ಚಿನ್ನ ಮತ್ತೆ ಏರಿಕೆ, ಗ್ರಾಹಕ ಕಂಗಾಲು: ಇಲ್ಲಿದೆ ನ. 07ರ ರೇಟ್!

By Suvarna NewsFirst Published Nov 7, 2020, 6:03 PM IST
Highlights

ಇಳಿಕೆಯ ಹಾದಿಯಲ್ಲಿದ್ದ ಚಿನ್ನ ಮತ್ತೆ ಏರಿಕೆ| ಬೆಳ್ಳಿ ದರವೂ ಏರಿಕೆ| ಇಲ್ಲಿದೆ ನ. 07ರ ಚಿನ್ನ, ಬೆಳ್ಳಿ ದರ

ಬೆಂಗಳೂರು(ನ. 07): ಕೊರೋನಾ ನಡುವೆ ಚಿನ್ನದ ದರ ಏರಿಕೆ ಗ್ರಾಹಕರನ್ನ ಕಂಗಾಲು ಮಾಡಿತ್ತು. ನಿಗಧಿಯಾಗಿದ್ದ ಶುಭ ಕಾರ್ಯದ ಸಂದರ್ಭದಲ್ಲಿ ಬೆಲೆ ಏರಿಕೆ ದೊಡ್ಡ ಪೆಟ್ಟು ನೀಡಿತ್ತು. ಅಚ್ಚರಿ ಎಂಬಂತೆ ಚಿನ್ನದ ಬೇಡಿಕೆ ಭಾರೀ ಕಡಿಮೆ ಇದ್ದರೂ ಬೆಲೆ ಮಾತ್ರ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು. ಉದ್ಯಮಗಳು ನೆಲ ಕಚ್ಚಿದ ಹಿನ್ನೆಲೆ ಅನೇಕ ಮಂದಿ ಚಿನ್ನದಲ್ಲಿ ಹೂಡಿಕೆ ಮಾಡಿದ್ದೇ ಇದಕ್ಕೆ ಕಾರಣವಾಗಿತ್ತು. ಹೀಗಿರುವಾಗಲೇ ಚಿನ್ನ, ಬೆಳ್ಳಿ ದರ ಏರಿಕೆ, ಇಳಿಕೆ ಆಟ ಆರಂಭಸಿದ್ದು, ಗ್ರಾಹರನ್ನು ಗೊಂದಲಕ್ಕೀಡು ಮಾಡಿದೆ. ಇಲ್ಲಿದೆ ನೋಡಿ ಇಂದಿನ ಗೋಲ್ಡ್‌ ಆಂಡ್ ಸಿಲ್ವರ್ ರೇಟ್.

ಇಂದು ಗುರುವಾರ ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರ 400 ರೂ. ಏರಿಕೆಯಾಗಿ 48,400 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ  ಗ್ರಾಂ ಚಿನ್ನದ ದರ 440 ರೂಪಾಯಿ ಏರಿಕೆ ಕಂಡಿದ್ದು, 52,800 ರೂಪಾಯಿ ಆಗಿದೆ. 

ಆದರೆ ಇತ್ತ ಬೆಳ್ಳಿ ದರ 900 ರೂ.ಏರಿಕೆಯಾಗಿದ್ದು, ಒಂದು ಕೆ. ಜಿ ಬೆಳ್ಳಿಯ ಬೆಲೆ 65,400 ರೂ ಆಗಿದೆ.

ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ

ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಲೇ ಇದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದೀ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ.

click me!