Earn Money: ರೀಲ್ಸ್ ಮಾಡೋ ಆಸಕ್ತಿ ಇದ್ರೆ ಹಣ ಗಳಿಸುವ ಮೂಲ ತಿಳಿದಿರಿ

By Suvarna NewsFirst Published Dec 21, 2022, 1:38 PM IST
Highlights

ಇನ್ಸ್ಟಾಗ್ರಾಮ್ ರೀಲ್ಸ್ ಅನೇಕರ ಆರ್ಥಿಕ ಸ್ಥಿತಿ ಸುಧಾರಿಸಿದೆ. ಇನ್ಸ್ಟಾಗ್ರಾಮ್ ಮೂಲಕ ಲಕ್ಷಾಂತರ ರೂಪಾಯಿ ಹಣ ಗಳಿಸುವವರಿದ್ದಾರೆ. ನೀವೂ ಇನ್ಸ್ಟಾದಲ್ಲಿ ಅಕೌಂಟ್ ಹೊಂದಿದ್ದು, ರೀಲ್ಸ್ ಮಾಡುವ ಪ್ಲಾನ್ ಇದ್ದರೆ ಅದ್ರಲ್ಲಿ ಹೇಗೆ ಹಣ ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ. 
 

ಸಾಮಾಜಿಕ ಜಾಲತಾಣ ಬಳಸುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಅರ್ಧಗಂಟೆಗೊಮ್ಮೆ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣ ವೀಕ್ಷಣೆ ಮಾಡದೆ ಹೋದ್ರೆ ಮನಸ್ಸಿಗೆ ನೆಮ್ಮದಿ ಇಲ್ಲ ಎನ್ನುವವರಿದ್ದಾರೆ. ಇಡೀ ದಿನ ಸಾಮಾಜಿಕ ಜಾಲತಾಣ ವೀಕ್ಷಿಸುತ್ತಾ ಕಾಲ ಕಳೆಯುವವರಿದ್ದಾರೆ. ಹಿಂದೆ ಟಿಕ್ ಟಾಕ್ ಹೆಚ್ಚು ಪ್ರಸಿದ್ಧಿ ಪಡೆದಿತ್ತು. ಭಾರತದಲ್ಲಿ ಇದು ಬ್ಯಾನ್ ಆಗ್ತಿದ್ದಂತೆ ಇನ್ಸ್ಟಾಗ್ರಾಮ್ ರೀಲ್ಸ್ ಗೆ ಬೇಡಿಕೆ ಹೆಚ್ಚಾಗಿದೆ.

ಜನರು ಟೈಂ ಪಾಸ್ ಮಾಡಲು ಇನ್ಸ್ಟಾಗ್ರಾಮ್ (Instagram) ರೀಲ್ಸ್ ಬೆಸ್ಟ್ ಆಯ್ಕೆಯಾಗಿದೆ. ಒಂದಾದ್ಮೇಲೆ ಒಂದು ರೀಲ್ಸ್ (Reels) ವೀಕ್ಷಿಸ್ತಾ ಹೋದ್ರೆ ಟೈಂ ಆಗಿದ್ದೆ ತಿಳಿಯೋದಿಲ್ಲ. ಬರೀ ಟೈಂ ಪಾಸ್ ಗೆ ಮಾತ್ರವಲ್ಲ ಈ ರೀಲ್ಸ್ ಮೂಲಕ ನೀವು ಸಾಕಷ್ಟು  ಹಣ (Money) ಗಳಿಸಬಹುದು. ಈಗಾಗಲೇ ಅನೇಕರು ರೀಲ್ಸ್ ಮೂಲಕ ಸಾಕಷ್ಟು ಹಣ ಗಳಿಸುತ್ತಿದ್ದಾರೆ. ನೀವೂ ರೀಲ್ಸ್ ಮಾಡ್ತಿದ್ದು ಅಥವಾ ರೀಲ್ಸ್ ಮಾಡಿ ಹಣ ಸಂಪಾದನೆ ಮಾಡುವಲ್ಲಿ ಆಸಕ್ತಿ ಹೊಂದಿದ್ದರೆ ನಾವಿಂದು ಹೇಗೆ ರೀಲ್ಸ್ ನಲ್ಲಿ ದುಡ್ಡು ಮಾಡಬಹುದು ಎಂಬುದನ್ನು ನಿಮಗೆ ಹೇಳ್ತೆವೆ.

