುಲೈನಲ್ಲಿ ಕೂಡ ಚಿಲ್ಲರೆ ಹಣದುಬ್ಬರ ಆರ್ ಬಿಐ ಸಹನ ಮಿತಿ ಶೇ.2-6ಕ್ಕಿಂತ ಹೆಚ್ಚಿದೆ. ಈ ಮೂಲಕ ಸತತ ಏಳು ತಿಂಗಳಿಂದ ಚಿಲ್ಲರೆ ಹಣದುಬ್ಬರ ಆರ್ ಬಿಐ ಸಹನ ಮಿತಿಗಿಂತ ಹೆಚ್ಚಿದೆ. ಮೇನಲ್ಲಿ ಚಿಲ್ಲರೆ ಹಣದುಬ್ಬರ ಶೇ. 7.04 ರಷ್ಟಿದ್ದರೆ, ಜೂನ್ ನಲ್ಲಿ ಶೇ. 7.01ಕ್ಕೆ ಇಳಿಕೆಯಾಗಿತ್ತು.ಜೂನ್ ನಲ್ಲಿ ಗ್ರಾಮೀಣ ಭಾಗದಲ್ಲಿ (Rural area) ಚಿಲ್ಲರೆ ಹಣದುಬ್ಬರ ನಗರ ಪ್ರದೇಶಕ್ಕಿಂತ (Urban area) ಹೆಚ್ಚಿತ್ತು. ಜೂನ್ ನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹಣದುಬ್ಬರ ಶೇ.7.09ರಷ್ಟಿದ್ದರೆ, ನಗರ ಪ್ರದೇಶದಲ್ಲಿ ಶೇ. 6.92ರಷ್ಟಿತ್ತು.ಆದರೆ, ಜುಲೈನಲ್ಲಿ ಗ್ರಾಮೀಣ ಭಾಗದಲ್ಲಿ ಚಿಲ್ಲರೆ ಹಣದುಬ್ಬರ ಶೇ.6.80ಕ್ಕೆ ಇಳಿಕೆಯಾಗಿದೆ. ಇನ್ನು ನಗರ ಪ್ರದೇಶದಲ್ಲಿ ಕೂಡ ಶೇ. 6.49ಕ್ಕೆ ತಗ್ಗಿದೆ.

ತರಕಾರಿ ಬೆಲೆ ಇಳಿಕೆ
ತರಕಾರಿ (Vegetable) ಬೆಲೆಯಲ್ಲಿ (Price) ಕೂಡ ಜುಲೈನಲ್ಲಿ ಇಳಿಕೆಯಾಗಿದೆ. ತರಕಾರಿ ಬೆಲೆ ಜೂನ್ ನಲ್ಲಿ ಶೇ. 17.37ರಿಂದ ಶೇ.10.9ಕ್ಕೆ ಇಳಿಕೆಯಾಗಿದೆ. 'ಕಾಳುಗಳು ಹಾಗೂ ಉತ್ಪನ್ನಗಳ' ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ. ಜೂನ್ ನಲ್ಲಿ -ಶೇ.1.02ರಷ್ಟಿದ್ದು, ಜುಲೈನಲ್ಲಿ ಶೇ.0.18ಕ್ಕೆ ಹೆಚ್ಚಳವಾಗಿದೆ. 'ಧಾನ್ಯಗಳು ಹಾಗೂ ಉತ್ಪನ್ನಗಳ' ಹಣದುಬ್ಬರ ಶೇ.5.66 ರಿಂದ ಶೇ. 6.90ಕ್ಕೆ ಏರಿಕೆಯಾಗಿದೆ. 'ಇಂಧನ ಹಾಗೂ ವಿದ್ಯುತ್' ಹಣದುಬ್ಬರ ಶೇ.11.76ಕ್ಕೆ ಹೆಚ್ಚಿದೆ. ಜೂನ್ ನಲ್ಲಿ ಇದು ಶೇ.10.39ರಷ್ಟಿತ್ತು. ಇನ್ನು ಹಣ್ಣುಗಳ ಬೆಲೆಯಲ್ಲಿ ಹಿಂದಿನ ತಿಂಗಳಿಗಿಂತ ಭಾರೀ ಹೆಚ್ಚಳ ಕಂಡುಬಂದಿದೆ. ಜೂನ್ ನಲ್ಲಿ ಶೇ.3.10ರಷ್ಟಿದ್ದ ಹಣ್ಣುಗಳ ಹಣದುಬ್ಬರ ಜುಲೈನಲ್ಲಿ ಶೇ.6.41ಕ್ಕೆ ಏರಿಕೆಯಾಗಿದೆ. 

1947ರ ನೆನಪುಗಳು..! 25 ಪೈಸೆಗೆ 1 ಲೀಟರ್‌ ಪೆಟ್ರೋಲ್‌, 90 ರೂಪಾಯಿಗೆ 10 ಗ್ರಾಂ ಚಿನ್ನ!

