Gold Silver Price: ಬೆಳ್ಳಿ ಖರೀದಿಸೋರಿಗೆ ಶಾಕ್, ಚಿನ್ನ ಕೊಳ್ಳೋರಿಗೆ ಖುಷಿ; ಬೆಳ್ಳಿ ದರ ಏರಿಕೆ, ಚಿನ್ನದ ಬೆಲೆ ಇಳಿಕೆ

Suvarna News   | Asianet News
Published : Dec 29, 2021, 12:18 PM ISTUpdated : Dec 29, 2021, 12:19 PM IST
Gold Silver Price: ಬೆಳ್ಳಿ ಖರೀದಿಸೋರಿಗೆ ಶಾಕ್, ಚಿನ್ನ ಕೊಳ್ಳೋರಿಗೆ ಖುಷಿ; ಬೆಳ್ಳಿ ದರ ಏರಿಕೆ, ಚಿನ್ನದ ಬೆಲೆ ಇಳಿಕೆ

ಸಾರಾಂಶ

ಬೆಂಗಳೂರಿನಲ್ಲಿ ನಿನ್ನೆ ಏರಿಕೆ ಕಂಡಿದ್ದ ಚಿನ್ನದ ದರ ಇಂದು ಇಳಿಕೆ ಕಂಡಿದೆ. ಆದ್ರೆ ಬೆಳ್ಳಿ ಬೆಲೆಯಲ್ಲಿ ಮಾತ್ರ ಗಮನಾರ್ಹ ಏರಿಕೆ ಕಂಡುಬಂದಿದ್ದು, ಖರೀದಿದಾರರು ಹಾಗೂ ಹೂಡಿಕೆದಾರರಿಗೆ ಶಾಕ್ ನೀಡಿದೆ. 

ಬೆಂಗಳೂರು (ಡಿ.29):  ಮಧ್ಯಮ ವರ್ಗದ ಜನರಿಗೆ ಚಿನ್ನ (Gold) ಖರೀದಿ(Purchase) ಅಂದ್ರೆ ದುಬಾರಿ ವೆಚ್ಚ. ಎಷ್ಟೋ ಸಮಯದಿಂದ ಇದಕ್ಕಾಗಿಯೇ ಒಂದಿಷ್ಟು ಹಣ ಕೂಡಿಟ್ಟಿರುತ್ತಾರೆ. ಹೀಗಾಗಿ ಚಿನ್ನಾಭರಣ( Gold Ornaments) ಖರೀದಿಸೋ ಸಮಯದಲ್ಲಿ ಅದರ ಬೆಲೆ, ಗುಣಮಟ್ಟ ಎಲ್ಲವನ್ನೂ ಪರೀಕ್ಷಿಸೋದು ಅಗತ್ಯ. ಏಕೆಂದ್ರೆ ಹಾಲ್ ಮಾರ್ಕ್(Hallmark)ಇಲ್ಲದ ಚಿನ್ನ(Gold) ಖರೀದಿಸಿದ್ರೆ ಪರಿಶುದ್ಧತೆ ಕಡಿಮೆ ಇರೋ ಕಾರಣ ಮುಂದೆ ಅದನ್ನು ಮಾರಾಟ(Sale) ಮಾಡಿದ್ರೆ ನಿಮಗೆ ಕಡಿಮೆ ಹಣ ಸಿಗುತ್ತದೆ. ಹೀಗಾಗಿ ಚಿನ್ನ ಖರೀದಿ ಸಂದರ್ಭದಲ್ಲಿ ಹಾಲ್ ಮಾರ್ಕ್ ಪರಿಶೀಲಿಸಲು ಮರೆಯಬೇಡಿ. ಕಳೆದ ಕೆಲವು ದಿನಗಳಿಂದ ಚಿನ್ನದ ದರದಲ್ಲಿ ನಿರಂತರ ಏರಿಳಿಕೆ ಕಂಡುಬಂದಿದೆ. ಎರಡ್ಮೂರು ದಿನಗಳಿಂದ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆಯಲ್ಲಿ ಇಂದು(ಡಿ.29) ಇಳಿಕೆ ಕಂಡುಬಂದಿದೆ. ಇದು ಚಿನ್ನ ಖರೀದಿಸೋರಿಗೆ ಸ್ವಲ್ಪ ಮಟ್ಟಿಗೆ ನಿರಾಳತೆ ಒದಗಿಸಿದೆ.  ಬೆಂಗಳೂರಿನಲ್ಲಿ ಇಂದು ಬೆಳ್ಳಿ ಖರೀದಿಸೋರಿಗೆ ಶಾಕಿಂಗ್ ನ್ಯೂಸ್ ಇದೆ. ಅದೇನಪ್ಪ ಅಂದ್ರೆ ಬೆಳ್ಳಿ(Silver) ದರದಲ್ಲಿ(Price) ನಿನ್ನೆಗಿಂತ ಇಂದು 3,800ರೂ. ಏರಿಕೆ ಕಂಡುಬಂದಿದೆ. ಆದ್ರೆ ದೇಶದ ಇತರ ಪ್ರಮುಖ ನಗರಗಳಲ್ಲಿ ಮಾತ್ರ ಬೆಳ್ಳಿ (Silver) ದರ ಸ್ಥಿರವಾಗಿದೆ.ಬೆಳ್ಳಿ ಬೆಲೆಯಲ್ಲಿ ಸುಮಾರು ಒಂದು ತಿಂಗಳಿಂದ ನಿರಂತರ ಏರಿಳಿತ ಕಂಡುಬರುತ್ತಿದೆ. ಆದ್ರೆ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಬೆಳ್ಳಿ ಬೆಲೆಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದರ ಏರಿಕೆಯಾಗಿದೆ.  ಹಾಗಾದ್ರೆ ಇಂದು (ಡಿ.29) ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಹೇಗಿದೆ?

