ಪತ್ರ ವ್ಯವಹಾರ ಈಗಿಲ್ಲ. ಆಗ ಪತ್ರ ಎಂದ್ರೆ ಅಂಚೇ ಕಚೇರಿ ಎಂದಾಗಿತ್ತು. ಆದ್ರೀಗ ಅಂಚೆ ಕಚೇರಿಯಲ್ಲಿ ಸಾಕಷ್ಟು ಸೇವೆ ಲಭ್ಯವಿದೆ. ಅದನ್ನು ಜನರಿಗೆ ತಲುಪಿಸಲು ಇಲಾಖೆ ಸಾಕಷ್ಟು ಪ್ರಯತ್ನ ನಡೆಸ್ತಿದೆ. ಫ್ರ್ಯಾಂಚೈಸಿ ಸೌಲಭ್ಯ ನೀಡಿ, ಜನರಿಗೆ ಗಳಿಕೆಗೆ ಅವಕಾಶ ಮಾಡಿಕೊಡ್ತಿದೆ.
ಅಂಚೆ ಕಚೇರಿ (Post Office). ದೇಶ (Country) ದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಸಂಸ್ಥೆಗಳಲ್ಲಿ ಒಂದು. ವಿದ್ಯಾವಂತ (Educated) ರಿಂದ ಹಿಡಿದು ಅನಕ್ಷರಸ್ತರವರೆಗೆ ಎಲ್ಲರಿಗೂ ಇದ್ರ ಸೇವೆ ಸಿಗುತ್ತದೆ. ಹಾಗೆಯೇ ನಗರ ಪ್ರದೇಶಗಳಿಂದ ಹಿಡಿದು ಗ್ರಾಮೀಣ ಪ್ರದೇಶದ ಮೂಲೆ ಮೂಲೆಗೆ ಅಂಚೆ ಕಚೇರಿ ಸೇವೆ ಲಭ್ಯವಿದೆ. ಹೂಡಿಕೆ ಮಾಡಲು ಹಾಗೂ ಉಳಿತಾಯ ಮಾಡಲು ಇದು ನಂಬಿಕಸ್ತ ಸಂಸ್ಥೆಯಾಗಿದೆ. ಬರೀ ಹೂಡಿಕೆಗೆ ಮಾತ್ರವಲ್ಲ ಈಗ ಅಂಚೆ ಕಚೇರಿಯಲ್ಲಿ ಅನೇಕ ಸೌಲಭ್ಯಗಳಿವೆ. ಇದ್ರ ಜೊತೆಗೆ ಪೋಸ್ಟ್ ಆಫೀಸ್ ನಮ್ಮ ಗಳಿಕೆಗೆ ಅವಕಾಶ ಮಾಡಿಕೊಡ್ತಿದೆ. ಬ್ಯುಸಿನೆಸ್ ಶುರು ಮಾಡ್ಬೇಕು ಎನ್ನುವವರು ಅಂಚೆ ಕಚೇರಿ ಜೊತೆ ಕೈ ಜೋಡಿಸಬಹುದು. ನೀವು ಅಂಚೆ ಕಚೇರಿ ಫ್ರ್ಯಾಂಚೈಸಿ ತೆರೆಯುವ ಮೂಲಕ ಆದಾಯ ಗಳಿಕೆ ಶುರು ಮಾಡಬಹುದು. ಇಂದು ನಾವು ಪೋಸ್ಟ್ ಆಫೀಸ್ ಫ್ರ್ಯಾಂಚೈಸಿ ಬಗ್ಗೆ ನಿಮಗೆ ಕೆಲ ಮಾಹಿತಿಯನ್ನು ನೀಡ್ತೇವೆ.
