ಹಿಂಡೆನ್‌ಬರ್ಗ್‌ ಎಫೆಕ್ಟ್‌, 8 ಲಕ್ಷ ಕೋಟಿ ನಷ್ಟ ಕಂಡ ಅದಾನಿ ಕಂಪನಿ ಷೇರುಗಳು!

Published : Feb 02, 2023, 03:09 PM ISTUpdated : Feb 02, 2023, 03:10 PM IST
ಹಿಂಡೆನ್‌ಬರ್ಗ್‌ ಎಫೆಕ್ಟ್‌, 8 ಲಕ್ಷ ಕೋಟಿ ನಷ್ಟ ಕಂಡ ಅದಾನಿ ಕಂಪನಿ ಷೇರುಗಳು!

ಸಾರಾಂಶ

ಅಮೆರಿಕದ ಶಾರ್ಟ್‌ ಸೆಲ್ಲರ್‌ ಹಾಗೂ ಸಂಶೋಧನಾ ಕಂಪನಿ ಹಿಂಡೆನ್‌ಬರ್ಗ್‌, ಅದಾನಿ ಕಂಪನಿಗಳ ಮೇಲೆ ತನ್ನ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲಿಯೇ ಸಾಕಷ್ಟು ಬೆಳವಣಿಗೆಗಳು ನಡೆದವಾದರೂ ಅದಾನಿ ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಕುಸಿತ ಕಾಣುವುದನ್ನು ಮುಂದುವರಿಸಿದ್ದವು. ಗುರುವಾರದ ವೇಳೆ ಅದಾನಿ ಕಂಪನಿಗಳ ಷೇರುಗಳ ನಷ್ಟ 100 ಬಿಲಿಯನ್‌ ಡಾಲರ್‌ ಗಡಿ ಮುಟ್ಟಿದೆ.  

ನವದೆಹಲಿ (ಫೆ.2): ಕಳೆದ ವಾರ ಅದಾನಿ ಗ್ರೂಪ್‌ ಕಂಪನಿಗಳ ಮೇಲೆ ಅಮೆರಿಕದ ಶಾರ್ಟ್‌ ಸೆಲ್ಲರ್ ಹಾಗೂ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್‌ ವಂಚನೆ ಹಾಗೂ ಮೋಸದ ಆರೋಪ ಮಾಡಿತ್ತು. ಅಲ್ಲಿಂದ ಇಲ್ಲಿಯವರೆಗೂ ಷೇರುಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ನಷ್ಟಗಳನ್ನು ಕಂಡಿತ್ತು. ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಷೇರುಗಳು ಕುಸಿತ ಕಾಣುತ್ತಿರುವ ಹಿನ್ನಲೆಯಲ್ಲಿ 20 ಸಾವಿರ ಕೋಟಿಗೂ ಹೆಚ್ಚಿನ ಫಾಲೋಆನ್‌ ಪಬ್ಲಿಕ್‌ ಆಫರ್‌ (ಎಫ್‌ಪಿಓ) ಜೊತೆ ಮುಂದುವರಿಯುವುದು ಸರಿಯಲ್ಲ ಎಂದಿದ್ದ ಅದಾನಿ ಗ್ರೂಪ್‌, ಇದನ್ನು ರದ್ದು ಮಾಡಿತ್ತು. ಸಂಪೂರ್ಣವಾಗಿ ಎಫ್‌ಪಿಓ ಮಾರಾಟವಾಗಿದ್ದರಿಂದ 20 ಸಾವಿರ ಕೋಟಿ ರೂಪಾಯಿಯನ್ನು ಹೂಡಿಕೆದಾರರಿಗೆ ವಾಪಸ್‌ ಮಾಡುವುದಾಗಿ ತಿಳಿಸಿತ್ತು. ಷೇರು ಕುಸಿತ ಕಾಣುತ್ತಿರುವ ಹಂತದಲ್ಲಿ ಎಫ್‌ಪಿಒ ಜೊತೆ ಮುಂದುವರಿಯುವುದು ನೈತಿಕವಾಗಿ ಸರಿಯಲ್ಲ ಎಂದು ಗೌತಮ್‌ ಅದಾನಿ ಕೂಡ ಹೇಳಿದ್ದಾರೆ. ಈ ನಡುವೆ ಕಂಪನಿಯ ಒಟ್ಟು ಷೇರುಗಳಿಂದಾದ ನಷ್ಟ 100 ಬಿಲಿಯನ್‌ ಡಾಲರ್‌ ಎಂದು ಹೇಳಲಾಗಿದೆ. ಭಾರತೀಯ ರೂಪಾಯಿಯಲ್ಲಿ 8 ಲಕ್ಷದ 19 ಸಾವಿರದ 134 ಕೋಟಿ ರೂ ನಷ್ಟ ಎಂದು ಹೇಳಲಾಗಿದೆ.



