ಕೆಲಸ ಬಿಟ್ಮೇಲೂ ಕಾರ್ಪೊರೇಟ್ ಆರೋಗ್ಯ ವಿಮೆ ಮುಂದುವರಿಸ್ಬಹುದಾ?

Published : Oct 25, 2023, 02:11 PM IST
ಕೆಲಸ ಬಿಟ್ಮೇಲೂ ಕಾರ್ಪೊರೇಟ್ ಆರೋಗ್ಯ ವಿಮೆ ಮುಂದುವರಿಸ್ಬಹುದಾ?

ಸಾರಾಂಶ

ಕೆಲ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಆರೋಗ್ಯ ವಿಮೆ ಸೌಲಭ್ಯ ನೀಡುತ್ತವೆ. ಇದ್ರಿಂದ ಉದ್ಯೋಗಿಗಳು ಆರೋಗ್ಯ ಹದಗೆಟ್ಟಾಗ ಖರ್ಚಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಆದ್ರೆ ಆ ಕೆಲಸ ತೊರೆದ್ಮೇಲೆ ಏನು ಮಾಡ್ಬೇಕು?  

ಕಂಪನಿಗಳು ಉದ್ಯೋಗಿಗಳ ಕೆಲಸ ಮಾತ್ರವಲ್ಲ ಅವರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ. ಹಾಗಾಗಿ ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಕಾರ್ಪೊರೇಟ್ ಆರೋಗ್ಯ ವಿಮೆಯ ಸೌಲಭ್ಯವನ್ನು ನೀಡುತ್ತವೆ. ಕಾರ್ಪೊರೇಟ್ ಆರೋಗ್ಯ ವಿಮೆ ಪಾಲಿಸಿಯ ವಿಶೇಷತೆ ಏನೆಂದರೆ ಕಂಪನಿಯು ಉದ್ಯೋಗಿಗಳಿಂದ ಹೆಚ್ಚುವರಿ ಒಂದು ಪೈಸೆಯನ್ನೂ ಪಡೆಯುವುದಿಲ್ಲ. ಇದರ ಪ್ರಯೋಜನಗಳು ಉದ್ಯೋಗಿಗಳಿಗೆ ಮಾತ್ರವಲ್ಲದೆ ಉದ್ಯೋಗಿಯ ಕುಟುಂಬಕ್ಕೂ ದೊರೆಯುತ್ತದೆ. ಬೇರೆ ಬೇರೆ ಉದ್ಯೋಗಿಗೆ ಬೇರೆ ಬೇರೆ ಪಾಲಿಸಿ ನೀಡುವ ಬದಲು ಕಂಪನಿ ಎಲ್ಲರಿಗೂ ಒಂದೇ ಪಾಲಿಸಿ ನೀಡುತ್ತದೆ. 

ನಿಮ್ಮ ಕಂಪನಿ (Company) ಯೂ ನಿಮಗೆ ಕಾರ್ಪೊರೇಟ್ ಆರೋಗ್ಯ ವಿಮಾ (Corporate Health Insurance) ಪಾಲಿಸಿ ಸೌಲಭ್ಯವನ್ನು ನೀಡಿದ್ರೆ ನೀವು ಅದ್ರ ಸಹಾಯದಿಂದ ಆಸ್ಪತ್ರೆಯ ವೆಚ್ಚಗಳು ಮತ್ತು ಹೆರಿಗೆ ವೆಚ್ಚಗಳಂತಹ ಎಲ್ಲಾ ಅಗತ್ಯ ವೆಚ್ಚ (Cost) ಗಳನ್ನು ನಿಭಾಯಿಸಬಹುದು. ಒಂದೇ ಕೆಲಸದಲ್ಲಿ ನಾವು ಅನೇಕ ವರ್ಷ ಇರಲು ಸಾಧ್ಯವಾಗದೆ ಇರಬಹುದು. ಕೆಲ ಕಾರಣಕ್ಕೆ ನಾವು ಉದ್ಯೋಗ ಬದಲಾವಣೆ ಮಾಡ್ತಿದ್ದರೆ ಆಗ ಈ ಕಂಪನಿ ನೀಡುತ್ತಿದ್ದ ಕಾರ್ಪೊರೇಟ್ ಆರೋಗ್ಯ ವಿಮೆ ಸೌಲಭ್ಯವನ್ನು ನಾವು ಮುಂದುವರೆಸಬಹುದು ಎಂಬ ಪ್ರಶ್ನೆ ಮೂಡತ್ತದೆ. ಅದಕ್ಕೆ ಉತ್ತರ ಇಲ್ಲಿದೆ.

