ಕೋಳಿ ಹಿಕ್ಕೆಯಿಂದ್ಲೇ ವಿದ್ಯುತ್ ತಯಾರಿಸಿದ ವ್ಯಕ್ತಿ!

By Suvarna News  |  First Published Aug 28, 2023, 1:34 PM IST

ಕೋಳಿ ಫಾರಂ ಹೊಂದಿದ್ದು, ಕೋಳಿ, ಮೊಟ್ಟೆ ಮಾರಾಟದಿಂದ ಮಾತ್ರ ಹಣ ಗಳಿಸೋದಲ್ಲ. ಹೊಸ ಹೊಸ ಆವಿಷ್ಕಾರ ಮಾಡಿದಾಗ ನಿಮ್ಮ ಗಳಿಕೆ ಜಾಸ್ತಿಯಾಗುತ್ತೆ. ಇಲ್ಲೊಬ್ಬ ವ್ಯಕ್ತಿ ವಿದ್ಯುತ್ ಇಲಾಖೆಯಿಂದ ಬೇಸತ್ತು ಮಾಡಿದ ಕೆಲಸ ಈಗ ಎಲ್ಲರಿಗೂ ಮಾದರಿಯಾಗಿದೆ. 
 


ಭಾರತದ ಕೆಲವು ಕಡೆ ಈಗ್ಲೂ ಸರಿಯಾದ ವಿದ್ಯುತ್ ಸಂಪರ್ಕವಿಲ್ಲ. ದೂರದ ಹಳ್ಳಿಗಳು ಎನ್ನುವ ಕಾರಣಕ್ಕೆ ಅಥವಾ ಬೇರೆ ಯಾವುದೋ ಕಾರಣಕ್ಕೆ ವಿದ್ಯುತ್ ಇಲಾಖೆ ಕರೆಂಟ್ ಸೌಲಭ್ಯ ನೀಡಿಲ್ಲ. ಇದ್ರಿಂದ ಕತ್ತಲೆಯಲ್ಲಿಯೇ ಜೀವನ ನಡೆಸುವ ಸ್ಥಿತಿ ಇದೆ. ಇದ್ರಲ್ಲಿ ಹರ್ಯಾಣದ ಜಜ್ಜರ್ ಕುಟುಂಬ ಕೂಡ ಸೇರಿದೆ, ಹರ್ಯಾಣದ ಜಜ್ಜರ್ ಕುಟುಂಬಕ್ಕೆ ವಿದ್ಯುತ್ ಸಂಪರ್ಕ ಸಿಕ್ಕಿರಲಿಲ್ಲ. ಇದರಿಂದ ಬೇಸತ್ತಿದ್ದ ಕುಟುಂಬಸ್ಥರು ಮಹತ್ವದ ನಿರ್ಧಾರಕ್ಕೆ ಬಂದಿದ್ದರು. ಸ್ವಂತ ವಿದ್ಯುತ್ ತಯಾರಿಸುವ ಯೋಜನೆ ರೂಪಿಸಿ ಅದರಲ್ಲಿ ಯಶಸ್ವಿಯಾಗಿದ್ದಾರೆ. ಬರೀ ವಿದ್ಯುತ್ ತಯಾರಿಸಿ ಬಳಕೆ ಮಾಡೋದು ಮಾತ್ರವಲ್ಲ ವಿದ್ಯುತ್ ಮಾರಾಟ ಮಾಡುವ ಕೆಲಸವನ್ನು ಕೂಡ ಮಾಡ್ತಿದ್ದಾರೆ. ಜಜ್ಜರ್ ಕುಟುಂಬಸ್ಥರು  ವಿದ್ಯುತ್ ತಯಾರಿಸುತ್ತಿರೋದು ಕೋಳಿಯ ಹಿಕ್ಕೆಗಳಿಂದ ಅಂದ್ರೆ ನೀವು ನಂಬ್ಲೇಬೇಕು. ಕೋಳಿ ಹಿಕ್ಕೆಯಿಂದ ವಿದ್ಯುತ್ ಉತ್ಪಾದನೆ ಆಗುವ ಜೊತೆಗೆ ಅದ್ರ ವಿಲೇವಾರಿ, ವಾಸನೆಯಿಂದ ಮುಕ್ತಿ ಸಿಕ್ಕಿದೆ. 

