
ಅಥ್ಲೆಟಿಕ್ ಗಳಿಗಾಗಿ ತಯಾರಾಗಿದ್ದ ಸ್ನೀಕರ್ಸ್ (Sneakers) ಜೆನ್ ಜೀ (Gen-Z)ಗಳ ಫ್ಯಾಷನ್ ಆಗಿ ಬದಲಾಗಿದೆ. ಬೆಂಜಮಿನ್ ಕಪೆಲುಶ್ನಿಕ್, ಅಲಿಯಾಸ್ ಬೆಂಜಮಿನ್ ಕಿಕ್ಸ್ ಹೆಸರಿನ ಬಾಲಕ, ವೆಬ್ ಸೈಟ್ ನಲ್ಲಿ ಅಪರೂಪದ ಸ್ನೀಕರ್ಸ್ ಮಾರಾಟ ಮಾಡಿ ತನ್ನ ಪಾಲಕರಿಗಿಂತ ಶ್ರೀಮಂತನಾಗಿದ್ದಾನೆ. ಈ ಸ್ನೀಕರ್ಸ್ ಎಷ್ಟು ಪ್ರಸಿದ್ಧಿ ಪಡೆದಿದೆ ಅಂದ್ರೆ ಅದನ್ನು ದೊಡ್ಡ ಪ್ರಮಾಣದಲ್ಲಿ ರೀಸೇಲ್ ಕೂಡ ಮಾಡಲಾಗುತ್ತೆ. ಅನೇಕ ಸೆಲಬ್ರಿಟಿಗಳು ಇದನ್ನೇ ಬ್ಯುಸಿನೆಸ್ ಮಾಡ್ಕೊಂಡಿದ್ದಾರೆ. ಸ್ನೀಕರ್ ಖರೀದಿ ಮಾಡೋದಲ್ದೆ ಅದನ್ನು ದೊಡ್ಡ ಮೊತ್ತಕ್ಕೆ ಮಾರಾಟ ಮಾಡ್ತಾರೆ.
ಸ್ನೀಕರ್ಸ್ ಹೆಡ್ಸ್ ಯಾರು? : ಹವ್ಯಾಸವಾಗಿ ಅಥವಾ ಬ್ಯುಸಿನೆಸ್ ಗಾಗಿ ಸ್ನೀಕರ್ಸ್ ಸಂಗ್ರಹಿಸುವ ಜನರನ್ನು ಸ್ನೀಕರ್ಸ್ ಹೆಡ್ಸ್ ಎಂದು ಕರೆಯುತ್ತಾರೆ. ಅವರು ಸೀಮಿತ ಆವೃತ್ತಿಯ ಸ್ನೀಕರ್ಗಳನ್ನು ಖರೀದಿಸ್ತಾರೆ. ಹಳೆಯ ರೆಟ್ರೊ ಶೈಲಿಯ ಸ್ನೀಕರ್ ಗಳನ್ನು ಆನ್ಲೈನ್ ನಲ್ಲಿ ಮಾರಾಟ ಮಾಡ್ತಾರೆ.
ಸ್ನೀಕರ್ಸ್ ರೀಸೇಲಿಂಗ್ ನಲ್ಲಿ ಯುಎಸ್ ಎ ಮೊದಲ ಸ್ಥಾನದಲ್ಲಿದೆ. ಪ್ರಸ್ತುತ ಸುಮಾರು 72.2 ಬಿಲಿಯನ್ ಡಾಲರ್ ಮೌಲ್ಯದ ಯುಎಸ್ ಸ್ನೀಕರ್ ಉದ್ಯಮ 2026 ರ ವೇಳೆಗೆ 100 ಬಿಲಿಯನ್ ಡಾಲರ್ ಗಡಿ ದಾಟಲಿದೆ. ಇನ್ನು 2030 ರ ವೇಳೆಗೆ ರೀಸೇಲಿಂಗ್ ಮಾರ್ಕೆಟ್ 2 ಬಿಲಿಯನ್ ಡಾಲರ್ ನಿಂದ 30 ಬಿಲಿಯನ್ ಡಾಲರ್ ಗೆ ಬೆಳೆಯುವ ಸಾಧ್ಯತೆ ದಟ್ಟವಾಗಿದೆ. ಮಹಿಳೆಯರ ಸ್ನೀಕರ್ಗಳ ಮಾರುಕಟ್ಟೆ ಪಾಲು 2014 ರಲ್ಲಿ ಶೇಕಡಾ 1.6 ರಷ್ಟಿತ್ತು. 2022 ರಲ್ಲಿ ಶೇಕಡಾ 42.7 ಕ್ಕೆ ಏರಿದೆ.
