ಬಂಗಾರದ ಬೆಲೆ ಲಕ್ಷಕ್ಕಿಂತಲೂ ಕಡಿಮೆಯಾಗುತ್ತಾ? ಇನ್ವೆಸ್ಟ್ ಮಾಡೋರು ಏನು ಮಾಡಿದರೆ ಒಳ್ಳೇದು? ತಜ್ಞರು ಹೇಳೋದೇನು?

Published : Feb 18, 2026, 02:14 PM IST
gold price today

ಸಾರಾಂಶ

ಹಳದಿ ಲೋಹ ಬಂಗಾರ ಹಾಗೂ ಬೆಳ್ಳಿ ದಿನಾಲೂ ಹಾವು ಏಣಿ ಆಟವಾಡುತ್ತಿದೆ. ಒಂದಿನ ಸಾವಿರಗಟ್ಟಲೆ ಕಡಿಮೆಯಾಗುವ ಬಂಗಾರದ ಬೆಲೆ ಮತ್ತೊಂದು ದಿನ ಮತ್ತೆ ಕೈಗೆ ಸಿಗದ ಗಗನ ಕುಸುಮವಾಗುತ್ತದೆ. ಅಷ್ಟಕ್ಕೂ ಮಾರ್ಕೆಟ್ ತಜ್ಞರು ಈ ಬಗ್ಗೆ ಹೇಳುವುದೇನು?

ಬೆಂಗಳೂರು: ಆಭರಣ ಪ್ರಿಯರಿಗೆ ಖುಷಿ ನೀವು ಸುದ್ದಿಯೊಂದನ್ನು ಮಾರ್ಕೆಟ್ ತಜ್ಞರು ಕೊಟ್ಟಿದ್ದಾರೆ. ಮದ್ವೆಯೋ, ಮತ್ತೊಂದು ಶುಭ ಕಾರ್ಯವೋ ಇದ್ದಲ್ಲಿ ಅನಿವಾರ್ಯವಾಗಿ ಆಭರಣವನ್ನು ಕೊಳ್ಳುತ್ತಾರೆ ಮಂದಿ. ಆದರೆ, ದೊಡ್ಡ ಮಟ್ಟದಲ್ಲಿ ಇನ್ವೆಸ್ಟ್ ಮಾಡೋರು ಈ ಹಳದಿ ಲೋಹದ ಮೇಲೆ ಇನ್ವೆಸ್ಟ್ ಮಾಡಬಹುದೋ, ಬೇಡ್ವೋ ಎಂಬ ಗೊಂದಲದಲ್ಲಿದ್ದಾರೆ. ಅದಕ್ಕೆ ತಜ್ಞರು ಏನು ಹೇಳುತ್ತಾರೆ. ನಾವು ಹೇಳುತ್ತೇವೆ ಕೇಳಿ.

ಇಷ್ಟು ದಿನ ಬದ್ಧವೈರಿಗಳಾಗಿದ್ದ ಅಮೆರಿಕಾ ಹಾಗೂ ರಷ್ಯಾ ನಡುವಿನ ಸಂಬಂಧ ಸುಧಾರಿಸಿ, ವ್ಯಾಪಾರ ವಹಿವಾಟು ಹೆಚ್ಚಿದ ಬೆನ್ನಲ್ಲೇ ಮುಂದಿನ ವರ್ಷ ಚಿನ್ನದ ಬೆಲೆಯೂ 10 ಗ್ರಾಮ್‌ಗೆ 90 ಸಾವಿರದಿಂದ ಒಂದು ಲಕ್ಷದವರೆಗೆ ಆಗಬಹುದು ಎಂದು ಅಂದಾಜಿಸಲಾಗುತ್ತಿದೆ. ಇದೀಗ 1 ಲಕ್ಷದ 40 ಸಾವಿರದಿಂದ 1 ಲಕ್ಷದ 80 ಸಾವಿರದವರೆಗೂ ಚಿನ್ನದ ವಹಿವಾಟು ನಡೆಯುತ್ತಿದ್ದು, ದೊಡ್ಡ ಮಟ್ಟದಲ್ಲಿ ಇನ್ವೆಸ್ಟ್ ಮಾಡದಿದ್ದರೆ ಒಳ್ಳೇದು ಎನ್ನೋದು ತಜ್ಞರ ಅಭಿಪ್ರಾಯ.

