ಯುಪಿಐ ವ್ಯವಸ್ಥೆಯನ್ನು ಆರ್ಥಿಕವಾಗಿ ಕಾರ್ಯಸಾಧುವಾಗಿರಿಸಲು ಮತ್ತು ಇದಕ್ಕೆ ಬೇಕಾದ ಮೂಲಸೌಕರ್ಯಕ್ಕೆ ಹಣ ಒದಗಿಸಲು ಶೇ.0.3 ರಷ್ಟುಏಕರೂಪ ಡಿಜಿಟಲ್ ಪಾವತಿ ನಿರ್ವಹಣಾ ಶುಲ್ಕ ವಿಧಿಸಿದರೆ ಸೂಕ್ತ. ಅಂದರೆ ಪ್ರತಿ 100 ರೂ. ವಹಿವಾಟಿಗೆ 3 ಪೈಸೆಯಷ್ಟು ಅಥವಾ 1000 ರೂ.ಗೆ 30 ಪೈಸೆಯಷ್ಟು ಶುಲ್ಕ ವಿಧಿಸುವ ವಿಷಯವನ್ನು ಪರಿಗಣಿಸಬಹುದು. ಇದರಿಂದ ವಾರ್ಷಿಕ 5000 ಕೋಟಿ ರೂ. ಸಂಗ್ರಹಿಸಬಹುದು ಎಂದು ಐಐಟಿ ಬಾಂಬೆಯ ಅಧ್ಯಯನ ವರದಿ ಹೇಳಿದೆ.
ನವದೆಹಲಿ (ಏಪ್ರಿಲ್ 3, 2023): ಯುಪಿಐ ವ್ಯಾಲೆಟ್ ಮೂಲಕ ಪ್ರೀಪೇಯ್ಡ್ ಪೇಮೆಂಟ್ ಇನ್‌ಸ್ಟ್ರುಮೆಂಟ್ಸ್ (ಪಿಪಿಐ) ವ್ಯವಹಾರಕ್ಕೆ ಶೇ.1.1ರಷ್ಟು ಇಂಟರ್‌ಚಾರ್ಜ್ ಶುಲ್ಕ ವಿಧಿಸಲು ನಿರ್ಧರಿಸಿದ ಬೆನ್ನಲ್ಲೇ, ಎಲ್ಲಾ ರೀತಿಯ ಯುಪಿಐ ವಹಿವಾಟಿಗೂ ಶೇ. 0.3 ರಷ್ಟು ನಿರ್ವಹಣಾ ಶುಲ್ಕ ವಿಧಿಸುವ ವಿಷಯವನ್ನು ಸರ್ಕಾರ ಮುಂದಿನ ದಿನಗಳಲ್ಲಿ ಪರಿಶೀಲಿಸಬಹುದು ಎಂದು ಐಐಟಿ ಬಾಂಬೆ ನಡೆಸಿದ ಅಧ್ಯಯನ ವರದಿಯೊಂದು ಹೇಳಿದೆ.