ದೇಶದಲ್ಲಿ ಸುಮಾರು 1.5 ಲಕ್ಷಕ್ಕೂ ಹೆಚ್ಚು ಅಂಚೆ ಕಚೇರಿ ಶಾಖೆಗಳಿವೆ. ಇದರ ಹೊರತಾಗಿಯೂ ಇನ್ನೂ ಹೆಚ್ಚಿನ ಹೊಸ ಶಾಖೆಗಳ ಅಗತ್ಯವಿದೆ. ಕೆಲ ಪ್ರದೇಶಗಳಲ್ಲಿ ಈಗ್ಲೂ ಅಂಚೆ ಕಚೇರಿ ಲಭ್ಯವಿಲ್ಲ. ಮತ್ತೆ ಕೆಲ ಪ್ರದೇಶಗಳಲ್ಲಿ ಅಂಚೆ ಕಚೇರಿ ಸೇವೆ ಪಡೆಯಲು ದೂರದ ಪ್ರದೇಶಕ್ಕೆ ಹೋಗ್ಬೇಕಾದ ಸ್ಥಿತಿಯಿದೆ. ಜನರಿಗೆ ಹತ್ತಿರದಲ್ಲಿಯೇ ಸೇವೆ ನೀಡಲು ಬಯಸುತ್ತಿರುವ ಅಂಚೆ ಇಲಾಖೆ, ಅಂಚೆ ಕಚೇರಿ ಫ್ರ್ಯಾಂಚೈಸಿ ಸೌಲಭ್ಯವನ್ನು ನೀಡ್ತಿದೆ. ಪೋಸ್ಟ್ ಆಫೀಸ್ ಎರಡು ರೀತಿಯ ಫ್ರ್ಯಾಂಚೈಸಿ ಮಾದರಿಗಳನ್ನು ಹೊಂದಿದೆ.
ಒಂದು ಫ್ರ್ಯಾಂಚೈಸಿ ಔಟ್ಲೆಟ್ ಆಗಿದ್ದರೆ ಮತ್ತೊಂದು ಪೋಸ್ಟಲ್ ಏಜೆಂಟ್. ಫ್ರ್ಯಾಂಚೈಸಿ ತೆಗೆದುಕೊಳ್ಳಲು ನೀವು ಬಯಸಿದ್ದರೆ ಅಂಚೆ ಕಚೇರಿಯಲ್ಲಿ ಸಿಗುವ ಫಾರ್ಮ್ ತೆಗೆದುಕೊಂಡು ಅದನ್ನು ಭರ್ತಿ ಮಾಡಿ ನೀಡಬೇಕಾಗುತ್ತದೆ.
LPG CYLINDER PRICE:ಗ್ರಾಹಕರಿಗೆ ಗುಡ್ ನ್ಯೂಸ್; ಎಲ್ ಪಿಜಿ ಸಿಲಿಂಡರ್ ದರ 135ರೂ. ಇಳಿಕೆ
ಅಂಚೆ ಕಚೇರಿ ಫ್ರ್ಯಾಂಚೈಸಿಗೆ ಬೇಕಾದ ಅರ್ಹತೆ :
ವಯಸ್ಸಿನ ನಿಯಮ : ಅಂಚೆ ಕಚೇರಿ ಫ್ರ್ಯಾಂಚೈಸಿ ತೆಗೆದುಕೊಳ್ಳುವ ವ್ಯಕ್ತಿಯ ವಯಸ್ಸು 18 ವರ್ಷಕ್ಕಿಂತ ಹೆಚ್ಚಿರಬೇಕು.
ರಾಷ್ಟ್ರೀಯತೆ : ಪೋಸ್ಟ್ ಆಫೀಸ್ ಫ್ರ್ಯಾಂಚೈಸ್ ಅನ್ನು ಭಾರತದ ಯಾವುದೇ ನಾಗರಿಕರು ತೆಗೆದುಕೊಳ್ಳಬಹುದು.
ಶೈಕ್ಷಣಿಕ ಅರ್ಹತೆ: ವ್ಯಕ್ತಿಯು ಮಾನ್ಯತೆ ಪಡೆದ ಶಾಲೆಯಿಂದ 8 ನೇ ತರಗತಿ ಉತ್ತೀರ್ಣರಾಗಿರಬೇಕು.
India GDP ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರವ ಆರ್ಥಿಕತೆಯಾಗಿ ಹೊರಹೊಮ್ಮಿದ ಭಾರತ!
