
ನವದೆಹಲಿ(ಅ.24): ಟೆಲಿಕಾಂ ವಲಯದಲ್ಲಿ ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ಹೊತ್ತಿಗೆ 65 ಸಾವಿರ ಉದ್ಯೋಗಗಳಿಗೆ ಕತ್ತರಿ ಬೀಳಲಿದೆ ಎಂಬ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ.
ಟೆಲಿಕಾಂ ಕಂಪನಿಗಳ ವಿಲೀನ, ಟವರ್ ಕಂಪನಿಗಳು ಮತ್ತು ರೀಟೇಲ್ ಘಟಕಗಳನ್ನು ಲಾಭದಾಯಕವಾಗಿ ವಿನ್ಯಾಸಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಈ ವಲಯದಲ್ಲಿ ಸಾವಿರಾರು ಉದ್ಯೋಗ ಕಡಿತದ ಸಾಧ್ಯತೆಗಳಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಗ್ರಾಹಕ ಸೇವೆಗಳು, ಹಣಕಾಸು ವ್ಯವಹಾರಗಳು ಮತ್ತಿತರ ವಿಭಾಗಗಳಲ್ಲಿ ಮಾರ್ಚ್ 31, 2019ರ ಹೊತ್ತಿಗೆ 65 ಸಾವಿರಕ್ಕೂ ಹೆಚ್ಚು ಟೆಲಿಕಾಂ ಸಿಬ್ಬಂದಿ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಟೀಮ್‌ಲೀಸ್ ಸರ್ವೀಸಸ್ ಅಂದಾಜು ಮಾಡಿದೆ. ಗ್ರಾಹಕ ಸೇವೆ ವಿಭಾಗದಲ್ಲಿ 8 ಸಾವಿರ, ಹಣಕಾಸು ವ್ಯವಹಾರಗಳ ವಿಭಾಗದಲ್ಲಿ ಕನಿಷ್ಠ 7 ಸಾವಿರ ಸಿಬ್ಬಂದಿ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಪ್ರಸ್ತುತ ದೇಶದ ದೂರ ಸಂಪರ್ಕ ವಲಯದಲ್ಲಿ 25 ಲಕ್ಷ ಉದ್ಯೋಗಿಗಳಿದ್ದಾರೆ ಎಂದು ಹೇಳಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.