
ಮುಂಬೈ (ಅ.30): ಬೆಲೆ ಏರಿಕೆ, ಪಿತೃ ಪಕ್ಷ, ಅಧಿಕ ಮಾಸ ಮುಂತಾದವುಗಳು ಚಿನ್ನದ ಬೇಡಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಜುಲೈ-ಸೆಪ್ಟೆಂಬರ್ ಮೂರನೇ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ ಶೇ.30ರಷ್ಟು ಕುಸಿತ ಕಂಡಿದೆ ಎಂದು ವಿಶ್ವ ಚಿನ್ನ ಮಂಡಳಿಯ ವರದಿ ಹೇಳಿದೆ.
ಈ ಅವಧಿಯಲ್ಲಿ ಒಟ್ಟು 123.9 ಟನ್‌ಗಳಷ್ಟುಚಿನ್ನ ಬಿಕರಿಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಇದು 86.6ಟನ್‌ಗಳಷ್ಟುಕಡಿಮೆ.
ಸತತ ಎರಡನೇ ದಿನವೂ ಕುಸಿದ ಚಿನ್ನ, ಖರೀದಿ ಬಲು ಜೋರು! .
ಆದರೆ ಎರಡನೇ ತ್ರೈಮಾಸಿಕಕ್ಕೆ ಹೋಲಿಕೆ ಮಾಡಿದರೆ ಇದು ಅಧಿಕ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಕೇವಲ 64 ಟನ್‌ಗಳಷ್ಟುಚಿನ್ನ ಮಾರಾಟವಾಗಿತ್ತು.
ಇದೇ ವೇಳೆ ಜಾಗತಿಕವಾಗಿಯೂ ಚಿನ್ನದ ಬೇಡಿಕೆ ಶೇ.19ರಷ್ಟುಇಳಿಮುಖವಾಗಿದೆ. 3ನೇ ತ್ರೈಮಾಸಿಕ ಅವಧಿಯಲ್ಲಿ 892.3 ಟನ್‌ಗಳಷ್ಟುಚಿನ್ನ ಬಿಕರಿಯಾಗಿದ್ದು, ಇದು 2009ರ ಬಳಿಕ ದಾಖಲಾದ ಅತೀ ಕಡಿಮೆ ಬೇಡಿಕೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.