Deadline Extended:ಪೋರ್ಟಲ್ ನಲ್ಲಿ ತಾಂತ್ರಿಕ ಸಮಸ್ಯೆ, GST ಫೈಲಿಂಗ್ ಗಡುವು ವಿಸ್ತರಣೆ; GSTR-3B ಸಲ್ಲಿಕೆಗೆ ಮೇ 24ರ ತನಕ ಸಮಯ

Published : May 18, 2022, 01:48 PM IST
Deadline Extended:ಪೋರ್ಟಲ್ ನಲ್ಲಿ ತಾಂತ್ರಿಕ ಸಮಸ್ಯೆ, GST ಫೈಲಿಂಗ್ ಗಡುವು ವಿಸ್ತರಣೆ; GSTR-3B ಸಲ್ಲಿಕೆಗೆ ಮೇ 24ರ ತನಕ ಸಮಯ

ಸಾರಾಂಶ

*ತಾಂತ್ರಿಕ ದೋಷವನ್ನು ಆದಷ್ಟು ಶೀಘ್ರವಾಗಿ ಬಗೆಹರಿಸುವಂತೆ ಇನ್ಫೋಸಿಸ್ ಗೆ ಸರ್ಕಾರದ ಸೂಚನೆ  *ಏಪ್ರಿಲ್ ತಿಂಗಳ ಜಿಎಸ್ ಟಿ ಆರ್ -2ಬಿ ಹಾಗೂ ಜಿಎಸ್ ಟಿಆರ್ -3ಬಿ ಸಲ್ಲಿಕೆಗೆ ಸಮಸ್ಯೆ *ಗಡುವು ವಿಸ್ತರಣೆ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ನೀಡಿದ CBIC  

ನವದೆಹಲಿ (ಮೇ 18):  ತೆರಿಗೆದಾರರಿಗೆ ಸರಕು ಹಾಗೂ ಸೇವಾ  ತೆರಿಗೆ (GST) ಪೋರ್ಟಲ್ ನಲ್ಲಿ (Portal) ತಾಂತ್ರಿಕ ಸಮಸ್ಯೆಗಳು ( technical glitches) ಎದುರಾದ ಹಿನ್ನೆಲೆಯಲ್ಲಿ ಜಿಎಸ್ ಟಿ ಅರ್ಜಿ ನಮೂನೆಗಳಾದ ಜಿಎಸ್ ಟಿಆರ್ -2ಬಿ  (GSTR-2B) ಹಾಗೂ ಜಿಎಸ್ ಟಿಆರ್ -3ಬಿ  (GSTR-3B) ಸಲ್ಲಿಕೆ ಗಡುವನ್ನು ಮೇ 24ರ ತನಕ ವಿಸ್ತರಿಸಲು ಕೇಂದ್ರ ಸರ್ಕಾರ (Central Government) ನಿರ್ಧರಿಸಿದೆ. ಅಲ್ಲದೆ, ಪೋರ್ಟಲ್ ನಲ್ಲಿನ ತಾಂತ್ರಿಕ ದೋಷವನ್ನು ಆದಷ್ಟು ಶೀಘ್ರವಾಗಿ ಬಗೆಹರಿಸುವಂತೆ ಇನ್ಫೋಸಿಸ್ ಗೆ (Infosys) ಸರ್ಕಾರ ಸೂಚನೆ ಕೂಡ ನೀಡಿದೆ. ಜಿಎಸ್ ಟಿ ಪೋರ್ಟಲ್ ನಲ್ಲಿ ತಾಂತ್ರಿಕ ಸಮಸ್ಯೆಗಳಿರೋದನ್ನು ಒಪ್ಪಿಕೊಂಡು ಜಿಎಸ್ ಟಿ ಅರ್ಜಿಗಳ ಸಲ್ಲಿಕೆ ಗಡುವನ್ನು ವಿಸ್ತರಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರೋದಾಗಿ ಮಂಗಳವಾರ (ಮೇ 17)  ಮಾಹಿತಿ ನೀಡಿದ ಕೆಲವೇ ಗಂಟೆಗಳಲ್ಲಿ ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ.

'2022 ರ ಏಪ್ರಿಲ್ ತಿಂಗಳ ಜಿಎಸ್ ಟಿ ಆರ್ -3ಬಿ (GSTR-3B) ಅರ್ಜಿ ಸಲ್ಲಿಕೆ ಗಡುವನ್ನು 2022ರ ಮೇ 24ರ ತನಕ ವಿಸ್ತರಿಸಲಾಗಿದೆ' ಎಂದು ಪರೋಕ್ಷ ತೆರಿಗೆಗಳು ಹಾಗೂ ಸುಂಕಗಳ ಕೇಂದ್ರೀಯ ಮಂಡಳಿ  (CBIC) ಟ್ವಿಟರ್ ನಲ್ಲಿ (Twitter) ಮಾಹಿತಿ ನೀಡಿದೆ. '2022 ರ ಏಪ್ರಿಲ್ ತಿಂಗಳ ಜಿಎಸ್ ಟಿ ಆರ್ -2ಬಿ (GSTR-2B) ಸಿದ್ಧಪಡಿಸಲು ಹಾಗೂ ಜಿಎಸ್ ಟಿಆರ್ -3ಬಿಗೆ (GSTR-3B) ಸಂಬಂಧಿಸಿ ಪೋರ್ಟಲ್ ನಲ್ಲಿ ತೊಂದರೆಯಿರುವ ಬಗ್ಗೆ ಜಿಎಸ್ ಟಿಎನ್  (GST Network) ವರದಿ ಮಾಡಿದೆ ಎಂದು ಸಿಬಿಐಸಿ (CBIC) ಮಂಗಳವಾರ (ಮೇ 17) ಬೆಳಗ್ಗಿನ ಅವಧಿಯಲ್ಲಿ ಮಾಹಿತಿ ನೀಡಿತ್ತು.