ಸದ್ಯ ದೇಶಾದ್ಯಂತ ಯುಪಿಐ ಸೇವೆ ನೀಡುತ್ತಿರುವ ಯಾವುದೇ ಬ್ಯಾಂಕ್ ಅಥವಾ ಇನ್ಯಾವುದೇ ಯುಪಿಐ ವ್ಯವಸ್ಥೆಗಳು ಹಣ ಪಾವತಿ ಮಾಡಿದ್ದಕ್ಕೆ ಅಥವಾ ಹಣ ಸ್ವೀಕರಿಸಿದ್ದಕ್ಕೆ ಗ್ರಾಹಕರಿಗೆ ಶುಲ್ಕ ವಿಧಿಸುವಂತೆ ಇಲ್ಲ. ಆದರೆ ಯುಪಿಐ ವ್ಯವಸ್ಥೆಯನ್ನು ಆರ್ಥಿಕವಾಗಿ ಕಾರ್ಯಸಾಧುವಾಗಿರಿಸಲು ಮತ್ತು ಇದಕ್ಕೆ ಬೇಕಾದ ಮೂಲಸೌಕರ್ಯಕ್ಕೆ ಹಣ ಒದಗಿಸಲು ಶೇ.0.3 ರಷ್ಟು ಏಕರೂಪ ಡಿಜಿಟಲ್ ಪಾವತಿ ನಿರ್ವಹಣಾ ಶುಲ್ಕ ವಿಧಿಸಿದರೆ ಸೂಕ್ತ. ಅಂದರೆ ಪ್ರತಿ 100 ರೂ. ವಹಿವಾಟಿಗೆ 3 ಪೈಸೆಯಷ್ಟು ಅಥವಾ 1000 ರೂ.ಗೆ 30 ಪೈಸೆಯಷ್ಟು ಶುಲ್ಕ ವಿಧಿಸುವ ವಿಷಯವನ್ನು ಪರಿಗಣಿಸಬಹುದು. ಇದರಿಂದ ವಾರ್ಷಿಕ 5000 ಕೋಟಿ ರೂ. ಸಂಗ್ರಹಿಸಬಹುದು ಎಂದು ಐಐಟಿ ಬಾಂಬೆಯ ಅಧ್ಯಯನ ವರದಿ ಹೇಳಿದೆ.
ಇದನ್ನು ಓದಿ: ಇನ್ಮುಂದೆ UPI ಪಾವತಿಗೆ ಗ್ರಾಹಕರು ಶುಲ್ಕ ಪಾವತಿಸಬೇಕೇ..? ಎನ್‌ಪಿಸಿಐ, ಪೇಟಿಎಂ ಸ್ಪಷ್ಟನೆ ಹೀಗಿದೆ..
ಇದೇ ವೇಳೆ ಯಾವುದೇ ಗ್ರಾಹಕರು ತಮ್ಮ ವ್ಯಾಲೆಟ್ ಮೂಲಕ ಪ್ರೀಪೇಯ್ಡ್ ಪೇಮೆಂಟ್ ಇನ್‌ಸ್ಟ್ರುಮೆಂಟ್ಸ್‌ಗಳಿಗೆ ಮಾಡಿದ 2000 ರೂ .ಗಿಂತ ಹೆಚ್ಚಿನ ಪಾವತಿಗೆ ಶೇ.1.1ರಷ್ಟು ಶುಲ್ಕ ವಿಧಿಸುವ ನಿರ್ಧಾರವನ್ನು ಅಧ್ಯಯನ ವರದಿ ಪ್ರಶ್ನಿಸಿದೆ. ಈ ಶುಲ್ಕವನ್ನು ಕೇವಲ ಹಣ ಸ್ವೀಕರಿಸುವ ವ್ಯಾಪಾರಿಗಳು ಹೊರಬೇಕು ಎಂಬುದು ಸರಿಯಲ್ಲ. ಇದರಲ್ಲಿ ಹಣ ಪಾವತಿ ಮಾಡುವವರಿಗೂ ಸಮಾನ ಶುಲ್ಕ ವಿಧಿಸಬೇಕು. ಇಲ್ಲದೇ ಹೋದಲ್ಲಿ ಅಸಮಾನತೆ ಸೃಷ್ಟಿಸಿದಂತಾಗುತ್ತದೆ ಎಂದು ವರದಿ ಹೇಳಿದೆ.
2022ರಲ್ಲಿ ದೇಶದಲ್ಲಿ 126 ಲಕ್ಷ ಕೋಟಿ ರೂ. ಹಣವನ್ನು ಯುಪಿಐ ಮೂಲಕ ನಡೆಸಲಾಗಿತ್ತು.
ಇದನ್ನೂ ಓದಿ: ಇನ್ಮುಂದೆ ಈ ದೇಶಗಳ ಪ್ರವಾಸಿಗರು ಸಹ ಭಾರತದಲ್ಲಿ ಯುಪಿಐ ಮೂಲಕ ಪೇಮೆಂಟ್ ಮಾಡಬಹುದು..!