ಚಿನ್ನ ಕೊಳ್ಳೋರಿಗೆ ಭರ್ಜರಿ ಗುಡ್ ನ್ಯೂಸ್ : ಇಳಿದ ಬೆಲೆ

Published : Sep 22, 2018, 03:31 PM IST
ಚಿನ್ನ ಕೊಳ್ಳೋರಿಗೆ ಭರ್ಜರಿ ಗುಡ್ ನ್ಯೂಸ್ : ಇಳಿದ ಬೆಲೆ

ಸಾರಾಂಶ

ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದ ಪರಿಣಾಮವಾಗಿ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದೆ. ಇದು ಚಿನ್ನ ಕೊಳ್ಳೋರಿಗೆ ಭರ್ಜರಿ ಗುಡ್ ನ್ಯೂಸ್ ಆಗಿದೆ. 

ಮುಂಬೈ : ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿದಿನವೂ ಕೂಡ ಚಿನ್ನದ ದರದಲ್ಲಿ ಏರಿಳಿತ ಕಂಡು ಬರುತ್ತಿದ್ದು, ಇದೀಗ ಮತ್ತೊಮ್ಮೆ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಕಂಡು ಬಂದಿದೆ. 

ಪ್ರತೀ 10 ಗ್ರಾಂ ಚಿನ್ನದ ದರದ ಮೇಲೆ 250 ರು. ಇಳಿಯುವ ಮೂಲಕ  31,450ರು.ನಷ್ಟಾಗಿದೆ. 

ಸ್ಥಳೀಯ ಮಾರುಕಟ್ಟೆಯಲ್ಲಿ ಆಭರಣ ಮಾರಾಟಗಾರರಿಂದ ಬೇಡಿಕೆ ಕುಸಿದ ಪರಿಣಾಮವಾಗಿ ಬೆಲೆಯಲ್ಲಿಯೂ ಇಳಿಕೆ ಕಂಡು ಬಂದಿದೆ. 

ಬೇಡಿಕೆ ಕುಸಿತದ ಪರಿಣಾಮವಾಗಿ ಚಿನ್ನದ ಬೆಲೆಯಲ್ಲಿ ಈ ಪ್ರಮಾಣದ ಇಳಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಆದರೆ ಇದೇ ವೇಳೆ ಬೆಳ್ಳಿಯ ಬೆಲೆಯಲ್ಲಿ ಏರಿಕೆ ಕಂಡು ಬಂದಿದ್ದು ಪ್ರತೀ ಕೆಜಿ ಬೆಳ್ಳಿಯ ಮೇಲೆ 70 ರು.ನಷ್ಟು  ಏರಿಕೆಯಾಗಿದ್ದು ಪ್ರತೀ ಕೆಜಿ ಬೆಳ್ಳಿಯ ಬೆಲೆ  38150 ರು.ನಷ್ಟಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಮಸ್ಕ್‌, ಜೆಫ್‌ ಬೆಬೋಸ್‌, ಅಂಬಾನಿ ಇವರ್ಯಾರೂ ಅಲ್ಲ.. ಇದು ವಿಶ್ವದ ಅತ್ಯಂತ ಶ್ರೀಮಂತ ಕುಟುಂಬ, ಇವರಿಗಿದೆ ಫ್ಲಿಪ್‌ಕಾರ್ಟ್‌ ಲಿಂಕ್‌
ಓಲಾ ಎಲೆಕ್ಟ್ರಿಕ್ ಕಂಪನಿಯ ಮಾರುಕಟ್ಟೆ ಮೌಲ್ಯ ಭಾರೀ ಕುಸಿತ, ಹೂಡಿಕೆದಾರರಿಗೆ ಅಪಾರ ನಷ್ಟ! ಕಾರಣವೇನು?