ದುಡ್ಡು ಮಾಡಲು ಹೆಣ್ಣಿಗೆ ಹಲವು ಹಾದಿ ಇದೀಗ ಭೂತಗಳಿಂದ ಉದ್ಯೋಗ ಶುರು ಹಚ್ಕೊಂಡು ನಾರಿ!

ಉದ್ಯೋಗ ಬದಲಿಸಿದ್ರೂ ಕಾರ್ಪೊರೇಟ್ ಆರೋಗ್ಯ ವಿಮೆ ಮುಂದುವರಿಸಬಹುದೇ? :  

ಕಂಪನಿ ಜೊತೆ ಮಾತನಾಡಿ : ನೀವು ಸದ್ಯ ಕೆಲಸ ಮಾಡ್ತಿರುವ ಕಂಪನಿ ಜೊತೆ ಮಾತನಾಡಬೇಕು. ಅವರು ನಿಮಗೆ ಕಾರ್ಪೊರೇಟ್ ಆರೋಗ್ಯ ವಿಮೆ ಮುಂದುವರಿಸಲು ಅವಕಾಶ ನೀಡುತ್ತಾರೆಯೇ ಎಂದು ಕೇಳಬೇಕು. ಕೆಲ ಕಂಪನಿಗಳು ಉದ್ಯೋಗ ತೊರೆದ ನಂತ್ರವೂ ಕೆಲ ಸಮಯ ತಮ್ಮ ಉದ್ಯೋಗಿಗಳಿಗೆ ಕಾರ್ಪೊರೇಟ್ ಆರೋಗ್ಯ ವಿಮೆ ಮುಂದುವರೆಸುತ್ತಾರೆ. ಹಾಗಾಗಿ ನೀವು ಈ ಬಗ್ಗೆ ಮೊದಲು ಕಂಪನಿಯಿಂದ ಮಾಹಿತಿ ಪಡೆಯಬೇಕು.

ಕಂಪನಿ ಇದಕ್ಕೆ ಒಪ್ಪಿಗೆ ನೀಡಿದಲ್ಲಿ ನೀವು ನಿಮ್ಮ ಪ್ರಸ್ತುತ ಯೋಜನೆಯ ನಿಯಮಗಳನ್ನು ಎಚ್ಚರಿಕೆಯಿಂದ ಓದಬೇಕು. ಕೆಲಸವನ್ನು ತೊರೆದ ನಂತರ ಯೋಜನೆಯನ್ನು ಮುಂದುವರಿಸುವುದನ್ನು ತಡೆಯುವ ಯಾವುದೇ ಷರತ್ತುಗಳಿವೆಯೇ ಎಂಬುದನ್ನು ನೋಡಿ ನಂತ್ರ ಮುಂದುವರೆಯಬೇಕು. ಮುಂದಿನ ನಿರ್ಧಾರ ತೆಗೆದುಕೊಳ್ಳುವುದಕ್ಕಿಂತ ಆದಷ್ಟು ಕಾರ್ಪೊರೇಟ್ ಆರೋಗ್ಯ ವಿಮೆ ಮುಂದುವರೆಸುವ ಪ್ರಯತ್ನ ನಡೆಸುವುದು ಉತ್ತಮ. ಇದ್ರಲ್ಲಿ ಅನೇಕ ಅನುಕೂಲವಿದೆ. ನಿಮ್ಮ ಜೊತೆ ನಿಮ್ಮ ಕುಟುಂಬಸ್ಥರಿಗೂ ಇದ್ರ ಲಾಭ ಸಿಗುತ್ತದೆ. 

