GRT ಜ್ಯುವೆಲರ್ಸ್‌ನ ಡ್ಯಾಜ್ಲಿಂಗ್ ಡೈಮಂಡ್ ಫೆಸ್ಟಿವಲ್‌!

By Chethan Kumar  |  First Published Jan 2, 2025, 7:05 PM IST

ಶೇ.25ವರೆಗಿನ ವಿಶೇಷ ಕೊಡುಗೆ, ಪ್ಲಾಟಿನಂ ಆಭರಣಗಳ ಮೇಲೆ ಮೇಕಿಂಗ್ ಚಾರ್ಜ್ ಹಾಗೂ ವೇಸ್ಟೇಜ್‌ನಲ್ಲಿ ಶೇ.30ರವರೆಗೆ ರಿಯಾಯತಿ   ಸೇರಿದಂತೆ GRT ಜ್ಯುವಲರ್ಸ್‌ನ ಡ್ಯಾಜ್ಲಿಂಗ್ ಡೈಮಂಡ್ ಫೆಸ್ಟಿವಲ್‌ ಆಕರ್ಷಕ ಕೊಡುಗೆ ನೀಡುತ್ತಿದೆ.  


1964ರಲ್ಲಿ ಸ್ಥಾಪಿತವಾದ GRT ಜ್ಯುವಲರ್ಸ್ ಬಹಳ ಹಿಂದಿನಿಂದಲೂ ಶ್ರೇಷ್ಠತೆ ಮತ್ತು ಕುಶಲತೆಗೆ ಹೆಸರವಾಸಿ. ಈ ಆಭರಣಗಳು ನೀಡುವ ಉತ್ತಮ ಗುಣಟ್ಟದ ಚಿನ್ನ, ವಜ್ರಗಳು, ಪ್ಲಾಟಿನಂ, ಬೆಳ್ಳಿ ವಸ್ತುಗಳು ಹಾಗೂ ರತ್ನದ ಕಲ್ಲುಗಳಿಗಾಗಿ ಅನೇಕ ಕುಟುಂಬಗಳು ಹಲವು ತಲೆಮಾರುಗಳಿಂದ ಜಿಆರ್‌ಟಿಯನ್ನು ನಂಬುತ್ತಾರೆ. 60 ವರ್ಷಗಳ ಅಚಲವಾದ ಸಮರ್ಪಣೆಯೊಂದಿಗೆ GRT ಜ್ಯುವೆಲರ್ಸ್ ದಕ್ಷಿಣ ಭಾರತ ಹಾಗೂ ಸಿಂಗಾಪುರದೆಲ್ಲೆಡೆ ಆಭರಣಗಳಲ್ಲಿ ಮುಖ್ಯ ಹೆಸರಾಗಿ ಹೊರಹೊಮ್ಮಿದೆ. 

ಬ್ರ್ಯಾಂಡ್‌ನ ಪರಂಪರೆಯು ಈ ಡ್ಯಾಜ್ಲಿಂಗ್ ಡೈಮಂಡ್ ಫೆಸ್ಟಿವಲ್‌ನ ಪರಿಚಯದೊಂದಿಗೆ ಪ್ರಕಾಶಮಾನವಾಗಿ ಹೊಳೆಯುತ್ತಿದೆ. ಮತ್ತಿದು ಭವ್ಯತೆ ಹಾಗೂ ವಿನ್ಯಾಸಗಳ ಆಚರಣೆಯೂ ಹೌದು. ಈ ಅಭಿಯಾನವು ಗ್ರಾಹಕರನ್ನು ಸೂಕ್ಷ್ಮವಾಗಿ ಮಾಡಲ್ಪಟ್ಟಿರುವ ವಜ್ರದ ಆಭರಣಗಳ ಅದ್ಭತ ಸಂಗ್ರಹವನ್ನು ಅನ್ವೇಷಿಸಲು ಆಹ್ವಾನಿಸುತ್ತದೆ. ವರ್ಜ ಹಾಗೂ ಕತ್ತರಿಸಿದ ವಜ್ರದ ಮೌಲ್ಯದಲ್ಲಿ (ಸಾಲಿಟೇರ್‌ಗಳನ್ನು ಹೊರತುಪಡಿಸಿ) ಶೇ.25ವರೆಗಿನ ವಿಶೇಷ ಕೊಡುಗೆಗಳನ್ನು ಹೊಂದಿದೆ. ಪ್ಲಾಟಿನಂ ಆಭರಣಗಳ ಮೇಲೆ ಮೇಕಿಂಗ್ ಚಾರ್ಜ್ ಹಾಗೂ ವೇಸ್ಟೇಜ್‌ನಲ್ಲಿ ಶೇ.30ರವರೆಗೆ ರಿಯಾಯತಿ ನೀಡುತ್ತದೆ. ಈ ಹಬ್ಬವು GRTಯ ಕಡಿಮೆ ತೂಕದ ವಜ್ರದ ಆಭರಣವಾದ ಒರಿಯಾನಾವನ್ನು ಒಳಗೊಂಡಿದೆ. 

Tap to resize

Latest Videos

GRT ಜ್ಯುವೆಲರ್ಸ್‌ನಲ್ಲಿ ಪ್ರತಿಯೊಂದೂ ವಜ್ರದ ಆಭರಣವು GRT ಅಶ್ಯೂರೆನ್ಸ್ ಅನ್ನು ಹೊಂದಿದೆ. ಇದರ ಪ್ರಕ್ರಿಯೆಯ ಉದ್ದಕ್ಕೂ ಸಂಪೂರ್ಣ ಪಾರದರ್ಶಕತೆಯನ್ನು ನೀಡುತ್ತದೆ. ಪ್ರತಿ ಆಭರಣವು ಪ್ರಮಾಣೀಕೃತ ಗುಣಮಟ್ಟದ ವಜ್ರಗಳು, ನಿಖರವಾದ ತೂಕ-ಆಧಾರಿತ ಬೆಲೆ, ಜೀವಿತಾವಧಿ ನಿರ್ವಹಣೆ, ಸ್ಪಷ್ಟ ಬೆಲೆ, ಕ್ಯಾರೆಟ್ ಭರವಸೆ, ನೈತಿಕ ಮೂಲದಿಂದ ಬಂದಿರುವ ವಜ್ರಗಳು, HUID ಮಾರ್ಕ್ ಮತ್ತು ಖಾತರಿಯುಳ್ಳ ಮರು ಖರೀದಿಯನ್ನು ಒಳಗೊಂಡಿದೆ. ಈ ಸಮಗ್ರ ಭರವಸೆಯು ಗ್ರಾಹಕರು ತಾವು ಯಾವುದರಲ್ಲಿ ಹೂಡಿಕೆಯನ್ನು ಮಾಡುತ್ತಿದ್ದೇವೆ ಎಂಬುದರ ಮೇಲೆ ಸಂಪೂರ್ಣ ಮಾಹಿತಿ ಪಡೆದಿರುವುದನ್ನು ಖಚಿತಪಡಿಸುತ್ತದೆ.
 

click me!