ತೈಲ ಬೆಲೆ ಏರಿಕೆ ಬೆನ್ನಲ್ಲೇ ಚಿನ್ನದ ದರ ಭಾರಿ ಕುಸಿತ, ಬೆಂಗಳೂರು ಸೇರಿ ಭಾರತದಲ್ಲಿ ದಾಖಲೆ ಇಳಿಕೆ

Published : Sep 28, 2026, 11:41 AM IST
Gold Price

ಸಾರಾಂಶ

ಕಚ್ಚಾ ತೈಲ ಬೆಲೆಯಲ್ಲಿನ ಏರಿಕೆಯಿಂದ ಹಣದುಬ್ಬರ ಆತಂಕ ತೀವ್ರಗೊಂಡಿದೆ. ಇದರ ನಡುವೆ ಚಿನ್ನದ ಬೆಲೆಯಲ್ಲಿ ದಾಖಲೆಯ ಇಳಿಕೆ ಕಂಡಿದೆ. ಸೆಪ್ಟೆಂಬರ್‌ನಲ್ಲಿ ದಾಖಲೆಯ ಕುಸಿತ ಕಂಡಿದೆ. ಬೆಂಗಳೂರು ಸೇರಿದಂತೆ ಭಾರತದಲ್ಲಿ ಚಿನ್ನದ ದರ ಎಷ್ಟಿದೆ?

ಬೆಂಗಳೂರು (ಸೆ.28) ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗುತ್ತಿರುವ ಏರಿಳಿತಗಳು ಹಲವು ಪ್ರಮುಖ ವ್ಯಾಪಾರ ವಹಿವಾಟುಗಳು, ವಸ್ತುಗಳ ಬೆಲೆಗಳ ಮೇಲೆ ಪರಿಣಾಮ ಬೀರಿದೆ. ಪ್ರಮುಖವಾಗಿ ಯುದ್ಧ ಸಂಘರ್ಷ, ಜಲಸಂಧಿಗಳಲ್ಲಿ ಸರಕು ಸಾಗಾಣೆಗಳಿಗೆ ಅಡೆ ತಡೆ, ಹಡಗುಗಳ ಮೇಲೆ ದಾಳಿಗಳ ಪರಿಣಾಮದಿಂದ ಜಾಗತಿಕ ಮಟ್ಟದಲ್ಲಿ ಪೂರೈಕೆ ಸಮಸ್ಯೆಗಳು ಎದುರಾಗಿದೆ. ಇದರಿಂದ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ ಕಾಣತೊಡಗಿದೆ. ಇದರ ನಡುವೆ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡಿದೆ. ಸೆಪ್ಟೆಂಬರ್ 28ರಂದು ಚಿನ್ನದ ಬೆಲೆಯಲ್ಲಿ ಶೇಕಡಾ 2ರಷ್ಟು ಇಳಿಕೆ ದಾಖಲಾಗಿದೆ.

ಶೇಕಡಾ 2ರಷ್ಟು ಚಿನ್ನದ ದರ ಕುಸಿತ, ಸೆಪ್ಟೆಂಬರ್ ತಿಂಗಳಲ್ಲೇ ಅಧಿಕ

ಸೆಪ್ಟೆಂಬರ್1 ರಿಂದ ಇಲ್ಲೀವರೆಗೆ ಚಿನ್ನದ ದರ ಹಲವು ಏರಿಳಿತ ಕಂಡಿದೆ. ಈ ಪೈಕಿ ಸೆಪ್ಟೆಂಬರ್ 28ರಂದು ಗರಿಷ್ಠ ಇಳಿಕೆ ದಾಖಲಾಗಿದೆ. ಚಿನ್ನದ ಜೊತೆಗೆ ಬೆಳ್ಳಿ ಬೆಲೆಯೂ ಕುಸಿತ ಕಂಡಿದೆ. 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ ಭಾರತದಲ್ಲಿ 15.017 ರೂಪಾಯಿ ಆಗಿದೆ. ಇನ್ನು 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 13,765 ರೂಪಾಯಿ ಹಾಗೂ 18 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 11,263 ರೂಪಾಯಿ ಆಗಿದೆ. ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್‌ ಮಾರುಕಟ್ಟೆಲ್ಲಿ ಚಿನ್ನದ ಬೆಲೆ 10 ಗ್ರಾಂದೆ 1.5 ಲಕ್ಷ ರೂಪಾಯಿಯಿಂದ ಆರಂಭಗೊಂಡಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ದೇಶದ ಇತರ ನಗರಗಳಿಗೆ ಹೋಲಿಸಿದರೆ ಬೆಂಗಳೂರು ಸೇರಿದಂತೆ ಇತರ ಕೆಲ ನಗರಗಳಲ್ಲಿ ಅಗ್ಗವಾಗಿದೆ. 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ ಬೆಂಗಳೂರಿನಲ್ಲಿ 15017 ರೂಪಾಯಿ ಆಗಿದೆ. 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 13,765 ರೂಪಾಯಿ ಹಾಗೂ 18 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 11,263 ರೂಪಾಯಿ ಆಗಿದೆ. ಹೈದರಾಬಾದ್, ಕೇರಳ, ಪುಣೆ ನಗರದಲ್ಲೂ ಇದೇ ಬೆಲೆ ಇದೆ.