ನೀವೂ ಸ್ನೀಕರ್ಸ್ ರೀಸೇಲ್ ಬ್ಯುಸಿನೆಸ್ ಶುರು ಮಾಡ್ಬಹುದು : ಸ್ನೀಕರ್ಸ್ ರೀಸೇಲಿಂಗ್ ವ್ಯವಹಾರವನ್ನು ನೀವೂ ಶುರು ಮಾಡ್ಬಹುದು. ಇದಕ್ಕೆ ಸರಿಯಾದ ಸ್ನೀಕರ್ ಆಯ್ಕೆ ಹಾಗೂ ಸರಿಯಾದ ಸಮಯಕ್ಕೆ ಮಾರಾಟದ ಬಗ್ಗೆ ನಿಮಗೆ ಜ್ಞಾನ ಇರ್ಬೇಕು. ನೀವು ಆನ್ಲೈನ್ ಮೂಲಕ ಸ್ನೀಕರ್ಸ್ ರೀಸೇಲ್ ಮಾಡ್ಬಹುದು. ಅದಕ್ಕೆ ಸುಮಾರು 45 ರಿಂದ 80 ಸಾವಿರ ಖರ್ಚಾಗುತ್ತದೆ. ನೀವು ಹೊಸ, ಬಳಸಿದ ಸ್ನೀಕರ್ಸ್ ಎರಡನ್ನೂ ಮಾರಾಟ ಮಾಡ್ಬಹುದು. ಹೊಸ ಸ್ನೀಕರ್ಸ್ ಮಾರಾಟದಲ್ಲಿ ನಿಮಗೆ ಶೇಕಡಾ 30 ರಿಂದ 50ರಷ್ಟು ಲಾಭವಿದೆ. ಕೆಲ ಸ್ನೀಕರ್ಸ್ ನಲ್ಲಿ ನಿಮಗೆ ಶೇಕಡಾ 200ರವರೆಗೆ ಮಾರ್ಕ್ ಅಪ್ ಸಿಗಲಿದೆ. ನೀವು 100 ಡಾಲರ್ ಸ್ನೀಕರ್ಗಳ ಜೋಡಿಯ ಮೇಲೆ 200 ಡಾಲರ್ ನಿಂದ 300 ಡಾಲರ್ ಲಾಭವನ್ನು ಗಳಿಸಬಹುದು. ನಂಬಿಕಸ್ಥ ಮೂಲದಿಂದ ನೀವು ಸ್ನೀಕರ್ಸ್ ಖರೀದಿ ಮಾಡ್ಬೇಕು. ಬಳಸಿದ ಸ್ನೀಕರ್ಸ್ ಗಳನ್ನು ಸ್ವಚ್ಛಗೊಳಿಸಬೇಕು. ಮಾರ್ಕೆಟ್ ರೇಟ್ ಬಗ್ಗೆ ಅಧ್ಯಯನ ಮಾಡಿ, ನಂತ್ರ ಇ ಕಾಮರ್ಸ್ ಕಂಪನಿಗಳಲ್ಲಿ ಇಲ್ಲ ಸೋಶಿಯಲ್ ಮೀಡಿಯಾ ಮೂಲಕ ಸ್ನೀಕರ್ಸ್ ಮಾರಾಟ ಶುರು ಮಾಡ್ಬೇಕು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.