Gold Rally Back: ಚಿನ್ನದ ದರ ಕುಸಿತ ಅಂತ್ಯ, ಇನ್ಮುಂದೆ ತೀವ್ರ ಏರಿಕೆ; ಶಾಕಿಂಗ್ ಭವಿಷ್ಯ ನುಡಿದ ಪೀಟರ್ ಸ್ಕಿಫ್!

Published : Aug 13, 2026, 10:56 AM IST
Gold Price

ಸಾರಾಂಶ

ಭಾರತದಲ್ಲಿ ಚಿನ್ನದ ದರ ಮಂಗಳವಾರ 3 ಸಾವಿರ ರೂಪಾಯಿಗಿಂತ ಹೆಚ್ಚು ಹೆಚ್ಚಾಗಿತ್ತು, ಇಂದು ಮತ್ತೆ ಒಂದು ಸಾವಿರ ರೂಪಾಯಿಗಿಂತ ಹೆಚ್ಚು ದರ ದಾಖಲಿಸಿದೆ. ಜಾಗತಿಕ ವಿದ್ಯಮಾನಗಳು ಮತ್ತು ಡಾಲರ್ ಮೌಲ್ಯ ಕುಸಿತದಿಂದಾಗಿ ಭವಿಷ್ಯದಲ್ಲಿ ಚಿನ್ನದ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಅಮೆರಿಕ ಡಾಲರ್ ಮೌಲ್ಯ ಬಲಹೀನಗೊಂಡ ಕಾರಣ ಅಂತರಾಷ್ಟ್ರೀಯ ಮತ್ತು ದೇಶಿಯ ಮಾರ್ಕೆಟ್‌ನಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳು ಸ್ವಲ್ಪ ಲಾಭದೊಂದಿಗೆ ಸ್ಥಿರವಾಗಿದೆ. ಅಮೆರಿಕ ಸಿಪಿಐ ಅಂಕಿಅಂಶಗಳು ಬಿಡುಗಡೆಗೂ ಮುನ್ನ ಹೂಡಿಕೆದಾರರು ಸ್ವಲ್ಪ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ. ಸ್ಪಾಟ್ ಮಾರ್ಕೆಟ್‌ನಲ್ಲಿ ಗೋಲ್ಡ್ ಸತತರವಾಗಿ ಎರಡನೇ ಸೆಷನ್‌ನಲ್ಲಿ ಔನ್ಸ್ಗೆ 4,300 ಡಾಲರ್‌ಗೆ ಹೆಚ್ಚಾಗಿ ಸ್ಥಿರವಾಗಿ ನಿಂತಿದೆ.

ಬುಲಿಯನ್ ಮಾರ್ಕೆಟ್‌ಗೆ ಉತ್ತೇಜನ

ಅಂತರಾಷ್ಟ್ರೀಯ ಮಾರ್ಕೆಟ್‌ನಲ್ಲಿ ಸ್ಪಾಟ್ ಗೋಲ್ಡ್ ದರ ಶೇಕಡಾ 0.3 ಡಾಲರ್ಗೆ ಹೆಚ್ಚಳವಾಗಿ ಔನ್ಸ್‌ಗೆ 4,381.60 ರೂಪಾಯಿಗೆ ಟ್ರೆಡ್ ಆದರೆ, ಏಷ್ಯಾ ಟ್ರೆಡಿಂಗ್‌ನಲ್ಲಿ ಒಂದು ಹಂತದಲ್ಲಿ 4,412 ಡಾಲರ್ ಮಾರ್ಕ್‌ಅನ್ನು ಮುಟ್ಟಿತ್ತು. ಇದೇ ವೇಳೆ ಸ್ಪಾಟ್ ಸಿಲ್ವರ್ ದರ ಶೇಕಡಾ 0.5 ರಷ್ಟು ಹೆಚ್ಚಾಗಿ ಔನ್ಸ್‌ಗೆ 65 ಡಾಲರ್ ಬಳಿ ಮುಂದುವರೆದಿತ್ತು.

