Gold Silver Price: ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ನಡುವೆ ಚಿನ್ನದ ದರ ಕೊಂಚ ಇಳಿಕೆ, ಬೆಳ್ಳಿ ಬೆಲೆ ಏರಿಕೆ

Published : Jan 16, 2022, 01:29 PM IST
Gold Silver Price: ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ನಡುವೆ ಚಿನ್ನದ ದರ ಕೊಂಚ ಇಳಿಕೆ, ಬೆಳ್ಳಿ ಬೆಲೆ ಏರಿಕೆ

ಸಾರಾಂಶ

*ಮುಂಬೈ ಹೊರತುಪಡಿಸಿ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ *ಬೆಂಗಳೂರಿನಲ್ಲಿ ಬೆಳ್ಳಿ ಬೆಲೆಯಲ್ಲಿ ಕೆ.ಜಿ.ಗೆ 500ರೂ. ಏರಿಕೆ  *ಚೆನ್ನೈ ಹೊರತುಪಡಿಸಿ ದೇಶದ ಉಳಿದ ನಗರಗಳಲ್ಲಿ ಬೆಳ್ಳಿ ದರದಲ್ಲಿ ಏರಿಕೆ

ಬೆಂಗಳೂರು (ಜ.16): ಚಿನ್ನ (Gold)ಹಾಗೂ ಬೆಳ್ಳಿ (Silver) ಮೇಲೆ ವ್ಯಯಿಸೋ ಹಣವನ್ನು ನಾವು ಹೂಡಿಕೆ (Investment)ಎಂದೇ ಪರಿಗಣಿಸುತ್ತೇವೆ. ಚಿನ್ನ (Gold) ಹಾಗೂ ಬೆಳ್ಳಿ (Silver) ಮಾರಾಟ (Sale) ಮಾಡಿದ್ರೆ ಅದಕ್ಕೆ ಆ ದಿನದ ಮಾರುಕಟ್ಟೆ ಮೌಲ್ಯವೇ ಸಿಗೋ ಕಾರಣ ಇಂದು ಖರೀದಿಸಿದ ಚಿನ್ನ ಅಥವಾ ಬೆಳ್ಳಿಯನ್ನು ಕೆಲವು ವರ್ಷಗಳ ಬಳಿಕ ನೀವು ಮಾರಾಟ (Sale) ಮಾಡಿದ್ರೆ ನಿಮಗೆ ಉತ್ತಮ ರಿಟರ್ನ್ಸ್ (Returns)ಸಿಗೋದು ಖಚಿತ. ಇನ್ನು ಕೆಲವರು ಹಣ ಗಳಿಸೋ ಉದ್ದೇಶದಿಂದಲೇ ಚಿನ್ನ ಹಾಗೂ ಬೆಳ್ಳಿ ಮೇಲೆ ಹೂಡಿಕೆ (Invest) ಮಾಡುತ್ತಾರೆ. ಆದ್ರೆ ಕೊರೋನಾ (Corona) ಮೂರನೇ ಅಲೆ ದೇಶಾದ್ಯಂತ ತನ್ನ ಅರ್ಭಟ ಪ್ರಾರಂಭಿಸಿದೆ. ಹೀಗಾಗಿ ಚಿನ್ನ ಹಾಗೂ ಬೆಳ್ಳಿ ಬೇಡಿಕೆ ಮೇಲೆ ಇದು ಪರಿಣಾಮ ಬೀರಿದೆ. ಮುಂದಿನ ದಿನಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರದ ಮೇಲೂ ಇದು ಪರಿಣಾಮ ಬೀರೋ ಸಾಧ್ಯೆತಯಿದೆ. ಕೊರೋನಾ (Corona) ಮೊದಲನೇ ಅಲೆ ಸಮಯದಲ್ಲಿ ಚಿನ್ನದ ಬೆಲೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿತ್ತು. ಕಳೆದ ಸಾಲಿನ ಜನವರಿ ನಂತರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿತ್ತು. ಈ ಬಾರಿ ಕೂಡ ಕೊರೋನಾ ಕಾರಣಕ್ಕೆ ಮುಂದಿನ  ದಿನಗಳಲ್ಲಿ ಚಿನ್ನ (Gold) ಹಾಗೂ ಬೆಳ್ಳಿ (Silver) ಬೆಲೆಯಲ್ಲಿ (Price) ಏರಿಕೆಯಾಗೋ ಸಾಧ್ಯತೆಯನ್ನು ಕೂಡ ತಳ್ಳಿ ಹಾಕುವಂತಿಲ್ಲ. ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿಇಂದು (ಜ.16) ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ?