ಕೈಗಾರಿಕಾ ಉತ್ಪಾದನೆ ಹೆಚ್ಚಳ
ಭಾರತದ ಕೈಗಾರಿಕ ಉತ್ಪಾದನೆ ಜೂನ್ ನಲ್ಲಿ ಶೇ.12.3ಕ್ಕೆ ಹೆಚ್ಚಳವಾಗಿದೆ. ಆದರೆ, ಇದು ಮೇಗೆ ಹೋಲಿಸಿದ್ರೆ ಕಡಿಮೆಯಾಗಿದೆ. ಮೇನಲ್ಲಿ ಶೇ.19.6ರಷ್ಟಿದ್ರೆ, ಜೂನ್ ನಲ್ಲಿ ಶೇ.13.8ರಷ್ಟಿದೆ. ಉತ್ಪಾದನಾ ವಲಯದ ಉತ್ಪಾದನೆ ಜೂನ್ ನಲ್ಲಿ ಶೇ.12.5ಕ್ಕೆ ಹೆಚ್ಚಿದೆ. ಗಣಿ ಉತ್ಪಾದನೆ ಶೇ.7.5ಕ್ಕೆ ಹೆಚ್ಚಳವಾಗಿದೆ. ಇನ್ನು ವಿದ್ಯುತ್ ಉತ್ಪಾದನೆ ಶೇ.16.4ಕ್ಕೆ ಏರಿಕೆಯಾಗಿದೆ. 

GST On Rent:ಮನೆ ಬಾಡಿಗೆ ಮೇಲೂ ಶೇ.18 ಜಿಎಸ್ ಟಿ; ಆದ್ರೆ ಈ ಬಾಡಿಗೆದಾರರಿಗೆ ಮಾತ್ರ ಇದು ಅನ್ವಯ

ಆರ್ ಬಿಐ ಸಹನಾ ಮಟ್ಟಕ್ಕಿಂತ ಹೆಚ್ಚು
ಸಿಪಿಐ (CPI) ಆಧಾರಿತ ಚಿಲ್ಲರೆ ಹಣದುಬ್ಬರ ಆರ್ ಬಿಐ (RBI) ನಿಗದಿಪಡಿಸಿರುವ ಗರಿಷ್ಠ ಸಹನಾ ಮಟ್ಟವನ್ನು ಮೀರುತ್ತಿರೋದು ಇದು ಸತತ ಏಳನೇ ಬಾರಿಯಾಗಿದೆ. ಮಾರ್ಚ್ ನಲ್ಲಿ ಚಿಲ್ಲರೆ ಹಣದುಬ್ಬರ ಶೇ. 6.95ಕ್ಕೆ ಏರಿಕೆಯಾಗಿದ್ರೆ, ಫೆಬ್ರವರಿಯಲ್ಲಿ ಶೇ.6.07ಕ್ಕೆ ಹೆಚ್ಚಳವಾಗಿತ್ತು. ಆರ್ ಬಿಐ ಚಿಲ್ಲರೆ ಹಣದುಬ್ಬರ ಸಹನಾ ಮಿತಿಯನ್ನು ಶೇ.4ಕ್ಕೆ ನಿಗದಿಪಡಿಸಿದ್ದು, ಉಭಯ ಕಡೆ ಶೇ.2ರಷ್ಟು ಮಾರ್ಜಿನ್ (Margin) ನೀಡಿದೆ. ಹೀಗಾಗಿ ಹಣದುಬ್ಬರದ ಗರಿಷ್ಠ ಮಿತಿ ಶೇ.6. ಆದ್ರೆ ಸತತ 7 ತಿಂಗಳಿಂದ ಚಿಲ್ಲರೆ ಹಣದುಬ್ಬರ ಈ ಮಿತಿಯನ್ನು ಮೀರಿದೆ. ಹೀಗಾಗಿ ಆಗಸ್ಟ್ ನಲ್ಲಿ ಕೂಡ ಆರ್ ಬಿಐ ರೆಪೋ ದರವನ್ನು 50 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಳ ಮಾಡಿದೆ.  ಈ ಹಿನ್ನೆಲೆ ಸದ್ಯದ ರೆಪೋ ದರವು ಶೇಕಡಾ 5.40 ಕ್ಕೆ ಏರಿಕೆಯಾಗಿದೆ. ಆರ್ಥಿಕ ವರ್ಷ 2023 ಕ್ಕೆ ಆರ್‌ಬಿಐ ಚಿಲ್ಲರೆ ಹಣದುಬ್ಬರವನ್ನು ಶೇಕಡಾ 6.7 ರಷ್ಟು ಹಾಗೂ  ನೈಜ GDP ಬೆಳವಣಿಗೆಯನ್ನು 7.2 ರಷ್ಟು ಅಂದಾಜು ಮಾಡಿದೆ. 

Latest Videos
Follow Us:
Download App:
  • android
  • ios