Women Career: ಹಳ್ಳಿಯಲ್ಲಿರೋ ಮಹಿಳೆಯರಿಗೂ ಇದೆ ಹಣ ಸಂಪಾದಿಸುವ ಅವಕಾಶ

ರೀಲ್ಸ್ ಮೂಲಕ ಹಣ ಗಳಿಸೋದು ಹೇಗೆ?  : 
ಫಾಲೋವರ್ಸ್ (Followers) :
ರೀಲ್ಸ್ ನಲ್ಲಿ ಸ್ಪರ್ಧೆ ಹೆಚ್ಚಿದೆ. ಹಾಗಾಗಿ ನೀವು ಏನು ನೀಡ್ತೀರಿ ಎನ್ನುವುದು ಮುಖ್ಯವಾಗುತ್ತದೆ. ಹಾಗೆಯೇ ನೀವು ಸಕ್ರಿಯವಾಗಿರುವುದು ಮುಖ್ಯವಾಗುತ್ತದೆ. ರೀಲ್ಸ್ ಮೂಲಕ ಹಣ ಗಳಿಸಬೇಕೆಂದ್ರೆ ನಿಮ್ಮ ಫಾಲೋವರ್ಸ್ ಸಂಖ್ಯೆ ಹೆಚ್ಚಿರಬೇಕು. ಸೆಲೆಬ್ರಿಟಿಗಳಿಗೆ ಇದ್ರ ಬಗ್ಗೆ ಚಿಂತೆಯಿಲ್ಲ. ಯಾಕೆಂದ್ರೆ ತಾನಾಗಿಯೇ ಫಾಲೋವರ್ಸ್ ಆಗ್ತಾರೆ. ಆದ್ರೆ ಸಾಮಾನ್ಯ ಜನರಿಗೆ ಫಾಲೋವರ್ಸ್ ಪಡೆಯೋದು ಸುಲಭವಲ್ಲ. ಒಮ್ಮೆ ಫಾಲೋವರ್ಸ್ ಸಂಖ್ಯೆ ಸಾವಿರ ದಾಡುತ್ತಿದ್ದಂತೆ ನೀವು ಗಳಿಕೆ ಶುರು ಮಾಡಬಹುದು. ನಿಮ್ಮ ಫಾಲೋವರ್ಸ್ ಸಂಖ್ಯೆ ಹೆಚ್ಚಾದಂತೆ ನಿಮ್ಮ ಗಳಿಕೆ ಕೂಡ ಹೆಚ್ಚಾಗುತ್ತದೆ. ನೀವು ಒಂದು  ಸಾವಿರ ಫಾಲೋವರ್ಸ್ ಹೊಂದಿದ್ರೆ ಅನೇಕ ಬ್ರ್ಯಾಂಡ್‌ಗಳು ನಿಮಗೆ ಉಚಿತ ಉತ್ಪನ್ನಗಳನ್ನು ಮಾತ್ರ ನೀಡುತ್ತವೆ. ಕೆಲವು ಕಂಪನಿಗಳು ಪ್ರತಿ 1,000 ಫಾಲೋವರ್ಸ್ ಗೆ 10 ಡಾಲರ್ ಪಾವತಿಸಿದರೆ, ಕೆಲವು ಕಂಪನಿ 80 ಡಾಲರ್ ಗಿಂತಲೂ ಹೆಚ್ಚು ಪಾವತಿಸುತ್ತದೆ.  ಒಂದ್ವೇಳೆ ನೀವು 5ರಿಂದ 10 ಸಾವಿರ ಫಾಲೋವರ್ಸ್ ಹೊಂದಿದ್ದರೆ ಒಂದು ಪೋಸ್ಟ್ ಗೆ 6,531 ರೂಪಾಯಿ ಪಡೆಯಬಹುದು. ನೀವು 50,000ರಿಂದ 80,000 ಫಾಲೋವರ್ಸ್ ಹೊಂದಿದ್ದರೆ ಒಂದು ಪೋಸ್ಟ್ ಗೆ 14 ಸಾವಿರಕ್ಕಿಂತ ಹೆಚ್ಚು ಹಣ ಪಡೆಯಬಹುದು.