ಈ ವಿದ್ಯುತ್‌ (Electricity) ನಿಂದ ಮನೆ ಮತ್ತು ಹಟ್ಟಿಯ ಎಲ್ಲಾ ಕೆಲಸಗಳೂ ನಡೆಯುತ್ತಿವೆ. ಈಗ ಈ ಕುಟುಂಬ ಕೋಳಿ (Chicken) ಹಿಕ್ಕೆಗಳಿಂದ ಸುಮಾರು 50 ಕಿಲೋವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ. ಕೋಳಿ ಫಾರಂನಲ್ಲಿಯೇ , ವಿದ್ಯುತ್ ಉತ್ಪಾದನೆಗೆ ಅಗತ್ಯವಿರುವ ಸಲಕರಣೆಗಳನ್ನು ಅಳವಡಿಸಲಾಗಿದ್ದು, 24 ಗಂಟೆಗಳ ಕಾಲ ಇಲ್ಲಿ ವಿದ್ಯುತ್ ಉತ್ಪಾದನೆ ನಡೆಯುತ್ತಿರುತ್ತದೆ.

Latest Videos

undefined

ಜಂಟಿ ಗೃಹ ಸಾಲ ಪಡೆಯೋದು ನಿಜಕ್ಕೂ ಒಳ್ಳೆಯದಾ? ಅದ್ರಿಂದ ಏನೆಲ್ಲ ಪ್ರಯೋಜನಗಳಿವೆ?

ಜಜ್ಜರ್‌ನ ಸಿಲಾನಿ ಕೇಶೋ ಗ್ರಾಮದ ನಿವಾಸಿ ರಾಮೇಹರ್  ಎಂಬಾತ ವಿದ್ಯುತ್ ಸಂಪರ್ಕಕ್ಕಾಗಿ ಹಲವು ಬಾರಿ ವಿದ್ಯುತ್ ನಿಗಮಕ್ಕೆ ಭೇಟಿ ನೀಡಿದ್ದರು. ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಸಂಪರ್ಕ ಸಿಕ್ಕಿರಲಿಲ್ಲ. ಇದ್ರಿಂದ ಕೋಪಗೊಂಡ ರಾಮೆಹರ್ ತನ್ನ ಮನೆಗೆ ತಾನೇ ಕರೆಂಟ್ ತಯಾರಿಸುವ ನಿರ್ಧಾರಕ್ಕೆ ಬಂದರು. ಇದಕ್ಕಾಗಿ ಕೃಷಿ ಇಲಾಖೆಯ ನೆರವು ಪಡೆದ ರೈತ ರಾಮೇಹರ್, ತಮ್ಮ ಮನೆಯಲ್ಲಿ 20 ಸಾವಿರ ಕೋಳಿಗಳನ್ನು ಸಾಕಿದ್ರು. ರಾಮೇಹರ್ ಆರಂಭದಲ್ಲಿ ಕೋಳಿ ಹಿಕ್ಕೆಗಳಿಂದ ಗ್ಯಾಸ್ ತಯಾರಿಸಿದ್ರು. ಅದನ್ನು ತನ್ನ ಮನೆಯ ಅಗತ್ಯಕ್ಕೆ ಬಳಸಿಕೊಳ್ಳುತ್ತಿದ್ದರು. ನಂತ್ರ ವಿದ್ಯುತ್ ತಯಾರಿ ಶುರು ಮಾಡಿದ್ರು. ಈಗ ರಾಮಹೆರ್ ಮನೆ ಪ್ರವಾಸಿ ಕೇಂದ್ರದಂತಾಗಿದೆ. ಇಲ್ಲಿಗೆ ದೇಶ – ವಿದೇಶಗಳಿಂದ ಜನರು ಬರ್ತಾರೆ.