ಅಂಚೆ ಕಚೇರಿ ಫ್ರ್ಯಾಂಚೈಸಿ ಮೂಲಕ ಗಳಿಕೆ ಹೇಗೆ ? : ನೀವು ಅಂಚೆ ಕಚೇರಿ ಮೂಲಕ ನೇರವಾಗಿ ಸಂಬಳ ರೂಪದಲ್ಲಿ ಹಣ ಪಡೆಯುವುದಿಲ್ಲ. ನೀವು ಮಾಡಿದ ಕೆಲಸಕ್ಕೆ ಕಮಿಷನ್ ರೂಪದಲ್ಲಿ ಹಣ ಸಿಗುತ್ತದೆ. ನೋಂದಾಯಿತ ವಸ್ತುಗಳ ಬುಕ್ಕಿಂಗ್ ನ ಪ್ರತಿ ವಹಿವಾಟಿಗೆ ಮೂರು ರೂಪಾಯಿ ಕಮಿಷನ್ ನಿಗದಿಪಡಿಸಲಾಗಿದೆ. ಸ್ಪೀಡ್ ಪೋಸ್ಟ್ ಲೇಖನಗಳನ್ನು ಬುಕಿಂಗ್ ಮಾಡಿದ್ರೆ ಪ್ರತಿ ವಹಿವಾಟಿನ ಮೇಲೆ ನಿಮಗೆ 5 ರೂಪಾಯಿ ಕಮಿಷನ್ ಸಿಗುತ್ತದೆ. ಮನಿ ಆರ್ಡರ್‌ಗಳಿಗೆ 100 ರೂಪಾಯಿಯಿಂದ 200 ರೂಪಾಯಿವರೆಗೆ ಕಮಿಷನ್ ಸಿಗುತ್ತದೆ. ಮನಿ ಆರ್ಡರ್‌ಗಳನ್ನು ಬುಕ್ ಮಾಡಿದರೆ 3.50 ರೂಪಾಯಿ ಕಮಿಷನ್ ಲಭ್ಯವಿದೆ. ಇದಲ್ಲದೆ 200 ರೂಪಾಯಿಗಿಂತ ಹೆಚ್ಚಿನ ಮನಿ ಆರ್ಡರ್‌ಗಳ ಪ್ರತಿ ವಹಿವಾಟಿಗೆ 5 ರೂಪಾಯಿ ಕಮಿಷನ್ ಸಿಗುತ್ತದೆ. ಫ್ರಾಂಚೈಸಿ ಏಜೆಂಟ್‌ಗಳು 100 ರೂಪಾಯಿಗಿಂತ ಕಡಿಮೆ ಹಣದ ಆರ್ಡರ್‌ಗಳನ್ನು ಬುಕ್ ಮಾಡುವುದಿಲ್ಲ. ರೆವಿನ್ಯೂ ಸ್ಟ್ಯಾಂಪ್‌ಗಳ ಮಾರಾಟ, ಕೇಂದ್ರೀಯ ನೇಮಕಾತಿ ಶುಲ್ಕ ಮುದ್ರೆಗಳು ಇತ್ಯಾದಿ ಸೇರಿದಂತೆ ಚಿಲ್ಲರೆ ಸೇವೆಗಳ ಮೂಲಕ ನೀವು ಅಂಚೆ ಇಲಾಖೆಯಿಂದ ಶೇಕಡಾ 40 ರಷ್ಟು ಆದಾಯವನ್ನು ಗಳಿಸಬಹುದು. ನೀವು ಮಾಸಿಕ 1000 ನೋಂದಾಯಿತ ಮತ್ತು ಸ್ಪೀಡ್ ಪೋಸ್ಟ್ ಬುಕಿಂಗ್ ಗುರಿ ಹೊಂದಿದ್ದು, ಅದನ್ನು ಮಾಡಿದ್ರೆ ಶೇಕಡಾ 20ರಷ್ಟು ಹೆಚ್ಚುವರಿ ಕಮಿಷನ್ ನಿಮಗೆ ಸಿಗುತ್ತದೆ.