150 ಇಂಟರ್‌ವ್ಯೂನಲ್ಲಿ ಫೇಲ್ ಆಗಿದ್ದ ವ್ಯಕ್ತಿ, ಈಗ ಬರೋಬ್ಬರಿ 65000 ಕೋಟಿ ಆಸ್ತಿಯ ಮಾಲೀಕ!

ಮುಂದಿನ ನಡೆ ಏನು?: ಒಂದ್ವೇಳೆ ಕಾರ್ಪೊರೇಟ್ ಆರೋಗ್ಯ ವಿಮೆಯನ್ನು ಮುಂದುವರಿಸಲು ನಿಮ್ಮ ಕಂಪನಿ ನಿಮಗೆ ಒಪ್ಪಿಗೆ ನೀಡಿಲ್ಲವೆಂದಾದ್ರೆ ನೀವು ವೈಯಕ್ತಿಕ ಆರೋಗ್ಯ ವಿಮೆಯನ್ನು ಖರೀದಿಸಬೇಕಾಗುತ್ತದೆ. ವೈಯಕ್ತಿಕ ಆರೋಗ್ಯ ವಿಮೆಯನ್ನು ಖರೀದಿಸುವುದು ದುಬಾರಿ ಆಯ್ಕೆ. ಹಾಗಂತ ಆರೋಗ್ಯ ವಿಮೆ ಇಲ್ಲದೆ ಇರೋದು ಮೂರ್ಖತನ. ಕೊರೊನಾ ಸಮಯದಲ್ಲಿಯೇ ಪರಿಸ್ಥಿತಿ ನಿಮಗೆ ಅರ್ಥವಾಗಿದೆ.  ನಿಮ್ಮ ಆರೋಗ್ಯ ಅಗತ್ಯಗಳನ್ನು ಪೂರೈಸುವ ಏಕೈಕ ಮಾರ್ಗ ಆರೋಗ್ಯ ವಿಮೆಯಾಗಿರುವ ಕಾರಣ ನೀವು ವೈಯಕ್ತಿಕ ಆರೋಗ್ಯ ವಿಮೆಯನ್ನಾದ್ರೂ ಖರೀದಿ ಮಾಡ್ಲೇಬೇಕು. ಇದನ್ನು ಖರೀದಿ ಮಾಡುವ ಮೊದಲು ನೀವು, ನಿಮ್ಮ ಬಳಿ ಅಷ್ಟು ಹಣವಿದ್ಯೆ ಎಂಬುದನ್ನು ಮೊದಲು ಪರಿಶೀಲಿಸಿ. 
ವೈಯಕ್ತಿಕ ಪಾಲಿಸಿಗೆ ನೀವು ಶಿಫ್ಟ್ ಆಗಲು ಬಯಸಿದ್ರೆ ಕೆಲಸವನ್ನು ತೊರೆಯುವ ಕನಿಷ್ಠ 45 ದಿನಗಳ ಮೊದಲು ನಿಮ್ಮ ವಿಮಾದಾರರಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ವೈಯಕ್ತಿಕ ಆರೋಗ್ಯ ವಿಮೆ ಬದಲು ಇದನ್ನು ಚೆಕ್ ಮಾಡಿ : ವೈಯಕ್ತಿಕ ಆರೋಗ್ಯ ವಿಮೆ ನಿಮಗೆ ದುಬಾರಿ ಎನ್ನಿಸಿದ್ರೆ ನೀವು ಸರ್ಕಾರಿ ಆರೋಗ್ಯ ವಿಮಾ ಯೋಜನೆ ಅಥವಾ ಸಮುದಾಯ ಆರೋಗ್ಯ ಕೇಂದ್ರದಂತಹ ಆರೋಗ್ಯ ವಿಮಾ ಯೋಜನೆ ಬಗ್ಗೆ ಮಾಹಿತಿ ಸಂಗ್ರಹಿಸಿ. ನಿಮ್ಮೆಲ್ಲ ಅಗತ್ಯಗಳನ್ನು ಇದು ಪೂರೈಸುತ್ತದೆ, ಇದು ನಿಮಗೆ ಸೂಕ್ತವಾಗಿದೆ ಎನ್ನಿಸಿದ್ರೆ ನೀವು ಅದನ್ನು ಖರೀದಿ ಮಾಡ್ಬಹುದು.  
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