
ದೇಶದಲ್ಲಿ ಕೋಟ್ಯಾಂತರ ಉದ್ಯೋಗಿಗಳು ಪಿಎಫ್ ಖಾತೆ (PF account) ಯನ್ನು ಹೊಂದಿದ್ದಾರೆ. ಪ್ರತಿ ತಿಂಗಳು ಉದ್ಯೋಗಿಗಳ ಸಂಬಳ (salary)ದ ಒಂದು ಭಾಗವನ್ನು ಕಡಿತಗೊಳಿಸಿ ಆ ಹಣವನ್ನು ಉದ್ಯೋಗಿಗಳ ಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ. ಎಲ್ಲ ಪಿಎಫ್ ಉದ್ಯೋಗಿಗಳಿಗೆ ಪಿಎಫ್ ಖಾತೆ ನಂಬರ್ ನೀಡಲಾಗಿರುತ್ತದೆ. ನಿವೃತ್ತಿ ಸಂದರ್ಭದಲ್ಲಿ ಈ ಹಣ ಉದ್ಯೋಗಿಗಳ ನೆರವಿಗೆ ಬರುತ್ತದೆ. ಪ್ರತಿ ತಿಂಗಳು ಸಂಬಳದಲ್ಲಿ ಹಣ ಕಡಿತವಾಗೋದು ಮಾತ್ರ ಉದ್ಯೋಗಗಿಳಿಗೆ ತಿಳಿದಿದೆ. ಆದ್ರೆ ಪಿಎಫ್ನಲ್ಲಿ ಎಷ್ಟು ಹಣ ಜಮಾ ಆಗಿದೆ ಎಂಬುದು ಅವರಿಗೆ ಪ್ರತಿ ತಿಂಗಳು ಸ್ಯಾಲರಿ ಸ್ಲಿಪ್ ನಂತೆ ಮಾಹಿತಿ ಸಿಗೋದಿಲ್ಲ. ಹಾಗಂತ ನೀವು ಪಿಎಫ್ ಖಾತೆಯಲ್ಲಿರುವ ಬ್ಯಾಲೆನ್ಸ್ (balance) ಚೆಕ್ ಮಾಡೋದು ಕಷ್ಟವೇನಲ್ಲ.
ದೇಶದ ಸಂಘಟಿತ ವಲಯದ ಎಲ್ಲಾ ಉದ್ಯೋಗಿಗಳ ವೇತನಕ್ಕೆ ಪಿಎಫ್ ನಿಯಮ ಅನ್ವಯವಾಗುತ್ತದೆ. ಹಾಗಾಗಿ ಪ್ರತಿಯೊಬ್ಬ ಉದ್ಯೋಗಿಯೂ ಪಿಎಫ್ ಬಗ್ಗೆ ಮಾಹಿತಿ ತಿಳಿದಿರಬೇಕು. ಉದ್ಯೋಗಿಯ ಸಂಬಳದ ಶೇಕಡಾ 12ರಷ್ಟು ಹಣ, ಪಿಎಫ್ ಖಾತೆಗೆ ಜಮಾ ಆಗುತ್ತದೆ. ಕಂಪನಿ ಅಷ್ಟೇ ಮೊತ್ತವನ್ನು ಜಮಾ ಮಾಡುತ್ತದೆ. ಇದಕ್ಕೆ ಸರ್ಕಾರ ಬಡ್ಡಿಯನ್ನೂ ನೀಡುತ್ತದೆ. ಒಬ್ಬ ವ್ಯಕ್ತಿ ಉದ್ಯೋಗ ಬದಲಿಸಿದಾಗ ಪಿಎಫ್ ಹಣವನ್ನು ವರ್ಗಾಯಿಸಿಕೊಳ್ಳಬಹುದು ಇಲ್ಲವೆ ವಿತ್ ಡ್ರಾ ಮಾಡಬಹುದು. ಇಷ್ಟೇ ಅಲ್ಲ, ಅಗತ್ಯವಿದ್ದಾಗ ಉದ್ಯೋಗಿ ತನ್ನ ಪಿಎಫ್ ಖಾತೆಯಲ್ಲಿರುವ ಹಣವನ್ನು ಸುಲಭವಾಗಿ ಹಿಂಪಡೆಯಬಹುದು. ಕೆಲ ಕಂಪನಿಗಳು ಪಿಎಫ್ನಲ್ಲಿ ಉದ್ಯೋಗಿಗಳಿಗೆ ಮೋಸ ಮಾಡುತ್ವೆ. ಉದ್ಯೋಗಿ ಸಂಬಳವನ್ನು ಮಾತ್ರ ಪಿಎಫ್ ಖಾತೆಗೆ ಜಮಾ ಮಾಡುತ್ತದೆಯೇ ವಿನಃ ಕಂಪನಿ ಮಾಡಬೇಕಾಗಿದ್ದ ಠೇವಣಿಯನ್ನು ಮಾಡೋದಿಲ್ಲ. ಇದ್ರಿಂದ ಉದ್ಯೋಗಿಗಳಿಗೆ ನಷ್ಟವಾಗುತ್ತದೆ.