ವಿಡಿಯೋ ಜೊತೆ ಹ್ಯಾಶ್ ಟ್ಯಾಗ್ ಹಾಕಿ : ರೀಲ್ಸ್ ಅಥವಾ ನೀವು ಹಾಕುವ ಪೋಸ್ಟ್ ಹೆಚ್ಚು ಜನ ನೋಡ್ಬೇಕು ಅಂದ್ರೆ ನೀವು ಹಾಕುವ ಹ್ಯಾಶ್ ಟ್ಯಾಗ್ ಮುಖ್ಯ. ಪ್ರಸಿದ್ಧಿ ಪಡೆದ ಹ್ಯಾಶ್ ಟ್ಯಾಗ್ ಹೆಚ್ಚು ಜನರನ್ನು ತಲುಪುತ್ತದೆ. ವೀಡಿಯೊ ಗುಣಮಟ್ಟವೂ ಮುಖ್ಯವಾಗುತ್ತದೆ.  ರೀಲ್ಸ್ ಮಾಡುವ ಮೊದಲು ಯಾವ ರೀಲ್ಸ್ ಮಾಡಿದ್ರೆ ಒಳ್ಳೆಯದು ಎಂಬುದನ್ನು ನೋಡಿಕೊಳ್ಳಿ. ನೀವು ವಿಡಿಯೋವನ್ನು ಚೆನ್ನಾಗಿ ಮಾಡಿದಷ್ಟು ಅದನ್ನು ನೋಡುವವರ ಸಂಖ್ಯೆ ಹೆಚ್ಚಾಗುತ್ತದೆ. ಆಗ ಇನ್ಸ್ಟಾಗ್ರಾಮ್ ನಿಂದ ನಿಮ್ಮ ಗಳಿಕೆ ಹೆಚ್ಚಾಗುತ್ತದೆ.

ಕಂಪನಿ ಜೊತೆ ಹಣ ಗಳಿಸಿ : ಇನ್ಸ್ಟಾಗ್ರಾಮ್ ನಲ್ಲಿ ಅನೇಕ ಕಂಪನಿಗಳು ತಮ್ಮ ಉತ್ಪನ್ನ ಮಾರಾಟ ಮಾಡುವ ಜನರನ್ನು ಹುಡುಕುತ್ತಿರುತ್ತವೆ. ನೀವು ಅವರನ್ನು ಸಂಪರ್ಕಿಸಿ ಆಫರ್ ಮಾಡಬಹುದು. ನಿಮ್ಮ ಒಂದು ಪೋಸ್ಟ್ ಗೆ ಕಂಪನಿ ನಿಮ್ಮ ಫಾಲೋವರ್ಸ್ ನೋಡಿ ಹಣ ನೀಡುತ್ತದೆ. 

Women Welfare : ಸ್ವಾವಲಂಬಿಯಾಗಲು ಮಹಿಳೆಯರಿಗೆ ಸರಕಾರದ ನೆರವು

ನಿಮ್ಮ ಉತ್ಪನ್ನ ಮಾರಾಟ ಮಾಡಿಯೂ ಹಣ ಗಳಿಸಿ : ನೀವು ಇನ್ಸ್ಟಾಗ್ರಾಮ್ ನಲ್ಲಿ ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ನೀವು ಮಾರಾಟ ಮಾಡ್ತಿರುವ ವಸ್ತುಗಳು ಹಾಗೂ ಅದ್ರ ಬೆಲೆ ಹಾಕಿ ಜಾಹೀರಾತು ನೀಡಬಹುದು. ನೀವೇ ತಯಾರಿಸಿದ ವಸ್ತು ಗುಣಮಟ್ಟ ಚೆನ್ನಾಗಿದ್ದರೆ ನಿಮ್ಮ ಗಳಿಕೆ ಹೆಚ್ಚಾಗುತ್ತದೆ. 
 

click me!