ಬೆಂಗಳೂರಿನಲ್ಲಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ (Bengaluru)ಚಿನ್ನದ ಬೆಲೆಯಲ್ಲಿಇಂದು ನಿನ್ನೆಗಿಂತ 10ರೂ. ಇಳಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 44,990ರೂ.ಇದ್ದು, ನಿನ್ನೆ 45,000ರೂ. ಇತ್ತು. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 49,100 ರೂ.ಇದ್ದು,ಇಂದು 10ರೂ. ಇಳಿಕೆಯಾಗಿ 49,090ರೂ.ಇದೆ. ಇನ್ನು ಬೆಳ್ಳಿ ದರದಲ್ಲಿ ನಿನ್ನೆಗಿಂತ ಇಂದು  500ರೂ. ಏರಿಕೆಯಾಗಿದೆ. ಒಂದು ಕೆ.ಜಿ.ಬೆಳ್ಳಿಗೆ ನಿನ್ನೆ 65,000ರೂ.ಇತ್ತು. ಇಂದು 65,500ರೂ. ಇದೆ. 

Petrol Diesel Rate:ಎರಡೂವರೆ ತಿಂಗಳಿಂದ ಯಥಾಸ್ಥಿತಿ ಕಾಯ್ದುಕೊಂಡ ಪೆಟ್ರೋಲ್, ಡೀಸೆಲ್ ಬೆಲೆ; ರಾಜ್ಯದಲ್ಲಿ ಇಂದಿನ ದರ ಹೀಗಿದೆ

ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ (Delhi)  22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇಂದು 47,140ರೂ. ಆಗಿದ್ದು, ನಿನ್ನೆ 47,150ರೂ. ಇತ್ತು. ಅಂದ್ರೆ ನಿನ್ನೆಗಿಂತ ಇಂದು 10ರೂ. ಇಳಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ 10ರೂ. ಇಳಿಕೆಯಾಗಿದೆ. . ನಿನ್ನೆ 51,440 ರೂ. ಇತ್ತು,ಇಂದು 51,430ರೂ. ಆಗಿದೆ. ಬೆಳ್ಳಿ ದರದಲ್ಲಿಇಂದು 100ರೂ.ಏರಿಕೆಯಾಗಿದೆ. ನಿನ್ನೆಒಂದು ಕೆ.ಜಿ.ಬೆಳ್ಳಿಗೆ 61,600ರೂ.ಇತ್ತು.ಆದ್ರೆ ಇಂದು 61,700ರೂ. ಆಗಿದೆ. 

ಮುಂಬೈನಲ್ಲಿಎಷ್ಟಿದೆ ದರ?
ಮುಂಬೈನಲ್ಲಿ(Mumbai)  22 ಕ್ಯಾರಟ್10 ಗ್ರಾಂ ಚಿನ್ನಕ್ಕೆ ನಿನ್ನೆ 47,080ರೂ.ಇದ್ದು,ಇಂದು 10ರೂ. ಏರಿಕೆ ಕಂಡು 47,090ರೂ.ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ49,080ರೂ.ಇತ್ತು,ಇಂದು 10ರೂ. ಏರಿಕೆಯಾಗಿ 49,090ರೂ. ಆಗಿದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 61,600ರೂ.ಇತ್ತು.ಆದ್ರೆ ಇಂದು 61,700ರೂ. ಆಗಿದೆ. ಅಂದ್ರೆ ನಿನ್ನೆಗಿಂತ ಇಂದು 100 ರೂ.ಏರಿಕೆಯಾಗಿದೆ.

Business Ideas : 2022ರಲ್ಲಿ ಅತಿ ಹೆಚ್ಚು ಲಾಭ ತಂದುಕೊಡಲಿದೆ ಈ ಬ್ಯುಸಿನೆಸ್!

ಚೆನ್ನೈಯಲ್ಲಿ ದರ ಹೀಗಿದೆ
ಚೆನ್ನೈಯಲ್ಲಿ (Chennai) 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು  45,340ರೂ.ಇದೆ. ನಿನ್ನೆ 45,370ರೂ.ಇತ್ತು. ಅಂದ್ರೆ ನಿನ್ನೆಗಿಂತ ಇಂದು 30ರೂ. ಇಳಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ ನಿನ್ನೆಗಿಂತ ಇಂದು 10ರೂ. ಇಳಿಕೆಯಾಗಿದೆ. ನಿನ್ನೆ 49,450 ರೂ.ಇತ್ತು,ಇಂದು 49,440 ರೂ.ಇದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 65,500ರೂ.ಇದ್ದು, ಇಂದು ಕೂಡ ಅಷ್ಟೇ ಇದೆ.   

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Gold Jewellery: ಚಿನ್ನ ಖರೀದಿಸಲು ಈಗ ಲಕ್ಷಗಟ್ಟಲೆ ಹಣ ಬೇಕಿಲ್ಲ: ಹೀಗೆ ಪ್ಲಾನ್ ಮಾಡಿದ್ರೆ ಸಾಕು!
Gold Rate Today: ಬಂಗಾರದ ಬೆಲೆ ದಿಢೀರ್ ₹1,860 ಇಳಿಕೆ! ಗೃಹಿಣಿಯರು ಫುಲ್ ಖುಷ್, ಇಂದಿನ ರೇಟ್ ಎಷ್ಟು?