ಗುರುವಾರ ಮುಂಬೈನ ಬಿಎಸ್‌ಇ ಆರಂಭಿಕ ವಹಿವಾಟಿನಲ್ಲಿ ಅದಾನಿ ಸಮೂಹದ ಎಲ್ಲಾ 10 ಷೇರುಗಳು ಕೂಡ ಕುಸಿದವು. ಅದಾನಿ ಎಂಟರ್‌ಪ್ರೈಸಸ್‌, ಅದಾನಿ ಟ್ರಾನ್ಸ್‌ಮಿಷನ್‌ ಮತ್ತು ಅದಾನಿ ಪೋರ್ಟ್ಸ್‌ ನಷ್ಟವನ್ನು ಶೇ.10ರಷ್ಟು ಕಂಡಿದೆ. ಹಿಂಡೆನ್‌ಬರ್ಗ್‌ ವರದಿಯಿಂದ ಅದಾನಿ ಕಂಪನಿ ಷೇರುಗಳ ಮಾರಾಟ ವಿಪರೀತವಾಗಿ ಹೆಚ್ಚಾಗಿದೆ.

ಗುರುವಾರ ಮಾರುಕಟ್ಟೆಗಳು ಪ್ರಾರಂಭವಾಗುವ ಸ್ವಲ್ಪ ಸಮಯದ ಮೊದಲು ಬಿಡುಗಡೆಯಾದ ವೀಡಿಯೊದಲ್ಲಿ ಸಂಸ್ಥಾಪಕ ಗೌತಮ್ ಅದಾನಿ, ತಮ್ಮ ಕಂಪನಿಗಳ ಆರ್ಥಿಕ ಸ್ಥಿತಿಗತಿ ಬಗ್ಗೆ ಇರುವ ಕಳವಳಗಳನ್ನು ತಳ್ಳಿಹಾಕಿದರು. ಎಫ್‌ಪಿಓ ರದ್ದು ಮಾಡಿದ್ದರಿಂದ ಈಗಾಗಲೇ ನಡೆಯುತ್ತಿರುವ ಯೋಜನೆಗಳು ಹಾಗೂ ಭವಿಷ್ಯದ ಯೋಜನೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ. ಹೂಡಿಕೆದಾರರನ್ನು ರಕ್ಷಣೆ ಮಾಡುವ ಕಾರಣದಿಂದ ಎಫ್‌ಪಿಓ ಮಾರಾಟವನ್ನು ರದ್ದು ಮಾಡಿದ್ದೇವೆ. ಯಾಕೆಂದರೆ, ಪ್ರಸ್ತುತ ಮಾರುಕಟ್ಟೆಯಲ್ಲಿ ನಮ್ಮ ಷೇರುಗಳು ದೊಡ್ಡ ಮಟ್ಟದಲ್ಲಿ ಇಳಿಕೆ ಕಾಣುತ್ತಿವೆ. ಎಫ್‌ಪಿಓಗೆ ಈಗ ತಾನೆ ಸಹಿ ಹಾಕಿರುವ ಈ ಹೂಡಿಕೆದಾರರು ಇದರಿಂದ ದೊಡ್ಡ ಮಟ್ಟದ ನಷ್ಟ ಕಾಣುತ್ತಾರೆ. ಆ ಕಾರಣದಿಂದ ಎಫ್‌ಪಿಓ ರದ್ದು ಮಾಡಿದ್ದಾಗಿ ಹೇಳಿದ್ದಾರೆ.

ನನಗೆ ನನ್ನ ಹೂಡಿಕೆದಾರರ ಹಿತವೇ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಮತ್ತೆಲ್ಲವೂ ನಂತರದ ಸ್ಥಾನದಲ್ಲಿರುತ್ತದೆ ಎಂದು ವಿಡಿಯೋದಲ್ಲಿ ಅದಾನಿ ಹೇಳಿದ್ದಾರೆ. ಹೂಡಿಕೆದಾರರಿಗೆ ಆಗಬಹುದಾದ ನಷ್ಟವನ್ನು ಗಮನದಲ್ಲಿಟ್ಟುಕೊಂಡು ಮಾರಾಟವನ್ನು ಹಿಂಪಡೆದುಕೊಳ್ಳಲಾಗಿದೆ ಎಂದಿದ್ದಾರೆ.

ಅದಾನಿ ಗ್ರೂಪ್‌ ಈವರೆಗೂ 8.4 ಟ್ರಿಲಿಯನ್‌ ರೂಪಾಯಿ ಅಂದರೆ, 102 ಬಿಲಿಯನ್‌ ಯುಎಸ್‌ ಡಾಲರ್‌ ಹಣವನ್ನು ಷೇರುಮಾರುಕಟ್ಟೆಯಿಂದ ಕಳೆದುಕೊಂಡಿದೆ. ಅದಾನಿ ಗ್ರೂಪ್‌ನ ಒಟ್ಟು 10 ಲಿಸ್ಟೆಡ್ ಕಂಪನಿಗಳಿದ್ದು, ಮುಂಬೈ ಮಾರುಕಟ್ಟೆಯಲ್ಲಿ ಎಲ್ಲಾ 10 ಷೇರುಗಳು ಆರಂಭದಲ್ಲಿ ಕುಸಿದರೂ ಬಳಿಕ ಚೇತರಿಕೆ ಕಂಡಿದ್ದವು. ಅದಾನಿ ಎಂಟರ್‌ಪ್ರೈಸಸ್‌ ಕಂಪನಿಯ ಷೇರುಗಳು ಗುರುವಾರ ಒಂದೇ ದಿನ ಶೇ. 18ರಷ್ಟು ಕುಸಿದಿದೆ. 

