ಒಟ್ಟು 2 ಸಾವಿರ ರೂ. ಇಳಿದ ಚಿನ್ನ: ಮತ್ತಷ್ಟು ಇಳಿಕೆಯ ಮುನ್ಸೂಚನೆ!

By Suvarna News  |  First Published Jan 14, 2020, 5:03 PM IST

ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಗಮನಾರ್ಹ ಇಳಿಕೆ| ದೇಶೀಯ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ ಇದೀಗ 39,328 ರೂ.| ಕಳೆದೊಂದು ವಾರದಲ್ಲಿ ಬರೋಬ್ಬರಿ 2 ಸಾವಿರ ರೂ. ಇಳಿಕೆ| ದೇಶೀಯ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ ಇದೀಗ 46,060 ರೂ.| ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಔನ್ಸ್ ಚಿನ್ನದ ಬೆಲೆ 1,538.76 ಡಾಲರ್|


ನವದೆಹಲಿ(ಜ.14): ಹೊಸ ವರ್ಷದ ಆರಂಭದಲ್ಲಿ ಏರಿಕೆಯತ್ತ ಮುಖ ಮಾಡಿದ್ದ ಚಿನ್ನ ಹಾಗೂ ಬೆಳ್ಳಿಯ ದರ, ಕಳೆದೊಂದು ವಾರದಿಂದ ಮತ್ತೆ ಇಳಿಕೆಯ ಹಳಿಯ ಮೇಲೆ ಸಾಗುತ್ತಿದೆ.

ಮಲ್ಟಿ ಕಮೋಡಿಟಿ ಎಕ್ಸಚೇಂಜ್'ನಲ್ಲಿ ಚಿನ್ನದ ದರದಲ್ಲಿ ಶೇ.0.55ರಷ್ಟು ಇಳಿಕೆಯಾಗಿದ್ದು, ದೇಶೀಯ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ ಇದೀಗ 39,328 ರೂ. ಆಗಿದೆ.

Latest Videos

ಇಂದು 10 ಗ್ರಾಂ ಚಿನ್ನದ ದರದಲ್ಲಿ 218 ರೂ. ಇಳಿಕೆಯಾಗಿದ್ದು, ಕಳೆದೊಂದು ವಾರದಲ್ಲಿ ಬರೋಬ್ಬರಿ 2 ಸಾವಿರ ರೂ. ಇಳಿಕೆಯಾಗಿದೆ ಎಂದು ತಜ್ಞರು ಖಚಿತಪಡಿಸಿದ್ದಾರೆ.

ಅದರಂತೆ ಬೆಳ್ಳಿ ಬೆಲೆಯಲ್ಲೂ ಗಮನಾರ್ಹ ಇಳಿಕೆ ಕಂಡುಬಂದಿದ್ದು, ಮಲ್ಟಿ ಕಮೋಡಿಟಿ ಎಕ್ಸಚೇಂಜ್'ನಲ್ಲಿ ಬೆಳ್ಳಿ ಬೆಲೆಯಲ್ಲಿ ಶೇ.0.82ರಷ್ಟು ಇಳಿಕೆಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ಇದೀಗ 46,060 ರೂ. ಆಗಿದೆ.

ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ದರದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದ್ದು, ಶೇ.0.6ರಷ್ಟು ಇಳಿಕೆಯಾಗಿರುವ ಚಿನ್ನದ ಬೆಲೆ ಒಂದು ಔನ್ಸ್'ಗೆ 1,538.76 ಡಾಲರ್ ಆಗಿದೆ.

click me!