ಚಿನ್ನದ ಬೆಲೆ ಮತ್ತೆ ಇಳಿಕೆ, ಖರೀದಿಸಿದ್ರೆ ಕೊಂಚ ಉಳಿಕೆ: ಹೀಗಿದೆ ಇಂದಿನ ದರ!

Published : Sep 02, 2020, 02:51 PM ISTUpdated : Sep 02, 2020, 02:59 PM IST
ಚಿನ್ನದ ಬೆಲೆ ಮತ್ತೆ ಇಳಿಕೆ, ಖರೀದಿಸಿದ್ರೆ ಕೊಂಚ ಉಳಿಕೆ: ಹೀಗಿದೆ ಇಂದಿನ ದರ!

ಸಾರಾಂಶ

ಏರಿಕೆ, ಇಳಿಕೆಯಾಟ ಆಡುತ್ತಿದೆ ಚಿನ್ನ| ಏರಿಕೆಯಾಘಿದ್ದ ಚಿನ್ನದದ ದರ ಮತ್ತೆ ಇಳಿಕೆ| ಖರೀಇಸಿದ್ರೆ ನಿಮಗೇ ಲಾಭ| ಹೀಗಿದೆ ಸೆಪ್ಟೆಂಬರ್ 2, 2020ರ ಚಿನ್ನದ ದರ

ಬೆಂಗಳೂರು(ಸೆ.02): ಕೊರೋನಾತಂಕ ನಡುವೆ ಚಿನ್ನದ ದರದಲ್ಲಿ ಏರಿಳಿತವಾಗುತ್ತಿದ್ದು, ಗ್ರಾಹಕರಿಗೆ ಖರೀದಿಸಬೇಕೋ? ಬೇಡವೋ ಎಂಬ ಗೊಂದಲ ಶರುವಾಗಿದೆ. ಇನ್ನು ತಜ್ಞರು ಕೂಡಾ ಮತ್ತೆ ಚಿನ್ನದ ಬೆಲೆ ಏರಿಕೆಯಾಗುವ ಎಚ್ಚರಿಕೆ ನೀಡಿದ್ದು, ಇದು ಚಿನ್ನ ಪ್ರಿಯರಿಗೆ ಮತ್ತಷ್ಟು ತಲೆ ನೋವು ನೀಡಿದೆ. ನಿಧಾನವಾಗಿ ಏರುತ್ತಿದ್ದ ಚಿನ್ನದ ದರ ಮತ್ತೆ ಇಳಿಕೆಯಾಗಿದೆ. 

ಹೌದು ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರದಲ್ಲಿ 930 ರೂಪಾಯಿ ಇಳಿಕೆಯಾಗಿದೆ. ಈ ಮೂಲಕ ಬೆಲೆ 48,250 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ  930 ರೂಪಾಯಿ ಇಳಿಕೆ ಕಂಡಿದ್ದು, 52,720 ರೂಪಾಯಿ ಆಗಿದೆ. 

ಇನ್ನು ಬೆಳ್ಳಿ ದರದಲ್ಲೂ ಇಳಿಕೆಯಾಗಿದ್ದು, ಒಂದು ಕೆಜಿ ಬೆಳ್ಳಿ ಬೆಲೆ 67,200 ರೂ ಆಗಿದೆ.

ಚಿನ್ನದ ದರ ಹೆಚ್ಚಿದರೂ ಆಭರಣ ಉದ್ದಿಮೆ ನಷ್ಟದಲ್ಲಿ!

ಸಾಮಾನ್ಯವಾಗಿ ಚಿನ್ನದ ದರ ಏರಿದಾಗಲೆಲ್ಲ ಖುಷಿಪಡುತ್ತಿದ್ದ ಚಿನ್ನಾಭರಣ ವ್ಯಾಪಾರಿಗಳು ಕೆಲ ತಿಂಗಳಿನಿಂದ ಚಿನ್ನದ ಬೆಲೆ ಗಗನಕ್ಕೇರುತ್ತಿದ್ದರೂ ಆತಂಕದಲ್ಲಿ ದಿನ ಕಳೆಯುವಂತಾಗಿದೆ. ಕಾರಣ, ಲಾಕ್‌ಡೌನ್‌ ಹಾಗೂ ಆರ್ಥಿಕ ಹಿಂಜರಿಕೆಯಿಂದಾಗಿ ಚಿನ್ನಕ್ಕೆ ಬೇಡಿಕೆ ದೊಡ್ಡ ಪ್ರಮಾಣದಲ್ಲಿ ತಗ್ಗಿದೆ.

