10 ಸಾವಿರದ SIP ಮಾಡ್ತಾ ಇದ್ರೆ ನೀವು ಕೋಟ್ಯಧಿಪತಿ ಆಗೋದು ಯಾವಾಗ? ಇಲ್ಲಿದೆ ಲೆಕ್ಕಾಚಾರ

By Santosh Naik  |  First Published Jan 2, 2025, 6:58 PM IST

ಮ್ಯೂಚುಯಲ್ ಫಂಡ್ SIP ಮೂಲಕ ಕೋಟ್ಯಾಧಿಪತಿ ಆಗೋದು ಈಗ ಸುಲಭ. ಮಾಸಿಕ ಎಷ್ಟು ಹೂಡಿಕೆ 30 ವರ್ಷಗಳಲ್ಲಿ 7 ಕೋಟಿಗೂ ಹೆಚ್ಚು ಗಳಿಸಲು ಸಹಾಯ ಮಾಡುತ್ತೆ ಅಂತ ತಿಳ್ಕೊಳ್ಳಿ. 20 ವರ್ಷಗಳಲ್ಲೂ ಕೋಟ್ಯಾಧಿಪತಿ ಆಗಬಹುದು!


ಬೆಂಗಳೂರು (ಜ.2): ಷೇರು ಮಾರುಕಟ್ಟೆಯಲ್ಲಿ ಹಣ ಹೂಡೋದು ಅಪಾಯಕಾರಿ ಅಂತ ಅನೇಕರು ಭಾವಿಸ್ತಾರೆ. ಅಂಥವರಿಗೆ ಮ್ಯೂಚುಯಲ್ ಫಂಡ್ ಹೂಡಿಕೆ ಬೆಸ್ಟ್. ಮ್ಯೂಚುಯಲ್ ಫಂಡ್‌ನಲ್ಲಿ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ (SIP) ಈಗ ತುಂಬಾ ಫೇಮಸ್. ಮಾರುಕಟ್ಟೆ ರಿಸ್ಕ್‌ ಎಂದು ತಿಳಿದವರು, SIP ಮೂಲಕ ಹೂಡಿಕೆ ಮಾಡಿ ಬ್ಯಾಂಕ್‌ ಎಫ್‌ಡಿಗಿಂತ ಹೆಚ್ಚಿನ ರಿಟರ್ನ್ಸ್‌ ಪಡೆದುಕೊಳ್ಳುತ್ತಿದ್ದಾರೆ. ಬ್ಯಾಂಕ್‌ ಹಾಗೂ ಪೋಸ್ಟ್‌ ಆಫೀಸ್‌ನ ಗ್ಯಾರಂಟೀಡ್‌ ಎಫ್‌ಡಿಗಿಂತ ಹೆಚ್ಚಾಗಿ ರಿಟರ್ನ್ಸ್‌ ಬರಬೇಕು ಅಂತಾ ನಿರೀಕ್ಷೆ ಮಾಡುವವರಾಗಿದ್ದಾರೆ. ಈ ಸುದ್ದಿ ಓದಲೇಬೇಕು. ಪ್ರತಿತಿಂಗಳು ಎಷ್ ಹಣವನ್ನು  SIP ಮಾಡಿದಲ್ಲಿ ನೀವು ಯಾವಾಗ ಕೋಟ್ಯಧಿಪತಿಯಾಗಬಹದು ಅನ್ನೋ ವಿವರ ಇಲ್ಲಿದೆ.

10 ಸಾವಿರ ರೂಪಾಯಿ ಮಾಸಿಕ SIP ನಿಮ್ಮನ್ನ ಕೋಟ್ಯಾಧಿಪತಿ ಮಾಡುತ್ತೆ: ಒಂದು ಒಳ್ಳೆ ಮ್ಯೂಚುಯಲ್ ಫಂಡ್‌ನ SIPನಲ್ಲಿ ನೀವು ಪ್ರತಿ ತಿಂಗಳು 10 ಸಾವಿರ ರೂಪಾಯಿ ಹೂಡಿಕೆ ಮಾಡಿದ್ರೆ, 30 ವರ್ಷಗಳಲ್ಲಿ ನಿಮ್ಮ ಒಟ್ಟು ಹೂಡಿಕೆ 36 ಲಕ್ಷ ರೂಪಾಯಿ ಆಗುತ್ತೆ. ವರ್ಷಕ್ಕೆ ಸರಾಸರಿ 15% ಲಾಭ ಸಿಕ್ತು ಅಂತ ಅಂದುಕೊಂಡರೂ, ಮೂವತ್ತು ವರ್ಷಗಳ ನಂತರ ನಿಮ್ಮ ಹಣ 7 ಕೋಟಿ ರೂಪಾಯಿಗಿಂತ ಹೆಚ್ಚಾಗುತ್ತೆ.