ಈಗ್ಗೆ ಕೆಲವು ದಿನಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಹಿಂದೆಂದೂ ಕಾಣದಷ್ಟು ಮಟ್ಟಿಗೆ ಮೇಲೇರುತ್ತಿದ್ದು, ಬೆಲೆಯಲ್ಲಿ ಇತಿಹಾಸ ಸೃಷ್ಟಿಸುತ್ತಿದೆ. ಆದರೆ, ಏರಿದಷ್ಟೇ ಫಾಸ್ಟಾಗಿ ಅಲ್ಲದಿದ್ದರೂ, ನಿಧಾನವಾಗಿಯಾದರೂ ಚಿನ್ನದ ಬೆಲೆ ಕುಸಿಯುತ್ತಿದೆ. ಇದರಿಂದ ಬಂಗಾರ ಪ್ರಿಯರು ಫುಲ್ ಖುಷಿಯಾಗಿದ್ದಾರೆ. ಆದರೆ, ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿರುವ ಬಂಗಾರ ಪ್ರಿಯರಿಗೆ ತುಸು ಆತಂಕ ಸೃಷ್ಟಿಸುವ ಸುದ್ದಿಯೊಂದು ಹೊರ ಬಿದ್ದಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆ ಹೇಗಿದೆ?

ರಷ್ಯಾ-ಉಕ್ರೇನ್ ಯುದ್ಧ ಭೀತಿ ತಣ್ಣಗಾಗುವ ಸುಳಿವಿದ್ದು, ನಂತರ ರಷ್ಯಾ ಮತ್ತೆ ಡಾಲರ್‌ನಲ್ಲಿಯೇ ವಹಿವಾಟು ಮುಂದುವರಿಸಬಹುದೆಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ಬ್ಲೂಮ್‌ಬರ್ಗ್ ಹೇಳಿದೆ. ಇದು ಏರಿಕೆ ಕಾಣುತ್ತಿರುವ ಬಂಗಾರದ ಮೇಲೆ ಸಹಜವಾಗಿಯೇ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ. ರಷ್ಯಾ ಮತ್ತು ಅಮೆರಿಕ ಹೊಸ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕುವ ಸುಳಿವಿದ್ದು, ಈ ಒಪ್ಪಂದದಲ್ಲಿ Fossil Fuel, Natural Gas, Raw Oil ಸೇರಿ ಕೆಲವು ಅಗತ್ಯಗತ್ಯ ಉತ್ಪನ್ನಗಳ ಜತೆ ಚಿನ್ನವೂ ಸೇರಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಏರುಗತಿಯಲ್ಲಿರುವ ಚಿನ್ನದ ಬೆಲೆ ಸಹಜವಾಗಿಯ ನೆಲಕ್ಕೆ ಅಪ್ಪಳಿಸಿದರೆ. ಈಗಿರುವುದಕ್ಕಿಂತ ಅರ್ಧಕ್ಕರ್ಧ ಬೆಲೆ ಕಡಿಮೆಯಾಗುವ ಸಾಧ್ಯತೆಯೂ ಇದೆ ಎಂದಿದ್ದಾರೆ.

ಇವತ್ತೇನಿದೆ ಬಂಗಾರದ ಗತ್ತು?

ಫೆಬ್ರವರಿ 18, 2026ರಂದು 10 ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆ 153,430 ರೂ. ಇದ್ದು, ಹಿಂದಿನ ದಿನದ ಮಾರುಕಟ್ಟೆ ವಹಿವಾಟಿಗಿಂತ ಸುಮಾರು 1,570 ರೂ ಹೆಚ್ಚಾಗಿದೆ. ಅದೇ 22 ಕ್ಯಾರಟ್ ಚಿನ್ನದ ಬೆಲೆ 1 ಲಕ್ಷದ 40 ಸಾವಿರ ಪ್ರತೀ ಹತ್ತು ಗ್ರಾಮಿಗಿದೆ.

ಸಹಜವಾಗಿ ಭಾರತದಲ್ಲಿ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ ಮೇಲೆ ಪ್ರಭಾವ ಬೀರುತ್ತಿದ್ದು, ಅಮೆರಿಕದ ಡಾಲರ್ ಸಹ ಪರಿಣಾಮ ಬೀರಲಿದೆ. ಚಿನ್ನದ ಮೇಲಿನ ಆಮದು ಸುಂಕವೂ ಚಿನ್ನದ ಬೆಲೆ ಹಾವು ಏಣಿ ಆಟವಾಡಲು ಪ್ರಮುಖ ಕಾರಣವಾಗಲಿದೆ.

ಎಂದಿನಂತೆ ಭಾರತದಲ್ಲಿ ದುಬೈಗಿಂತಲೂ ಚಿನ್ನದ ಬೆಲೆ ಹೆಚ್ಚಿದ್ದು, ಭಾರತದಲ್ಲಿ 24 ಕ್ಯಾರಟ್‌ಗೆ 153,430 ರೂ ಇದ್ದರೆ ದುಬೈನಲ್ಲಿ 146,063 ರೂ. ಇದೆ. ಅಂದರೆ 7,347 ರೂ.ನಷ್ಟು ಕಡಿಮೆ ಇದ್ದು, ಇದು ಬಹುತೇಕ ಶೇ.5.04ರಷ್ಟು ಕಡಿಮೆಯಾಗಲಿದೆ. ಅಲ್ಲದೇ 22ಕೆ ಹಾಗೂ 18 ಕೆ ಚಿನ್ನದ ಬೆಲೆಯೂ ದುಬೈಗೆ ಹೋಲಿಸಿದಲ್ಲಿ, ಭಾರತದಲ್ಲಿ ಹೆಚ್ಚಿದೆ.

