
ನವದೆಹಲಿ(ಸೆ.15): ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಂದು ಇಳಿಕೆ ಕಂಡುಬಂದಿದೆ. ಬುಲಿಯನ್ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ದರ 200 ರೂ. ಇಳಿಕೆಯಾಗಿದ್ದು 31,400 ರೂ.ಗಳಷ್ಟು ದಾಖಲಾಗಿದೆ.
ಸ್ಥಳೀಯ ಚಿನ್ನದ ಆಭರಣ ತಯಾರಕರಿಂದ ಬೇಡಿಕೆ ಕುಸಿದಿರುವುದು, ಜಾಗತಿಕ ಮಾರುಕಟ್ಟೆಯಲ್ಲಿ ಈ ಅಮೂಲ್ಯ ಲೋಹಕ್ಕೆ ಬೇಡಿಕೆ ತುಸು ಕಡಿಮೆಯಾಗಿರುವುದೇ ಬೆಲೆ ಇಳಿಕೆಗೆ ಕಾರಣ ಎಂದಿದ್ದಾರೆ ಬುಲಿಯನ್ ಟ್ರೇಡರ್ಸ್.
ಚಿನ್ನದ ದರದ ಜತೆಗೆ ಬೆಳ್ಳಿ ಬೆಲೆಯಲ್ಲೂ ಇಳಿಕೆಯಾಗಿದೆ. ಕೆ.ಜಿ ಬೆಳ್ಳಿ ಬೆಲೆ 250 ರೂ.ಗಳಷ್ಟು ಇಳಿಕೆಯಾಗಿದ್ದು 37,650 ರೂ.ಗಳಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.