Tap to resize

Latest Videos

20 ವರ್ಷಗಳಲ್ಲಿ 1.50 ಕೋಟಿ ಗಳಿಸಬಹುದು: ನೀವು 20 ವರ್ಷಗಳ ಕಾಲ ಪ್ರತಿ ತಿಂಗಳು 10 ಸಾವಿರ ರೂಪಾಯಿ SIPನಲ್ಲಿ ಹೂಡಿಕೆ ಮಾಡಿದ್ರೆ ಮತ್ತು ಕನಿಷ್ಠ 15% ವಾರ್ಷಿಕ ಲಾಭ ಸಿಕ್ತು ಅಂತ ಅನ್ಕೊಂಡ್ರೆ, ಇಪ್ಪತ್ತು ವರ್ಷಗಳಲ್ಲಿ ನಿಮ್ಮ ಒಟ್ಟು ಹೂಡಿಕೆ 24 ಲಕ್ಷ ರೂಪಾಯಿ ಆಗುತ್ತೆ. ಕಾಂಪೌಂಡಿಂಗ್ ಬಡ್ಡಿಯಿಂದಾಗಿ, ಮೆಚ್ಯುರಿಟಿ ಸಮಯದಲ್ಲಿ ನಿಮಗೆ 1,51,59,550 ರೂಪಾಯಿ ಸಿಗುತ್ತೆ. ಅಂದ್ರೆ SIP ಹೂಡಿಕೆಯಿಂದ 20 ವರ್ಷಗಳಲ್ಲೂ ಕೋಟ್ಯಾಧಿಪತಿ ಆಗಬಹುದು.

SIP ಅಂದ್ರೇನು?: SIP ಅಂದ್ರೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್. ಪ್ರತಿ ತಿಂಗಳು ಮ್ಯೂಚುಯಲ್ ಫಂಡ್‌ನಲ್ಲಿ ಹೂಡಿಕೆ ಮಾಡೋ ಒಂದು ನಿಗದಿತ ಮೊತ್ತ. ಇದು ಕನಿಷ್ಠ 100, 500 ರೂಪಾಯಿಗಳಿಂದ ಶುರುವಾಗುತ್ತೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಹೆಚ್ಚು ಹಣ ಹೂಡಬಹುದು. ನಿಮ್ಮ ಹತ್ರ ದೊಡ್ಡ ಮೊತ್ತ ಇದ್ರೆ, ಒಂದೇ ಸಲ ಅಂದ್ರೆ ಲಂಪ್‌ಸಮ್ ಇನ್ವೆಸ್ಟ್‌ಮೆಂಟ್ ಕೂಡ ಮಾಡಬಹುದು. ಆದ್ರೆ ಅದು SIP ಅಡಿಯಲ್ಲಿ ಬರಲ್ಲ.

ರಿಲಯನ್ಸ್‌ ಜಿಯೋ ಐಪಿಓ ಬರೋದು ಯಾವಾಗ? ಹೊರಬಿತ್ತು ಬಿಗ್‌ ಅಪ್‌ಡೇಟ್‌

SIPನ ಲಾಭಗಳೇನು?: SIPನಲ್ಲಿ ಪ್ರತಿ ತಿಂಗಳು ಒಂದು ನಿಗದಿತ ಮೊತ್ತ ಮ್ಯೂಚುಯಲ್ ಫಂಡ್‌ಗೆ ಹೋಗುತ್ತೆ. ಹೀಗಾಗಿ ಮಾರ್ಕೆಟ್ ಏರಿಳಿತಗಳೆರಡರ ಲಾಭ ನಿಮಗೆ ಸಿಗುತ್ತೆ. ಒಂದೇ ಸಲ ಹೂಡಿಕೆ ಮಾಡಿದ್ರೆ, ಮಾರ್ಕೆಟ್ ಏರಿಕೆಯ ಲಾಭ ಮಾತ್ರ ಸಿಗುತ್ತೆ. ಉದಾಹರಣೆಗೆ, ನೀವು 1 ಸಾವಿರ ರೂಪಾಯಿ SIP ಮಾಡಿದ್ದೀರಿ ಅಂತ ಇಟ್ಕೊಳ್ಳಿ, ಅದು ಪ್ರತಿ ತಿಂಗಳ 5ನೇ ತಾರೀಖು ಹೋಗುತ್ತೆ. ಆ ಸಮಯದಲ್ಲಿ ಮಾರ್ಕೆಟ್ ಕುಸಿತ ಕಂಡಿದ್ರೆ, ನಿಮಗೆ ಹೆಚ್ಚು ಯೂನಿಟ್‌ಗಳು ಸಿಗುತ್ತವೆ, ಅದು ಮುಂದೆ ನಿಮಗೆ ಲಾಭದಾಯಕವಾಗಿರುತ್ತೆ.

ಹೊಸ ವರ್ಷದ ಕೊನೆಯಲ್ಲಿ ಟೆಲಿಕಾಂ ದರ ಶೇ. 15ರಷ್ಟು ಏರಿಕೆ ಸಾಧ್ಯತೆ; ಫೋನ್‌ ರಿಚಾರ್ಜ್‌ ಮತ್ತಷ್ಟು ದುಬಾರಿ!

 

click me!