ನಿಮ್ಮ UAN ಬಳಸಿ EPF ಬಾಕಿ ಪರಿಶೀಲಿಸಲು EPFO ಪೋರ್ಟಲ್, SMS, UMANG ಆಪ್ ಮತ್ತು ಮಿಸ್ಡ್ ಕಾಲ್ ಸೌಲಭ್ಯಗಳನ್ನು ಬಳಸಬಹುದು. ಈ ವಿಧಾನಗಳು ನಿಮ್ಮ PF ಬಾಕಿ ಮತ್ತು ಕೊಡುಗೆಗಳನ್ನು ತಿಳಿಯಲು ಸಹಾಯ ಮಾಡುತ್ತವೆ. ನಿಮ್ಮ UAN ಸಕ್ರಿಯವಾಗಿದ್ದು KYC ವಿವರಗಳೊಂದಿಗೆ ಲಿಂಕ್ ಆಗಿರಬೇಕು.
ನಿಮ್ಮ UAN (ಯುನಿವರ್ಸಲ್ ಅಕೌಂಟ್ ನಂಬರ್) ಬಳಸಿಕೊಂಡು ನಿಮ್ಮ EPF (ನೌಕರರ ಭವಿಷ್ಯ ನಿಧಿ) ಅಥವಾ ಭವಿಷ್ಯ ನಿಧಿಯ ಬಾಕಿಯನ್ನು ಪರಿಶೀಲಿಸಲು, ನೀವು EPFO ಪೋರ್ಟಲ್, SMS ಸೇವೆ ಅಥವಾ UMANG ಅಪ್ಲಿಕೇಶನ್ ಅನ್ನು ಬಳಸಬಹುದು. ಈ ವಿಧಾನಗಳು ನಿಮ್ಮ PF ಬಾಕಿ ಮತ್ತು ಕೊಡುಗೆ ವಿವರಗಳನ್ನು ಕಾಲ ಕಾಲಕ್ಕೆ ತಿಳಿದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.
ನಿಮ್ಮ ಇಪಿಎಫ್ ಬ್ಯಾಲೆನ್ಸ್ ಪರಿಶೀಲನೆ ಮಾಡೋದು ಹೇಗೆ?
1. ಇಪಿಎಫ್‌ಒ ಪೋರ್ಟಲ್ ಮೂಲಕ
ಇಪಿಎಫ್‌ಒ ಪೋರ್ಟಲ್‌ಗೆ ಭೇಟಿ ನೀಡಿ.
ಅಲ್ಲಿ 'For Employees' ಅನ್ನೋ ವಿಭಾಗ ಕ್ಲಿಕ್ ಮಾಡಿ, 'Member Passbook' ಸೆಲೆಕ್ಟ್ ಮಾಡಿ.
ನಿಮ್ಮ UAN, ಪಾಸ್‌ವರ್ಡ್ ಮತ್ತು CAPTCHA ಕೋಡ್ ಬಳಸಿ ಲಾಗಿನ್ ಮಾಡಿ.
ನೀವು ನೀಡಿರುವ ಹಣ ಮತ್ತು ಬಡ್ಡಿ ಸೇರಿದಂತೆ ನಿಮ್ಮ ಪಿಎಫ್ ಖಾತೆಯ ಬಾಕಿ ಮೊತ್ತವನ್ನು ತೋರಿಸುತ್ತದೆ.
2. ಎಸ್‌ಎಂಎಸ್ ಸೇವೆಯ ಮೂಲಕ ತಿಳಿದುಕೊಳ್ಳುವ ವ್ಯವಸ್ಥೆ
ನಿಮ್ಮ UAN ಸಕ್ರಿಯವಾಗಿದ್ದರೆ, ನೀವು 7738299899 ಗೆ SMS ಕಳುಹಿಸಬಹುದು.
SMS ಮಾದರಿ: EPFOHO UAN
ಉದಾಹರಣೆಗೆ, ಕನ್ನಡದಲ್ಲಿ ವಿವರಗಳನ್ನು ಪಡೆಯಲು, EPFOHO UAN KAN ಎಂದು ಕಳುಹಿಸಿ.
SMS ಸೌಲಭ್ಯವು ಬಹು ಭಾಷೆಗಳಲ್ಲಿ ಲಭ್ಯವಿದೆ.
3. UMANG ಅಪ್ಲಿಕೇಶನ್ ಮೂಲಕ
ಉಮಂಗ್ ಆಪ್ ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿ.
ಸೇವೆಗಳ ಪಟ್ಟಿಯಿಂದ "EPFO" ಆಯ್ಕೆಮಾಡಿ.
"Employee Centric Services" ಮತ್ತು ನಂತರ "View Passbook" ಆಯ್ಕೆಮಾಡಿ.
ನಂತರ ನೀವು ನಿಮ್ಮ ಪಿಎಫ್ ಬ್ಯಾಲೆನ್ಸ್ ವಿವರಗಳನ್ನು ವೀಕ್ಷಿಸಬಹುದು.
4.ಮಿಸ್ ಕಾಲ್ ಸೌಲಭ್ಯ
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 9966044425 ಗೆ ಮಿಸ್ಡ್ ಕಾಲ್ ನೀಡಿ.
ಎರಡು ಬಾರಿ ರಿಂಗ್ ಆದ ನಂತರ ಕರೆ ಸ್ವಯಂಚಾಲಿತವಾಗಿ ಕಡಿತಗೊಳ್ಳುತ್ತದೆ.
ನಿಮ್ಮ ಇಪಿಎಫ್ ಬ್ಯಾಲೆನ್ಸ್ ಮತ್ತು ಕೊನೆಯ ಬಾರಿಗೆ ಮಾಡಿದ ಹಣ ಸಂದಾಯದ ವಿವರಗಳೊಂದಿಗೆ ನೀವು ಎಸ್‌ಎಂಎಸ್ ಸ್ವೀಕರಿಸುತ್ತೀರಿ.
ನಿಮ್ಮ ಗಮನದಲ್ಲಿ ಇರಬೇಕಾದ ಅಂಶಗಳು
ನಿಮ್ಮ UAN ಸಕ್ರಿಯವಾಗಿರಬೇಕು ಮತ್ತು ನಿಮ್ಮ KYC ವಿವರಗಳೊಂದಿಗೆ (ಆಧಾರ್, ಪ್ಯಾನ್ ಮತ್ತು ಬ್ಯಾಂಕ್ ಖಾತೆ) ಲಿಂಕ್ ಆಗಿರಬೇಕು. SMS ಮತ್ತು ಮಿಸ್ಡ್ ಕಾಲ್ ಸೇವೆಗಳಿಗಾಗಿ ಬಳಸುವ ಮೊಬೈಲ್ ಸಂಖ್ಯೆಯು ನಿಮ್ಮ UAN ನಲ್ಲಿ ನೋಂದಾಯಿಸಲ್ಪಟ್ಟಿರಬೇಕು. ನಿಮ್ಮ PF ಬ್ಯಾಲೆನ್ಸ್ ಪರಿಶೀಲಿಸಲು ಸಹಾಯಕ್ಕಾಗಿ ನೀವು ನಿಮ್ಮ ಕಂಪನಿಯ ಎಚ್‌ಆರ್ ವಿಭಾಗವನ್ನು ಸಹ ಸಂಪರ್ಕಿಸಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.