ಭಾರತದಲ್ಲಿ ಬೆಳ್ಳಿ ಬೆಲೆ

ಚಿನ್ನದ ಬೆಲೆ ಜೊತೆ ಭಾರತದಲ್ಲಿ ಬೆಳ್ಳಿ ಬೆಲೆಯೂ ಕುಸಿತಗೊಂಡಿದೆ. 1 ಕೆಜಿಗೆ ಬೆಳ್ಳಿ ಬೆಲೆ 92,000 ರೂಪಾಯಿಯಿಂದ 93,000 ರೂಪಾಯಿ ಒಳಗಿದೆ. 1 ಲಕ್ಷ ರೂಪಾಯಿ ಗಡಿ ದಾಟಿದ್ದ ಬೆಳ್ಳಿ ಬೆಲೆ ಇದೀಗ ಗರಿಷ್ಠಿ 93 ಸಾವಿರಿ ರೂಪಾಯಿಗೆ ಬಂದು ನಿಂತಿದೆ. ಈ ಮೂಲಕ ಚಿನ್ನ ಬೆಳ್ಳಿ ಮಾರುಕಟ್ಟೆಯಲ್ಲಿನ ಭಾರಿ ಬದಲಾವಣೆಗೆ ನಾಂದಿ ಹಾಡಿದೆ.

ಅಮೆರಿಕ ಅಧ್ಯಕ್ಷ್ಯ ಡೋನಾಲ್ಡ್ ಟ್ರಂಪ್ ಕೆಲ ನಿರ್ಧಾರಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏರಿಳಿತಕ್ಕೆ ಕಾರಣವಾಗಿದೆ. ಇರಾನ್ ಪ್ರಸ್ತಾವನೆಯನ್ನು ಡೋನಾಲ್ಡ್ ಟ್ರಂಪ್ ತಿರಸ್ಕರಿಸಿದ್ದಾರೆ. ಇದರ ಬೆನ್ನಲ್ಲೇ ಕಚ್ಚಾ ತೈಲ ಬೆಲೆಯಲ್ಲಿ ಶೇಕಡಾ 1 ರಷ್ಟು ಏರಿಕೆಯಾಗಿದೆ. ಇನ್ನು ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಶೇಕಡಾ 2ರಷ್ಟು ಏರಿಕೆಯಾಗಿದೆ. ಪ್ರತಿ ಬ್ಯಾರೆಲ್‌ಗೆ 106.50 ಅಮೆರಿಕನ್ ಡಾಲರ್ ಏರಿಕೆಯಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

UPI; ₹6,000 ಬದಲು 3 ಬಾರಿ ₹2,000 ಪಾವತಿಸಿದರೆ ಎಂಡಿಆರ್ (MDR) ಚಾರ್ಜ್ ತಪ್ಪಿಸಬಹುದೇ? ಇಲ್ಲಿದೆ ಅಸಲಿ ನಿಯಮ!
ಹಬ್ಬಕ್ಕೆ ಎಲೆಕ್ಟ್ರಾನಿಕ್ಸ್, ಗೃಹಪಯೋಗಿ ವಸ್ತು ಖರೀದಿಸಲು ಪ್ಲಾನ್ ಇದೆಯಾ? ಹೊಸ ಅಪ್‌ಡೇಟ್ ನೋಡಿ