ದೇಶದ ಅತ್ಯಂತ ಪ್ರತಿಷ್ಠಿತ ಚಿನ್ನಾಭರಣ ಮಾರುಕಟ್ಟೆಯಾದ ಮುಂಬೈನ ಜವೇರಿ ಬಜಾರ್‌ನಲ್ಲಿ ಇನ್ನೂ ಅನೇಕ ಚಿನ್ನಾಭರಣ ಅಂಗಡಿಗಳು ಲಾಕ್‌ಡೌನ್‌ ನಂತರ ತೆರೆದೇ ಇಲ್ಲ. ಚಿನ್ನಾಭರಣ ತಯಾರಿಸುವ ಕುಶಲಕರ್ಮಿಗಳು ಕೂಡ ಹಳ್ಳಿಗಳಿಗೆ ವಲಸೆ ಹೋಗಿದ್ದಾರೆ. ತೆರೆದಿರುವ ಅಂಗಡಿಗಳಿಗೂ ಗ್ರಾಹಕರು ಬಹಳ ಕಡಿಮೆ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಕಳೆದ 40-50 ವರ್ಷಗಳಿಂದ ಇಷ್ಟುನೀರಸ ಹಾಗೂ ನಷ್ಟದ ವ್ಯಾಪಾರವನ್ನು ನಾವು ನೋಡಿಲ್ಲ ಎಂದು ಚಿನ್ನಾಭರಣ ವ್ಯಾಪಾರಿಗಳು ಹೇಳುತ್ತಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಅನೇಕರು ಆರ್ಥಿಕ ನಷ್ಟಅನುಭವಿಸಿ ತಮ್ಮಲ್ಲಿರುವ ಚಿನ್ನವನ್ನೇ ಅಡ ಇಡುತ್ತಿದ್ದಾರೆ. ಇನ್ನು ಅನೇಕರು ಚಿನ್ನದ ಬೆಲೆ ದುಬಾರಿಯಾಗಿರುವುದರಿಂದ ಮತ್ತು ಕೈಯಲ್ಲಿ ಸಾಕಷ್ಟುಹಣವಿಲ್ಲದೆ ಇರುವುದರಿಂದ ಮದುವೆ ಮತ್ತು ಶುಭ ಸಮಾರಂಭಗಳಿಗೆ ಚಿನ್ನ ಕೊಳ್ಳುವುದನ್ನು ಕಡಿಮೆ ಮಾಡುತ್ತಿದ್ದಾರೆ. ಇದೇ ವೇಳೆ, ಕೊರೋನಾ ವೈರಸ್‌ ಭೀತಿಯಿಂದ ಜನರು ಚಿನ್ನಾಭರಣ ಮಳಿಗೆಗಳಿಗೆ ಬರುವುದು ಕೂಡ ಕಡಿಮೆಯಾಗುತ್ತಿದೆ. ಚಿನ್ನದ ಮೇಲೆ ಹೂಡಿಕೆ ಮಾಡುವ ಹೊಸ ತಲೆಮಾರಿನವರು ಹೆಚ್ಚಾಗಿ ಭೌತಿಕ ಚಿನ್ನ ಕೊಳ್ಳದೆ ಡಿಜಿಟಲ್‌ ಚಿನ್ನ ಕೊಳ್ಳುತ್ತಿದ್ದಾರೆ. ಇವೆಲ್ಲಾ ಕಾರಣಗಳಿಂದಾಗಿ ಚಿನ್ನಕ್ಕೆ ಬೇಡಿಕೆಯಿಲ್ಲದಂತಾಗಿದೆ.

ಮತ್ತೆ ಏರಿಕೆಯಾಗಲಿದೆ ಚಿನ್ನದ ಬೆಲೆ

ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಲೇ ಇದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದೀ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಕೇವಲ ಆಧಾರ್ ಸಂಖ್ಯೆ ಬಳಸಿ ನಿಮ್ಮ ಬ್ಯಾಂಕ್ ಹಣ ಲಪಟಾಯಿಸಲು ಸಾಧ್ಯವೇ? ಈ ಬಗ್ಗೆ UIDAI ನೀಡಿದ ಮಹತ್ವದ ಮಾಹಿತಿ ಇಲ್ಲಿದೆ!
Techie Career Change: 2 ಕೋಟಿ ಸಂಬಳದ ಕೆಲಸ ಬಿಟ್ಟು ಕೆಫೆ ತೆರೆದ 29ರ ಯುವತಿ! ಟೆಕ್ಕಿಯ ಕಥೆನೇ ರೋಚಕ