ರಾಮಹೆರ್ ಮೊದಲು ಭಾರತೀಯ ಸೇನೆಯಲ್ಲಿ ಕೆಲಸ ಮಾಡ್ತಿದ್ದರು. ಸುಬೇದಾರ್ ಹುದ್ದೆಯಿಂದ ನಿವೃತ್ತರಾದ ನಂತ್ರ ರಾಮೆಹರ್ ಕೋಳಿ ಫಾರಂ ತೆರೆದರು. ಆ ನಂತ್ರ ಕೋಳಿ ಹಿಕ್ಕೆಗಳಿಂದ ವಿದ್ಯುತ್ ಉತ್ಪಾದಿಸುವ ಸ್ಥಾವರವನ್ನು ಸ್ಥಾಪಿಸಿದರು. ಈ ಹಿಂದೆ 85 ಮತ್ತು 85 ಕ್ಯೂಬಿಕ್ ಮೀಟರ್ ನ ಎರಡು ಟ್ಯಾಂಕ್ ಗಳನ್ನು ತಯಾರಿಸಿ ಅದರಿಂದ ಗ್ಯಾಸ್ ತಯಾರಿಸುತ್ತಿದ್ದರು. ನಂತರ 50 ರಷ್ಟು ಗ್ಯಾಸ್ ಮತ್ತು 50 ರಷ್ಟು ಡೀಸೆಲ್‌ನೊಂದಿಗೆ ಜನರೇಟರ್ ಚಲಾಯಿಸಿ, 30 ಕಿಲೋವ್ಯಾಟ್ ವಿದ್ಯುತ್ ಉತ್ಪಾದಿಸಲು ಪ್ರಾರಂಭಿಸಿದ್ರು.

ಅದಾನಿ, ಅಂಬಾನಿ ಬಳಿಯೂ ಇಲ್ಲ; ಈ ಉದ್ಯಮಿ ಬಳಿ ಇದೆ ಭಾರತದ ಏಕೈಕ 12 ಕೋಟಿ ರೂ ಮೆಕ್ಲರೆನ್ ಕಾರು !

ರಾಮಹೆರ್ 2011ರಲ್ಲಿ 160 ಕ್ಯೂಬಿಕ್ ಮೀಟರ್ ಡೈಜೆಸ್ಟರ್ ಟ್ಯಾಂಕ್  ನಿರ್ಮಿಸಿದ್ರು. ಇದ್ರ ಸಹಾಯದಿಂದ 50 ಕಿಲೋವ್ಯಾಟ್ ವಿದ್ಯುತ್ ಉತ್ಪಾದಿಸಿದ್ರು. ಈಗ 240 ಕ್ಯೂಬಿಕ್ ಮೀಟರ್ ಟ್ಯಾಂಕ್ ಮಾಡಲಾಗಿದೆ. ರಾಮಹೆರ್ ಗೆ ಈಗ ವಿದ್ಯುತ್ ಇಲಾಖೆಯಿಂದ ವಿದ್ಯುತ್ ಪಡೆಯುವ ಅಗತ್ಯವಿಲ್ಲ. ಅವರು ಮನೆಯಲ್ಲೇ ಸಿದ್ಧವಾದ ವಿದ್ಯುತ್ ಬಳಕೆ ಮಾಡ್ತಿದ್ದಾರೆ.

ದಿನದ 24 ಗಂಟೆ ವಿದ್ಯುತ್ ತಯಾರಿ ಕೆಲಸ ನಡೆಯುತ್ತದೆ. ರಾಮಹೆರ್ ತಮ್ಮ ಮನೆಗೆ ವಿದ್ಯುತ್ ಬಳಕೆ ಮಾಡುವುದಲ್ಲದೆ ಅದನ್ನು ಮಾರಾಟ ಮಾಡುತ್ತಾರೆ. ತಂದೆಯಿಂದ ಪ್ರೇರಿತರಾದ ರಾಮಹೆನ್ ಮಕ್ಕಳು ಕೂಡ ಬೇರೆ ಹಳ್ಳಿಯಲ್ಲಿ ವಿದ್ಯುತ್ ಉತ್ಪಾದನೆ ಶುರು ಮಾಡಿದ್ದಾರೆ. ಕೋಳಿ ಹಿಕ್ಕೆಯಿಂದಲೂ ಸಿಎನ್‌ಜಿ ತಯಾರಿಸುವ ಪ್ರಯತ್ನ ಮಾಡಿದ್ದು, ಈ ಪ್ರಯತ್ನ ಇದುವರೆಗೂ ಸಫಲವಾಗಿಲ್ಲ ಎನ್ನುತ್ತಾರೆ ರಾಮೆಹರ್.
 

click me!