ಅಂತಿಮವಾಗಿ ಐಸಿಐಸಿಐ ಬ್ಯಾಂಕ್ ಸಿಇಒ ಮತ್ತು ಎಂಡಿ ಸ್ಥಾನದಿಂದ ಚಂದಾ ಕೊಚ್ಚಾರ್ ಕೆಳಕ್ಕೆ ಇಳಿದಿದ್ದಾರೆ.ಚಂದಾ ಕೊಚ್ಚಾರ್ ಜಾಗಕ್ಕೆ ಸಂದೀಪ್ ಬಕ್ಷಿ ಬಂದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಸದ್ಯದ ಮಟ್ಟಿಗೆ ಇದು ಹಾಟ್ ಟಾಪಿಕ್.
ನವದೆಹಲಿ(ಅ.4) ಚಂದಾ ಕೊಚ್ಚಾರ್ ಐಸಿಐಸಿಐ ಬ್ಯಾಂಕ್ ನ ಪ್ರಮುಖ ಹುದ್ದೆಗಳಿಂದ ಕೆಳಗೆ ಇಳಿದಿದ್ದಾರೆ. ಹಲವು ದಿನಗಳಿಂದ ರಜೆಯಲ್ಲಿದ್ದ ಚಂದಾ ಕೊಚ್ಚಾರ್ ಇದೀಗ ಅಧಿಕೃತವಾಗಿ ಸಿಇಒ ಮತ್ತು ಎಂಡಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಚಂದಾ ಕೊಚ್ಚಾರ್ ಸ್ಥಾನ ತ್ಯಜಿಸುತ್ತಿದ್ದಂತೆ ಐಸಿಐಸಿಐ ಬ್ಯಾಂಕ್ ಷೇರುಗಳು ಏಕಾಏಕಿ ಏರಿಕೆ ಕಂಡಿವೆ.ಶೇ. 5.23 ಏರಿಕೆ ಕಂಡ ಷೇರು ದಾಖಲಿಸಿದ್ದು 319.50 ರು. ಗೆ ಏರಿಕೆಯಾಗಿದೆ.
ಸ್ಥಾನ ತ್ಯಜಿಸುತ್ತೇನೆ ಎಂದು ಚಂದಾ ಮಾಡಿದ್ದ ಮನವಿಗೆ ಬ್ಯಾಂಕಿನ ನಿರ್ದೇಶಕರ ಮಂಡಳಿ ಒಪ್ಪಿಗೆ ನೀಡಿದೆ. ಸಂದೀಪ್ ಬಕ್ಷಿ ಅವರನ್ನು ನೇಮಕ ಮಾಡಲಾಗಿದ್ದು ಅವರು ಅಕ್ಟೋಬರ್ 3, 2023 ರವರೆಗೆ ಕಾರ್ಯ ನಿರ್ವಹಿಸಲಿದ್ದಾರೆ.
ಚಂದಾ ಕೊಚ್ಚರ್ ಮತ್ತು ಆಕೆಯ ಕುಟುಂಬದವರ ವಿರುದ್ದ ಭಾರತದಲ್ಲಿ ತನಿಖೆ ನಡೆಯುತ್ತಿರುವಾಗಾಲೇ ಅಮೆರಿಕಾದ ಷೇರು ಮಾರುಕಟ್ಟೆ ಪ್ರಾಧಿಕಾರ(ಎಸ್ಇಸಿ) ಕೂಡ ಅವರ ವಿರುದ್ದ ತನಿಖೆಗೆ ಮುಂದಾಗಿದೆ.
ಚಂದಾ ಕೊಚ್ಚಾರ್ ಅಧಿಕಾರದಲ್ಲಿ ಇದ್ದಾಗಲೆ ಐಸಿಐಸಿಐ ಬ್ಯಾಂಕ್ ಮೂಲಕ ಅವ್ಯವಹಾರ ನಡೆದಿದೆ ಎಂದು ಕಳೆದ ಮಾರ್ಚ್ ನಲ್ಲಿ ಮೊದಲ ಬಾರಿಗೆ ಆರೋಪ ಕೇಳಿ ಬಂದಿತ್ತು. ಆದರೆ ಈ ಆರೋಪಗಳನ್ನು ಐಸಿಐಸಿಐ ಬ್ಯಾಂಕ್ ನಿರಾಕರಿಸಿತ್ತು.