ನಿಮ್ಮ ಕಂಪನಿ ನಿಮ್ಮ ಪಿಎಫ್ ಖಾತೆಗೆ ಹಣ ಜಮಾ ಮಾಡಿದೆಯೇ ಇಲ್ಲವೇ ಎಂಬುದನ್ನು ನೀವು ಪಿಎಫ್ ಖಾತೆಯಲ್ಲಿರುವ ಬ್ಯಾಲೆನ್ಸ್ ಚೆಕ್ ಮಾಡುವ ಮೂಲಕ ಪರೀಕ್ಷಿಸಬಹುದು. ಪಿಎಫ್ ಖಾತೆಯಲ್ಲಿರುವ ಬ್ಯಾಲೆನ್ಸ್ ಚೆಕ್ ಮಾಡೋದು ಸುಲಭ.
ಮುಕೇಶ್ ಅಂಬಾನಿ ಗ್ರಹಗತಿಗೆ ಏನಾಗಿದೆ? ಕೇವಲ 6 ಗಂಟೆಯಲ್ಲಿ 35 ಸಾವಿರ ಕೋಟಿ ರೂ ನಷ್ಟ
• ಇಪಿಎಫ್ಒ (EPFO) ವೆಬ್‌ಸೈಟ್ www.epfindia.gov.in ಗೆ ಲಾಗಿನ್ ಆಗ್ಬೇಕು. ನಂತ್ರ Our Services ಆಯ್ಕೆಯಲ್ಲಿರುವ For Employees ಮೇಲೆ ಕ್ಲಿಕ್ ಮಾಡಬೇಕು. ನಂತ್ರ Member Passbook ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಸಾರ್ವತ್ರಿಕ ಖಾತೆ ಸಂಖ್ಯೆ (UAN) ಮತ್ತು ಪಾಸ್‌ವರ್ಡ್ ಅನ್ನು ನಮೂದಿಸುವ ಮೂಲಕ ಪಿಎಫ್ ಪಾಸ್ಬುಕ್ಗೆ ಪ್ರವೇಶಪಡೆದು, ಅಲ್ಲಿ ಬ್ಯಾಲೆನ್ಸ್ ಚೆಕ್ ಮಾಡಿ.
• ನೀವು ಉಮಾಂಗ್ ಅಪ್ಲಿಕೇಶನ್ ಮೂಲಕವೂ ಪಿಎಫ್ ಚೆಕ್ ಮಾಡ್ಬಹುದು. ಮೊದಲು ಫೋನ್ ನಂಬರ್ ಸಹಾಯದಿಂದ ಉಮಾಂಗ್ ಅಪ್ಲಿಕೇಶ್ನಲ್ಲಿ ಹೆಸರು ನೋಂದಾಯಿಸಬೇಕು. ಇದ್ರಲ್ಲಿ ನೀವು ಕ್ಲೈಮ್ ಮಾಡುವ ಜೊತೆಗೆ ಬ್ಯಾಲೆನ್ಸ್ ಪರಿಶೀಲನೆ ನಡೆಸಬಹುದು. ಉಮಾಂಗ್ ಆ್ಯಪ್ ಅನ್ನು ಸರ್ಕಾರ 2019 ರಲ್ಲಿ ಪ್ರಾರಂಭಿಸಿದೆ. ಈ ಅಪ್ಲಿಕೇಶನ್‌ನ ಸಹಾಯದಿಂದ, ವಿವಿಧ ಸರ್ಕಾರಿ ಸೇವೆಗಳನ್ನು ಒಂದೇ ಸ್ಥಳದಲ್ಲಿ ಪಡೆಯಬಹುದು.
ಫ್ಲಿಪ್‌ಕಾರ್ಟ್‌ನಲ್ಲಿ AC ಮೇಲೆ ಶೇ.53 ಡಿಸ್ಕೌಂಟ್; 30ರಿಂದ 40 ಸಾವಿರಕ್ಕೆ 1.5 ಟನ್ ಸಾಮರ್ಥ್ಯದ
• ಯುಎಎನ್ (UAN) ಸೈಟ್‌ನಲ್ಲಿ ನೋಂದಾಯಿತ ಬಳಕೆದಾರರಾಗಿದ್ದರೆ, ನಿಮ್ಮ ಬ್ಯಾಲೆನ್ಸ್ ಪರಿಶೀಲಿಸಲು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಿಸ್ಡ್ ಕಾಲ್ ನೀಡಬೇಕು. ನೀವು 011-22901406 ಈ ನಂಬರ್ಗೆ ಮಿಸ್ಡ್ ಕಾಲ್ ನೀಡಿದ್ರೆ ನಿಮ್ಮ ಬ್ಯಾಲೆನ್ಸ್ ಮಾಹಿತಿ ಲಭ್ಯವಾಗುತ್ತದೆ.
• ನೀವು ಎಸ್ಎಂಎಸ್ ಮೂಲಕವೂ ಬ್ಯಾಲೆನ್ಸ್ ಚೆಕ್ ಮಾಡಬಹುದು. ನೀವು 7738299899 ಗೆ UAN EPFOHO ENG ಎಂದು ಮೆಸ್ಸೇಜ್ ಕಳುಹಿಸಬೇಕು. ನಿಮ್ಮ ಮಾತೃ ಭಾಷೆಯಲ್ಲಿಯೇ ಇದ್ರ ಮಾಹಿತಿಯನ್ನು ನೀವು ಪಡೆಯಬಹುದಾಗಿದೆ. ಹಾಗಾಗಿ ENG ಜಾಗದಲ್ಲಿ ನೀವು ಮಾತೃ ಭಾಷೆಯ ಮೂರು ಅಕ್ಷರವನ್ನು ನಮೂದಿಸಬೇಕು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.