ಅದಾನಿ ಗ್ರೂಪ್‌ ಮೇಲೆ ಆರೋಪ ಮಾಡಿದ ಹಿಂಡೆನ್‌ಬರ್ಗ್ ಶಾರ್ಟ್‌ ಸೆಲ್ಲರ್, ಏನಿದು ಶಾರ್ಟ್‌ ಸೆಲ್ಲಿಂಗ್‌?

ಈ ನಡುವೆ ಸಂಸತ್‌ ಅಧಿವೇಶನದಲ್ಲಿ ಹಿಂಡೆನ್‌ಬರ್ಗ್‌ ಮಾಡಿರುವ ಆರೋಪಗಳ ಬಗ್ಗೆ ಚರ್ಚೆ ನಡೆಸಲು ಸಮಯ ಮೀಸಲಿಡುವಂತೆ ಭಾರತದ ಸಂಸದರು ಆಗ್ರಹಿಸಿದ್ದಾರೆ. ಅದಾನಿ ಗ್ರೂಪ್‌ನಲ್ಲಿ ಸರ್ಕಾರಿ ಮಾಲೀಕತ್ವದ ಭಾರತೀಯ ಜೀವ ವಿಮಾ ನಿಗಮ ಹಾಗೂ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಕೂಡ ದೊಡ್ಡ ಹೂಡಿಕೆದಾರರಾಗಿದ್ದಾರೆ.

413 ಪುಟದ ಅದಾನಿ ಗ್ರೂಪ್‌ ತಿರುಗೇಟಿಗೆ ಹಿಂಡೆನ್‌ಬರ್ಗ್‌ ಪ್ರತಿಕ್ರಿಯೆ 'ಮೋಸವನ್ನು ರಾಷ್ಟ್ರೀಯತೆಯಿಂದ ಮರೆಮಾಚಲಾಗದು'!

ಸಣ್ಣ ಮಾರಾಟಗಾರರ ಆರೋಪಗಳಿಗೆ 413 ಪುಟಗಳ ಪ್ರತಿಕ್ರಿಯೆಯನ್ನು ಬಿಡುಗಡೆ ಮಾಡುವುದು ಸೇರಿದಂತೆ ಷೇರು ಮಾರಾಟದ ಮುನ್ನಡೆಯಲ್ಲಿ ಹೂಡಿಕೆದಾರರಿಗೆ ಧೈರ್ಯ ತುಂಬಲು ಅದಾನಿ ಪುನರಾವರ್ತಿತ ಪ್ರಯತ್ನಗಳನ್ನು ಮಾಡಿದರು. ಇದು ಸಾಲಿನಾದ್ಯಂತ ಫಾಲೋ-ಆನ್ ಕೊಡುಗೆಯನ್ನು ಪಡೆಯಲು ಸಹಾಯ ಮಾಡಲು ಭಾರತದ ಕೆಲವು ಪ್ರಮುಖ ಉದ್ಯಮಿಗಳನ್ನು ಸಹ ಸೇರಿಸಿದೆ. ಶಾರ್ಟ್‌ ಸೆಲ್ಲರ್‌ಗಳ ಆರೋಪಕ್ಕೆ ಅದಾನಿ ಗ್ರೂಪ್‌ 413 ಪುಟಗಳ ತಿರುಗೇಟಿ ನೀಡಿತ್ತು. ಆದರೆ, ಇದು ಕಂಪನಿಯ ಷೇರು ಕುಸಿತ ತಡೆಯಲು ಸಹಾಯ ಮಾಡಲಿಲ್ಲ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಈ ರಾಶಿ ಜನರು ಹೊಸ ವರ್ಷ 2026 ರಲ್ಲಿ ಲಕ್ಷಾಧಿಪತಿಗಳಾಗುತ್ತಾರೆ, ಬಂಪರ್ ಯಶಸ್ಸು, ಸಂತೋಷ ಮತ್ತು ಸಮೃದ್ಧಿ
2026 ರಲ್ಲಿ ಮೇಷ ರಾಶಿಯವರ ಆರ್ಥಿಕ ಸ್ಥಿತಿ ಹೇಗಿರುತ್ತದೆ? AI ಪ್ರಕಾರ ಲಾಭನಾ ಅಥವಾ ನಷ್ಟನಾ?