ಭಾರತದ ಎಂಸಿಎಕ್ಸ್ ಮಾರ್ಕೆಟ್‌ನಲ್ಲಿ 10 ಗ್ರಾಂ ಗೋಲ್ಡ್ ದರ ಶೇಕಡಾ 0.68 ರಷ್ಟು ಲಾಭ ಪಡೆದು 154812 ರೂಪಾಯಿ ಬಳಿ ಟ್ರೆಡ್ ಆದರೆ, ಕೆಜಿ ಬೆಳ್ಳಿ ದರ 1.65 ರಷ್ಟು ಹೆಚ್ಚಾಗಿ 239545 ರೂಪಾಯಿ ಹೆಚ್ಚಾಗಿತ್ತು. ಅದರಲ್ಲೂ ಆರು ಪ್ರಮುಖ ಅಂತರಾಷ್ಟ್ರೀಯ ಕರೆನ್ಸಿಗಳ ವಿರುದ್ಧ ಡಾಲರ್ ಮೌಲ್ಯವನ್ನು ಅಳೆಯುವ ಯುಎಸ್ ಡಾಲರ್ ಸೂಚ್ಯಂಕವೂ 99.81 ರಷ್ಟಿದ್ದು, ಇದು ಬುಲಿಯನ್ ಮಾರ್ಕೆಟ್‌ಗೆ ಉತ್ತೇಜನ ನೀಡಿತ್ತು.

ಪೀಟರ್ ಸ್ಕಿಫ್ ಹೇಳಿದ್ದೇನು?

ಇದರೊಂದಿಗೆ ಅಮೆರಿಕದ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಮತ್ತು ಸ್ಕಿಫ್‌ಗೋಲ್ಡ್ನ ಅಧ್ಯಕ್ಷ ಪೀಟರ್ ಸ್ಕಿಫ್, ಚಿನ್ನದ ಬೆಲೆ ಕುಸಿತವು ಮುಗಿದಿದೆ. ಶೀಘ್ರದಲ್ಲೇ ಚಿನ್ನದ ದರ $5,000 ಗಡಿ ದಾಟಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇರಾನ್ ಯುದ್ಧದ ಕಾರಣದಿಂದ ಚಿನ್ನದ ಬೆಲೆಯಲ್ಲಿನ ತಾತ್ಕಾಲಿಕ ಕುಸಿತ ಅಂತ್ಯಗೊಂಡಿದೆ. ಇದನ್ನು ಚಿನ್ನದ ಬುಲ್ ಓಟದ ಅಂತ್ಯ ಎಂದು ಪರಿಗಣಿಸಬಾರದು. ಚಿನ್ನದ ಬೆಲೆಯಲ್ಲಿ ಸಂಭವಿಸಿದ ತಾತ್ಕಾಲಿಕ ದರ ಕುಸಿತವೂ ದೀರ್ಘಾವಧಿಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಒಂದು ಉತ್ತಮ ಅವಕಾಶ ನೀಡಿತ್ತು ಎಂದು ಸ್ಕಿಫ್ ವಿಶ್ಲೇಷಣೆ ಮಾಡಿದ್ದಾರೆ ಎಂದು ಗೂಡ್ ರಿಟರ್ನ್ಸ್ ವರದಿ ಮಾಡಿದೆ.

ಚಿನ್ನದ ಮೇಲೆ ಹೂಡಿಕೆ ಮಾಡಲು ಒಲವು!

ಪಶ್ಚಿಮ ಏಷ್ಯಾದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಉದ್ವಿಗ್ನತೆ ಹೆಚ್ಚಳ ಹಾಗೂ ಯುಎಸ್ ಫೆಡರಲ್ ರಿಸರ್ವ್ ಮತ್ತೆ ಬಡ್ಡಿದರಗಳನ್ನು ಹೆಚ್ಚಿಸಬಹುದು ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಜುಲೈನಲ್ಲಿ ಚಿನ್ನದ ಬೆಲೆಗಳು ತೀವ್ರವಾಗಿ ಕುಸಿತಗೊಂಡಿದ್ದವು ಎಂದು ಬ್ಲೂಮ್ ಬರ್ಗ್ ವರದಿ ಮಾಡಿತ್ತು. ಹಣದುಬ್ಬರದ ನಿಯಂತ್ರಣಕ್ಕೆ ಮುಂದಿನ ದಿನಗಳಲ್ಲಿ ಬಡ್ಡಿದರಗಳನ್ನು ಹೆಚ್ಚಿಸಬೇಕಾಗಬಹುದು ಎಂದು ಫೆಡ್ ಗವರ್ನರ್ ಕ್ರಿಸ್ಟೋಫರ್ ವಾಲರ್ ಹೇಳಿದ ಬಳಿಕ ಒಂದೇ ದಿನದಲ್ಲಿ ಚಿನ್ನದ ದರ ಶೇಕಡಾ 3.2ರಷ್ಟು ಕುಸಿದು ಬೌನ್ಸ್ಗೆ $4,000ಕ್ಕಿಂತ ಕಡಿಮೆಯಾಗಿತ್ತು.

