
ಮುಂಬೈ : ಜಾಗತಿಕ ಬೇಡಿಕೆಗೆ ಅನುಗುಣವಾಗಿ ಹಳದಿ ಲೋಹದ ಬೆಲೆಯಲ್ಲಿ ನಿರಂತರವಾಗಿ ಏರಳಿತವಾಗುತ್ತಿರುವುತ್ತದೆ. ಇದೀಗ ಮತ್ತೊಮ್ಮೆ ಚಿನ್ನದ ದರದಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ.
10 ಗ್ರಾಂ ಚಿನ್ನದ ಮೇಲೆ 10 ರು.ನಷ್ಟು ಇಳಿಕೆಯಾಗಿದ್ದು, ಇದರಿಂದ ಪ್ರತೀ 10 ಗ್ರಾಂ ಚಿನ್ನದ ಬೆಲೆಯು 31,650 ರು.ನಷ್ಟಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಪ್ರಮಾಣ ಕಡಿಮೆಯಾದ ನಿಟ್ಟಿನಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ.
ಇನ್ನು ಇದೇ ವೇಳೆ ಬೆಳ್ಳಿಯ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. 1 ಕೆಜಿ ಬೆಳ್ಳಿಯ ಬೆಲೆಯ ಮೇಲೆ 100 ರು. ಏರಿಕೆಯಾಗಿದ್ದು, ಇದರಿಂದ ಪ್ರತೀ ಕೆಜಿ ಬೆಳ್ಳಿ ದರ 38,100 ರು.ನಷ್ಟಾದಂತಾಗಿದೆ. ನಾಣ್ಯ ತಯಾರಕರಿಂದ ಬೇಡಿಕೆ ಇರುವ ಪರಿಣಾಮವಾಗಿ ಬೆಳ್ಳಿಯ ಬೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ.
ಸ್ಥಳೀಯ ಮಾರುಕಟ್ಟೆಯಲ್ಲಿ ಚಿನ್ನದ ಮಾರಾಟಗಾರರಿಂದ ಚಿನ್ನ ಕೊಳ್ಳುವ ಪ್ರಮಾಣ ಕುಸಿತವಾಗಿದೆ. ಬೇಡಿಕೆ ಕುಸಿದ ಪರಿಣಾಮ ಬೆಲೆಯಲ್ಲಿಯೂ ಕುಸಿತ ಕಂಡು ಬಂದಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.