ಮಾರ್ಚ್‌ನಲ್ಲಿ ಸಾರ್ವಕಾಲಿಕ ದಾಖಲೆಯ ಜಿಎಸ್‌ಟಿ ಸಂಗ್ರಹ!

ಜಿಎಸ್ ಟಿಆರ್ -2ಬಿ (GSTR-2B) ಅನ್ನೋದು ಅಟೋ ಡ್ರಾಫ್ಟ್ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ವರದಿಯಾಗಿದೆ.  ಜಿಎಸ್ ಟಿ (GST) ನೋಂದಾಯಿತ ಪ್ರತಿ ಸಂಸ್ಥೆಗೆ ಸಂಬಂಧಿಸಿ ಈ ವರದಿ ಲಭ್ಯವಿರುತ್ತದೆ. ಇದನ್ನು ಪೂರೈಕೆದಾರರು ತಮ್ಮ ಸಂಬಂಧಿತ ಮಾರಾಟ ರಿಟರ್ನ್ ಅರ್ಜಿ ಜಿಎಸ್ ಟಿ ಆರ್ -1ನಲ್ಲಿ ( GSTR-1) ನೀಡಿರುವ ಮಾಹಿತಿ ಆಧಾರದಲ್ಲಿ ಸಿದ್ಧವಾಗಿರುತ್ತದೆ. ಇನ್ನು ಜಿಎಸ್ ಟಿ ಆರ್ 2ಬಿ (GSTR-2B) ವರದಿ ಹೆಚ್ಚಾಗಿ ತೆರಿಗೆ ಪಾವತಿಸುವ ಉದ್ಯಮಿಗಳಿಗೆ ಪ್ರತಿ ತಿಂಗಳ 12ನೇ ದಿನಾಂಕದಂದು ಲಭಿಸುತ್ತದೆ. ಇದನ್ನು ಆಧರಿಸಿ ಉದ್ಯಮಿಗಳು ತೆರಿಗೆ ಪಾವತಿಸುವ ಹಾಗೂ ಜಿಎಸ್ ಟಿಆರ್ -3ಬಿ ಫೈಲ್ ಮಾಡುವ ಸಂದರ್ಭದಲ್ಲಿ ಐಟಿಸಿ (ITC) ಕ್ಲೈಮ್ (Claim) ಮಾಡಬಹುದು. ಜಿಎಸ್ ಟಿಆರ್ -3ಬಿ ಅನ್ನು ಪ್ರತಿ ತಿಂಗಳು  ವಿವಿಧ ವರ್ಗಗಳಿಗೆ ಸೇರಿದ ತೆರಿಗೆ ಪಾವತಿದಾರರು 20, 22 ಹಾಗೂ 24ರಂದು ಫೈಲ್ ಮಾಡಬಹುದು.

ಡೆಬಿಟ್ ಕಾರ್ಡ್‌ ಇಲ್ಲದೆಯೇ ಕ್ಯಾಶ್ ತೆಗೆಯಬಹುದು, ಇಲ್ಲಿವೆ ಸಿಂಪಲ್ ಟಿಪ್ಸ್

ಜಿಎಸ್ ಟಿ ಪೋರ್ಟಲ್ ನಿರ್ಮಾಣ ಹಾಗೂ ನಿರ್ವಹಣೆಗಾಗಿ ಕೇಂದ್ರ ಸರ್ಕಾರ  ಇನ್ಫೋಸಿಸ್ ಸಂಸ್ಥೆ ಜೊತೆಗೆ 2015ರಲ್ಲಿ 1,380ಕೋಟಿ ರೂ. ಒಪ್ಪಂದ ಮಾಡಿಕೊಂಡಿತ್ತು. ಆದ್ರೆ ಜಿಎಸ್ ಟಿ ಪೋರ್ಟಲ್ ನಲ್ಲಿ ತಾಂತ್ರಿಕ ದೋಷಗಳು ಆಗಾಗ ಎದುರಾಗುತ್ತಲೇ ಇದ್ದು, ಈ ಬಗ್ಗೆ ದೇಶಾದ್ಯಂತ ತೆರಿಗೆದಾರರು ದೂರುಗಳನ್ನು ನೀಡುತ್ತಲೇ ಬಂದಿದ್ದಾರೆ. 
2022ರ ಏಪ್ರಿಲ್ ನಲ್ಲಿ 1,67,540 ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹವಾಗಿದ್ದು,ಇದು ಸಾರ್ವಕಾಲಿಕ ಗರಿಷ್ಠ ಎಂದು ಹಣಕಾಸು ಸಚಿವಾಲಯ ತಿಳಿಸಿತ್ತು. ಅಲ್ಲದೆ, 2022ರ ಮಾರ್ಚ್ ಗೆ ಹೋಲಿಸಿದ್ರೆ  ಶೇ.18ರಷ್ಟು ಹೆಚ್ಚು ಜಿಎಸ್ ಟಿ ಸಂಗ್ರಹವಾಗಿತ್ತು. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!