ನೂತನ ಐಟಿ ಪೋರ್ಟಲ್‌ ಅಭಿವೃದ್ಧಿಗೆ ಇಸ್ಫೋಸಿಸ್‌ಗೆ 165 ಕೋಟಿ ರೂ.!

By Suvarna News  |  First Published Jul 27, 2021, 10:37 AM IST

* ಆದಾಯ ತೆರಿಗೆ ಸಲ್ಲಿಕೆಯ ನೂತನ ಇ-ಫೈಲಿಂಗ್‌ ಪೋರ್ಟಲ್‌

* ಇಸ್ಫೋಸಿಸ್‌ ಸಂಸ್ಥೆಗೆ 2019ರ ಜನವರಿಯಿಂದ 2021ರ ಜೂನ್‌ವರೆಗೆ 164.5 ಕೋಟಿ ರು. ಸಂದಾಯ 

* ಲೋಕಸಭೆಗೆ ಲಿಖಿತ ಉತ್ತರ ನೀಡಿದ ಆರ್ಥಿಕ ಇಲಾಖೆಯ ರಾಜ್ಯ ಸಚಿವ ಪಂಕಜ್‌ ಚೌಧರಿ


ನವದೆಹಲಿ(ಜು.27): ಆದಾಯ ತೆರಿಗೆ ಸಲ್ಲಿಕೆಯ ನೂತನ ಇ-ಫೈಲಿಂಗ್‌ ಪೋರ್ಟಲ್‌ ಅಭಿವೃದ್ಧಿಪಡಿಸಿದ ಇಸ್ಫೋಸಿಸ್‌ ಸಂಸ್ಥೆಗೆ 2019ರ ಜನವರಿಯಿಂದ 2021ರ ಜೂನ್‌ವರೆಗೆ 164.5 ಕೋಟಿ ರು. ಸಂದಾಯ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ.

ಈ ಸಂಬಂಧ ಲೋಕಸಭೆಗೆ ಲಿಖಿತ ಉತ್ತರ ನೀಡಿದ ಆರ್ಥಿಕ ಇಲಾಖೆಯ ರಾಜ್ಯ ಸಚಿವ ಪಂಕಜ್‌ ಚೌಧರಿ ಅವರು, ‘ಎಂಎಸ್‌ಪಿ, ಜಿಎಸ್‌ಟಿ, ಬಾಡಿಗೆ, ಪೋಸ್ಟೇಜ್‌ ಮತ್ತು ಮತ್ತು ಯೋಜನೆ ವ್ಯವಸ್ಥಾಪನೆಯ ವೆಚ್ಚಕ್ಕೆ ಸಂಬಂಧಿಸಿದ 4241.97 ಕೋಟಿ ರು. ವೆಚ್ಚದ ಸಮಗ್ರ ಇ-ಫೈಲಿಂಗ್‌ ಮತ್ತು ಸಿಪಿಸಿ-2.0 ಯೋಜನೆಯನ್ನು ಇಸ್ಫೋಸಿಸ್‌ಗೆ ವಹಿಸಲಾಗಿತ್ತು. ಈ ಪ್ರಕಾರ ಇದೇ ವರ್ಷದ ಜೂ.7ರಂದು ಕೇಂದ್ರ ಸರ್ಕಾರ ನೂತನ ಆದಾಯ ತೆರಿಗೆಯ ಇ-ಫೈಲಿಂಗ್‌ ಪೋರ್ಟಲ್‌ ಅನ್ನು ಲೋಕಾರ್ಪಣೆ ಮಾಡಿದೆ’ ಎಂದು ಹೇಳಿದರು.

Tap to resize

Latest Videos

ಇದರಲ್ಲಿ ಹಲವು ತಾಂತ್ರಿಕ ದೋಷಗಳ ಬಗ್ಗೆ ದೂರುಗಳು ಕೇಳಿಬಂದಿದ್ದು, ಪೋರ್ಟಲ್‌ನಲ್ಲಿ ಕಂಡುಬಂದ ತಾಂತ್ರಿಕ ದೋಷಗಳ ತ್ವರಿತ ಪರಿಹಾರ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದರು.

click me!