ಆದರೆ, ಡಾಲರ್ ದುರ್ಬಲಗೊಳ್ಳುತ್ತಿರುವ ಕಾರಣ ವಿದೇಶಿ ಹೂಡಿಕೆದಾರರಿಗೆ ಚಿನ್ನವೂ ಅಗ್ಗವಾಗಿ ಸಿಗುವಂತೆ ಮಾಡಿದ್ದು, ಹೂಡಿಕೆದಾರರು ರಾಜಕೀಯ ಅನಿಶ್ಚಿತತೆಯ ಕಾರಣ ಚಿನ್ನದ ಮೇಲಿನ ಹೂಡಿಕೆಯೇ ಬಗ್ಗೆ ಆಕರ್ಷಣೆಗೆ ಒಳಗಾಗಿದ್ದಾರೆ. ಇನ್ನು, ಭಾರತದಲ್ಲಿ ಚಿನ್ನದ ದರ ಮಂಗಳವಾರ 3 ಸಾವಿರ ರೂಪಾಯಿಗಿಂತ ಹೆಚ್ಚು ಹೆಚ್ಚಾಗಿತ್ತು, ಇಂದು ಮತ್ತೆ ಒಂದು ಸಾವಿರ ರೂಪಾಯಿಗಿಂತ ಹೆಚ್ಚು ದರ ದಾಖಲಿಸಿದೆ. ಮುಂದಿನ ದಿನಗಳಲ್ಲಿ ಗೋಲ್ಡ್ ಬೆಲೆ ಮತ್ತಷ್ಟು ಹೆಚ್ಚಾಗಲಿದೆ ಎಂಬ ಸುದ್ದಿಗೆ ಬಲ ನೀಡುತ್ತಿದೆ. ಜಾಗತಿಕ ಯುದ್ಧಗಳು, ಡಾಲರ್ ಮೌಲ್ಯದ ಕುಸಿತ, ಆರ್‌ಬಿಐ ಬಡ್ಡಿದರಗಳು ಚಿನ್ನದ ದರ ಮೇಲೆ ಹೆಚ್ಚು ಪ್ರಭಾವ ಉಂಟು ಮಾಡುತ್ತಿದೆ. Disclaimer: ಈ ಮೇಲಿನ ವಿಶ್ಲೇಷಣೆಯೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿ ಆಧಾರ ಮೇರೆಗೆ ನೀಡಲಾಗಿದ್ದು, ಇವು ಏಷ್ಯಾನೆಟ್ ಸುವರ್ಣದ ಅಧಿಕೃತ ಅಭಿಪ್ರಾಯವಲ್ಲ. ಈ ಮಾಹಿತಿಯ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ನಾವು ಖಾತರಿಪಡಿಸುತ್ತಿಲ್ಲ. ಈ ಮಾಹಿತಿಯನ್ನು ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾತ್ರ ನೀಡಲಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಕ್ಯಾರಿ ಬ್ಯಾಗ್‌ಗೆ ಹೆಚ್ಚುವರಿ ಶುಲ್ಕ: ದಾವಣಗೆರೆಯ Zudio ಮಳಿಗೆಗೆ ₹ 30,000 ದಂಡ
ಪ್ರಧಾನಿ ಮೋದಿಗೆ ಸಿಕ್ಕ ಉಡುಗೊರೆಗಳ ಹರಾಜಿನಿಂದ ಹರಿದುಬಂತು ಕೋಟಿ ಕೋಟಿ ಹಣ!