ಚಿನ್ನದ ಬೆಲೆ ಕುಸಿತದ ಹಾದಿ ಕಾಣುವ ನಿರೀಕ್ಷೆ ಇತ್ತು. ಆದರೆ ಯುಎಸ್ ಫೆಡರಡಲ್ ರಿಸರ್ವ್ ಸೆಂಟ್ರಲ್ ಬ್ಯಾಂಕ್ ಗೌರ್ನರ್ ಮಿಶೇಲ್ ಬರ್ ಪ್ರಕಾರ ಇನ್ನು ಕೆಲವು ದಿನಗಳ ಕಾಲ ಸೆಂಟ್ರಲ್ ಬ್ಯಾಂಕ್ ಬಡ್ಡಿ ದರವನ್ನು ಬದಲಾಯಿಸುವುದಿಲ್ಲ, ಎಂದಿದ್ದಾರೆ. ಆದರೆ, ಶಿಕಾಗೋ ಫೆಡ್ ಪ್ರೆಸಿಡೆಂಟ್ ಆಸ್ಟಿನ್ ಗೂಲ್‌ಸ್ಬೀ ಪ್ರಕಾರ ಈ ವರ್ಷದ ಕೊನೆಯಲ್ಲಿ ಹಣದುಬ್ಬರ ನಿರೀಕ್ಷೆಯಂತಿದ್ದರೆ, ಹಲವು ರೇಟ್ ಕಟ್ ಆಗುವ ನಿರೀಕ್ಷೆ ಇದೆ ಎಂದಿದ್ದಾರೆ.

ಅದೇ ಚೀನಾ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಇಳಿದಿದ್ದು, ಲೂನಾರ್ ಹೊಸ ವರ್ಷದ ರಜೆ ಪ್ರಯುಕ್ತ ಟ್ರೇಡಿಂಗ್ ಕ್ಲೋಸ್ ಆಗಿತ್ತು. ಅಮೆರಿಕ ಹಾಗೂ ಇರಾನ್ ನಡುವೆ ಯುದ್ಧ ಭೀತಿ ಕಡಿಮೆಯಾಗುತ್ತಿರುವ ಹಿನ್ನೆಲೆಯೂ ಚಿನ್ನದ ಬೆಲೆ ಮೇಲೆ ಪರಿಣಾಮ ಬೀರುತ್ತಿದೆ. ಹಲವು ಅಂತಾರಾಷ್ಟ್ರೀಯ ವ್ಯಾಪಾರ ವ್ಯವಹಾರದ ಪ್ರಗತಿಯಂತೆ ಇನ್ನು ಕೆಲವು ದಿನಗಳಲ್ಲಿ ಬಂಗಾರದ ಬೆಲೆಯಲ್ಲಿ ಏರಿಳಿತ ಕಾಣಲಿದೆ. ಫೆಡರಲ್ ಪಾಲಿಸಿಯಂತೆ ಚಿನ್ನದ ಬೆಲೆ ಏರಿಳಿತ ಕಾಣಲಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯನ್ನು ಪರಿಗಣಿಸಿ, ಹೂಡಿಕೆ ಮಾಡಬೇಕೆಂದು ಸಗಟು ಹೂಡಿಕೆದಾರರಿಗೆ ತಜ್ಞರು ಸಲಹೆ ನೀಡುತ್ತಿದ್ದಾರೆ. ಕೇವಲ ಭಾರತೀಯ ಚಿನ್ನದ ಬೆಲೆ ನೋಡಿ ಯಾವುದೇ ನಿರ್ಧಾರ ಕೈಗೊಳ್ಳದಿದ್ದರೆ ಒಳ್ಳೇದು.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಸತತ 2 ದಿನ ಭಾರೀ ಇಳಿಕೆ ಕಂಡಿದ್ದ ಚಿನ್ನದ ಬೆಲೆ, ಇವತ್ತಿನ ರೇಟ್ ಏನಿದೆ? ಬೆಳ್ಳಿ ಬೆಲೆಯಲ್ಲಿ ಮತ್ತೆ ಕುಸಿತ!
Bengaluru: ಜಂಟಿಯಾಗಿ ಎಐ ಸೇವೆಗಾಗಿ ಮೈತ್ರಿ ಮಾಡಿಕೊಂಡ ಆ್ಯಂಥ್ರೋಪಿಕ್‌-ಇನ್ಫೋಸಿಸ್‌