
ನವದೆಹಲಿ (ಜು.10) ಹಬ್ಬಗಳ ಋತು ಆರಂಭಗೊಳ್ಳಲು ಕೆಲ ದಿನಗಳು ಮಾತ್ರ ಬಾಕಿ. ಗಣೇಶ, ಗೌರಿ ಸೇರಿದಂತೆ ಸಾಲು ಸಾಲು ಹಬ್ಬಗಳು ಆಗಮಿಸುತ್ತಿದೆ. ಇದೀಗ ಹಬ್ಬಕ್ಕೂ ಮೊದಲೇ ಸರ್ಕಾರಿ ಉದ್ಯೋಗಿಗಳು, ಪಿಂಚಣಿದಾರರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಸರ್ಕಾರಿ ಉದ್ಯೋಗಿಗಳು, ಪಿಂಚಣಿದಾರರ ವೇತನ ಶೇಕಡಾ 30 ರಿಂದ 34ರಷ್ಟು ಏರಿಕೆ ಮಾಡಲು ಸರ್ಕಾರ ಮುಂದಾಗಿದೆ. 8ನೇ ವೇತನ ಆಯೋಗ ಜಾರಿಯಾಗುತ್ತಿದೆ. ಈ ಮೂಲಕ ವೇತನ ಗಣನೀಯವಾಗಿ ಏರಿಕೆಯಾಗುತ್ತಿದೆ ಎಂದು ಬ್ರೋಕರೇಜ್ ಎಜೆನ್ಸಿ ಅಂಬಿಟ್ ಕ್ಯಾಪಿಟಲ್ ವರದಿ ಮಾಡಿದೆ.
ಈ ವರ್ಷದ ಜನವರಿಯಲ್ಲಿ ಸರ್ಕಾರ 8ನೇ ವೇತನ ಆಯೋಗ ಶಿಫಾರಸು ಜಾರಿಗೊಳಿಸುವುದಾಗಿ ಹೇಳಿತ್ತು. ಇದೀಗ ಇದಕ್ಕೆ ಪೂರಕವಾಗಿ ಶಿಫಾರಸ್ಸುಗಳ ಜಾರಿಗೆ ಅನುಮೋದನೆ ನೀಡಲು ಸರ್ಕಾರ ಮುಂದಾಗಿದೆ. ಇದೀಗ 8ನೇ ವೇತನ ಆಯೋಗ ಶಿಫಾರಸ್ಸು ಜಾರಿಗೊಳಿಸಲುು ಅನೋದನೆ ಸಿಕ್ಕರೆ, 2026ರ ಜನವರಿಯಿಂದ ಈ 8ನೇ ವೇತನ ಆಯೋಗ ಅನ್ವಯವಾಗಲಿದೆ. ಇಷ್ಟೇ ಅಲ್ಲ ಅಂಬಿಟ್ ಕ್ಯಾಪಿಟಲ್ ವರದಿ ಪ್ರಕಾರ ವೇತನ ಹಾಗೂ ಪಿಂಚಣಿ ಶೇಕಡಾ 30 ರಿಂದ 34ರಷ್ಟು ಹೆಚ್ಛಳವಾಗಲಿದೆ ಎಂದಿದೆ.
7ನೇ ವೇತನ ಆಯೋಗ ನೀತಿಯ್ನು 2016ರಲ್ಲಿ ಜಾರಿಗೊಳಿಸಲಾಗಿತ್ತು. 2016ರಿಂದ 2025ರ ವರೆಗೆ 7ನೇ ವೇತನ ಆಯೋಗದ ನಿಯಮದಡಿ ವೇತನ ನೀಡಲಾಗುತ್ತಿದೆ. ಇಲ್ಲಿ ಶಿಫಾರಸ್ಸು ಮಾಡಿದಷ್ಟು ವೇತನ ಹೆಚ್ಚಿಸಿರಲಿಲ್ಲ. ಕಾರಣ 1979ರ ಬಳಿಕ ಭಾರತದಲ್ಲಿ ಸರ್ಕಾರಿ ಉದ್ಯೋಗಿಗಳ ವೇತನ ಹಾಗೂ ಪಿಂಚಣಿದಾರರ ಪಿಂಚಣಿ ಹೋಲಿಕೆ ಮಾಡಿದರೆ 2016ರ ಜಾರಿ ಅತ್ಯಂತ ಕಡಿಮೆಯಾಗಿತ್ತು. 2016ರಲ್ಲಿ ಶೇಕಡಾ 14ರಷ್ಟು ವೇತನ ಹೆಚ್ಚಿಸಲು ಸರ್ಕಾರ ಅನುಮೋದನೆ ನೀಡಿತ್ತು. 7ನೇ ವೇತನ ಆಯೋಗದಲ್ಲಿ ಶಿಫಾಸ್ಸಿನ ಪ್ರಕಾರ ವೇತನ ಹೆಚ್ಚಿಸಿಲ್ಲ. ಹೀಗಾಗಿ ಈ ಬಾರಿ ಶಿಫಾಸ್ಸು ಪ್ರಕಾರ ವೇತನ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.
ಪ್ರತಿ ವೇತನ ಆಯೋಗ ಕಮಿಷನ್ 10 ವರ್ಷಕ್ಕೆ ಪರಿಷ್ಕರಿಸಲಾಗುತ್ತದೆ. ಖಾಸಗಿ ವಲಯದಲ್ಲಿನ ಸ್ಪರ್ಧಾತ್ಮಕ ವೇತನಗಳಿಗೆ ಹಾಗೂ ಅಗತ್ಯ ಹಾಗೂ ಬೆಲೆ ಏರಿಕೆಗೆ ತಕ್ಕಂತೆ ವೇತನ ಹೆಚ್ಚಿಸಲು ವೇತನ ಆಯೋಗ ರಚಿಸಲಾಗಿದೆ. ಪ್ರತಿ 10 ವರ್ಷಕ್ಕೆ ವೇತನ ಆಯೋಗ ಪರಿಷ್ಕರಣೆಯಾಗುತ್ತದೆ.
7ನೇ ಕಮಿಷನ್ ನೀತಿಗಳು ಬದಲಾಗಿ 8ನೇ ವೇತನ ಆಯೋಗದ ನೀತಿಗಳು ಜಾರಿಯಾಗಲಿದೆ. ಇದರಿಂದ ಬರೋಬ್ಬರಿ 4.4 ಮಿಲಿಯನ್ ಸರ್ಕಾರಿ ಉದ್ಯೋಗಿಗಳಿಗೆ ಹಾಗೂ 6.8 ಮಿಲಿಯನ್ ಪಿಂಚಣಿದಾರರಿಗೆ ನೆರವಾಗಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.