ಬೆಂಗಳೂರಿನಲ್ಲಿ(Bengaluru) ದರ ಎಷ್ಟಿದೆ?
ಬೆಂಗಳೂರಿನಲ್ಲಿ (Bengaluru)ಚಿನ್ನದ ಬೆಲೆಯಲ್ಲಿ ಇಂದು 200ರೂ. ಇಳಿಕೆಯಾಗಿದೆ. ನಿನ್ನೆ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ  45,350ರೂ. ಇದ್ದು, ಇಂದು 45,150ರೂ. ಆಗಿದೆ.  24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು  49,260ರೂ. ಇದೆ. ನಿನ್ನೆ 49,480ರೂ. ಇತ್ತು. ಅಂದ್ರೆ ನಿನ್ನೆಗಿಂತ ಇಂದು 220ರೂ. ಇಳಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿ ಇಂದು 3,800ರೂ. ಏರಿಕೆಯಾಗಿದ್ದು, ಒಂದು ಕೆ.ಜಿ. ಬೆಳ್ಳಿ ಬೆಲೆ 66,300ರೂ.ಇದೆ.

Petrol Diesel Rate:ರಾಜ್ಯದಲ್ಲಿ ಇಂಧನ ದರ ಸ್ಥಿರ; ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ ನೋಡಿ

ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ ಇಂದು ಚಿನ್ನದ ಬೆಲೆಯಲ್ಲಿ 10ರೂ. ಇಳಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ನಿನ್ನೆ 47,500ರೂ. ಇದ್ದು, ಇಂದು  47,490ರೂ. ಇದೆ.  24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ 10ರೂ. ಇಳಿಕೆಯಾಗಿ ಇಂದು 51,790ರೂ. ಇದೆ. ಬೆಳ್ಳಿ ದರ ಸ್ಥಿರವಾಗಿದ್ದು, ಇಂದು ಒಂದು ಕೆ.ಜಿ. ಬೆಳ್ಳಿ ದರ 62,500ರೂ. ಆಗಿದೆ. 

ಮುಂಬೈನಲ್ಲಿ ಎಷ್ಟಿದೆ?
ಮುಂಬೈನಲ್ಲಿಇಂದು ಚಿನ್ನದ ದರದಲ್ಲಿ 30ರೂ. ಇಳಿಕೆಯಾಗಿದೆ.  22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು 47,190ರೂ. ಇದೆ. ನಿನ್ನೆ 47, 220ರೂ. ಇತ್ತು.  24 ಕ್ಯಾರಟ್ 10 ಗ್ರಾಂ ಚಿನ್ನದ ದರ ಇಂದು  48,190ರೂ. ಇದೆ.  ನಿನ್ನೆ  48,220ರೂ. ಇತ್ತು. ಬೆಳ್ಳಿ ದರ ಇಂದು ಸ್ಥಿರವಾಗಿದೆ. ಒಂದು ಕೆ.ಜಿ. ಬೆಳ್ಳಿ ಬೆಲೆ 62,500ರೂ.  ಆಗಿದೆ.  

Income Tax Return: ಇ-ಫೈಲಿಂಗ್ ಫೋರ್ಟಲ್ ತಾಂತ್ರಿಕ ಸಮಸ್ಯೆಗಳ ವಿರುದ್ಧ ತೆರಿಗೆದಾರರ ದೂರು; ಗಡುವು ವಿಸ್ತರಣೆಗೆ ಒತ್ತಾಯ

ಚೆನ್ನೈಯಲ್ಲಿ ದರ ಹೀಗಿದೆ
ಚೆನ್ನೈಯಲ್ಲಿ ಇಂದು ಚಿನ್ನದ ದರದಲ್ಲಿ 170ರೂ. ಇಳಿಕೆ ಕಂಡುಬಂದಿದೆ.  22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು 45,270ರೂ.ಇದೆ.ನಿನ್ನೆ 45,440ರೂ. ಇತ್ತು.  24 ಕ್ಯಾರಟ್ 10 ಗ್ರಾಂ ಚಿನ್ನದ ದರ ಇಂದು  49,390ರೂ. ಇದೆ. ನಿನ್ನೆ 49, 580ರೂ. ಇತ್ತು. ಬೆಳ್ಳಿ ದರ ಇಂದು ಸ್ಥಿರವಾಗಿದೆ. ಒಂದು ಕೆ.ಜಿ. ಬೆಳ್ಳಿಗೆ 66,300ರೂ.ಇದೆ.   

"

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಈ ರಾಶಿ ಜನರು ಹೊಸ ವರ್ಷ 2026 ರಲ್ಲಿ ಲಕ್ಷಾಧಿಪತಿಗಳಾಗುತ್ತಾರೆ, ಬಂಪರ್ ಯಶಸ್ಸು, ಸಂತೋಷ ಮತ್ತು ಸಮೃದ್ಧಿ
2026 ರಲ್ಲಿ ಮೇಷ ರಾಶಿಯವರ ಆರ್ಥಿಕ ಸ್ಥಿತಿ ಹೇಗಿರುತ್ತದೆ? AI ಪ್ರಕಾರ ಲಾಭನಾ ಅಥವಾ ನಷ್ಟನಾ?