Gold Silver Price Today: ಚಿನ್ನದ ದರ ಯಥಾಸ್ಥಿತಿ, ಬೆಳ್ಳಿಯಲ್ಲಿ ಕೊಂಚ ಇಳಿಕೆ

Published : Nov 18, 2022, 01:02 PM ISTUpdated : Nov 18, 2022, 01:58 PM IST
 Gold Silver Price Today: ಚಿನ್ನದ ದರ ಯಥಾಸ್ಥಿತಿ, ಬೆಳ್ಳಿಯಲ್ಲಿ ಕೊಂಚ ಇಳಿಕೆ

ಸಾರಾಂಶ

ಕಳೆದ ತಿಂಗಳ ಕೊನೆಯಲ್ಲಿ ಕೊಂಚ ಇಳಿಕೆ ಕಂಡಿದ್ದ ಚಿನ್ನದ ದರ, ಕಳೆದೊಂದು ವಾರದಿಂದ ಏರಿಗತಿಯಲ್ಲಿದೆ. ಆದರೆ, ಶುಕ್ರವಾರ ದೇಶಾದ್ಯಂತ ಚಿನ್ನದ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದರೆ, ಬೆಳ್ಳಿ ಬೆಲೆಯಲ್ಲಿ ಬದಲಾವಣೆ ಆಗಿದೆ.  

Gold Rate on November 18th 2022: ದೇಶದಲ್ಲಿ ಶುಭ ಕಾರ್ಯಗಳು ಹಾಗೂ ಮದುವೆ ಸಮಾರಂಭಗಳ ಋತುವು ಆರಂಭವಾಗಿರುವ ನಡುವೆ ಚಿನ್ನಕ್ಕೆ ಬೇಡಿಕೆ ಆರಂಭವಾಗಿದೆ. ಕಳೆದ ತಿಂಗಳಲ್ಲಿ ಹಾವು ಏಣಿ ಆಟದಲ್ಲಿದ್ದ ಚಿನ್ನದ ದರ, ಅಂದಾಜು 10 ಗ್ರಾಮ್‌ಗೆ 2500 ರೂಪಾಯಿಯಷ್ಟು ಕಡಿಮೆ ಆಗಿತ್ತು. ಆದರೆ, ಕಳೆದೊಂದು ವಾರದಿಂದ ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ವ್ಯತ್ಯಾಸವಾಗುವುದು ಮಾತ್ರವಲ್ಲ ಸ್ವಲ್ಪ ಮಟ್ಟಿಗೆ ಏರಿಕೆ ಕೂಡ ಕಂಡಿದೆ. ಅದಕ್ಕೆ ಕಾರಣವಾಗಿರುವುದು ಜಾಗತಿಕ ಸ್ಥಿತಿಗತಿ. ಮಹಿಳೆಯರು ಸಾಮಾನ್ಯವಾಗಿ ಆಭರಣ ಪ್ರಿಯರಾಗಿದ್ದು, ಈ ಹಿನ್ನೆಲೆ ಆಭರಣಗಳ ಖರೀದಿ, ವಹಿವಾಟು ಹೆಚ್ಚಿರುತ್ತದೆ. ಅಲ್ಲದೆ, ಚಿನ್ನ (Gold), ಬೆಳ್ಳಿ (Silver) ದರ ಇಳಿಕೆಯಾದರೆ ಮಹಿಳೆಯರ ಮೊಗದಲ್ಲಿ ನಗು ಅರಳುತ್ತದೆ. ಈ ಹಿನ್ನೆಲೆ ಪ್ರತಿನಿತ್ಯ ಹಲವರು ಚಿನ್ನ, ಬೆಳ್ಳಿ ದರವನ್ನು ಪರಿಶೀಲಿಸುತ್ತಾರೆ.  ಇಂದು ಬೆಂಗಳೂರಿನಲ್ಲಿ (Bengaluru) ಬಂಗಾರ, ಬೆಳ್ಳಿ ಬೆಲೆ ಎಷ್ಟಿದೆ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ದರ ಹೇಗಿದೆ ಎಂಬ ಬಗ್ಗೆ ತಿಳ್ಕೋಬೇಕಾ.. ಇಲ್ಲಿದೆ ವಿವರ..

ಇಂದು ದೇಶದ ಬಹುತೇಕ ಪ್ರದೇಶಗಲ್ಲಿ ಬಂಗಾರದ ದರ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೆ ಬೆಳ್ಳಿಯ ಬೆಲೆಯಲ್ಲಿ ಕೆಲವೆಡೆ ಕುಸಿತವಾಗಿದೆ ಇಂದಿನ ಬೆಲೆ ವಿವರ ಹೀಗಿದೆ ನೋಡಿ..

Petrol, Diesel Price Today: ಉಡುಪಿ, ಹಾಸನದಲ್ಲಿ ಪೆಟ್ರೋಲ್‌ ಬೆಲೆ ಕೊಂಚ ಏರಿಕೆ

ಒಂದು ಗ್ರಾಂ ಚಿನ್ನ (1GM)

  • 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,880
  • 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,323

ಎಂಟು ಗ್ರಾಂ ಚಿನ್ನ (8GM)

  • 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 39,040
  • 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 42,584

ಹತ್ತು ಗ್ರಾಂ ಚಿನ್ನ (10GM)

  • 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 48,800
  • 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 53,230

ನೂರು ಗ್ರಾಂ ಚಿನ್ನ (100GM)

  • 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ.  4,88,000
  • 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,32,300

ಅಂಬಾನಿ ಬಳಿಕ ಅದಾನಿಯೂ ವಿದೇಶದಲ್ಲಿ ನೆಲೆಸಲು ಸಿದ್ಧತೆ?

ಬೆಂಗಳೂರು ಹಾಗೂ ಇತರೆಡೆ ಇಂದಿನ ಗೋಲ್ಡ್ ರೇಟ್
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 48,800 ರೂ. ಆಗಿದ್ದು, ನಿನ್ನೆಯ ಬೆಲೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ದೇಶದ ಪ್ರಮುಖ ಮೆಟ್ರೋ ನಗರಗಳಾದ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾದಲ್ಲಿ ಕ್ರಮವಾಗಿ ಚಿನ್ನದ ಬೆಲೆ ರೂ. 49,510, ರೂ. 48,750, ರೂ. 48,750 ಇದೆ. ಚೆನ್ನೈನಲ್ಲಿ ಮಾತ್ರವೇ 10 ಗ್ರಾಮ್‌ ಚಿನ್ನದ ದರದಲ್ಲಿ ಕೊಂಚ ಏರಿಕೆಯಾಗಿದೆ. ಅದೇ ರೀತಿ, ರಾಷ್ಟ್ರ ರಾಜಧಾನಿ ಹೊಸ ದೆಹಲಿಯಲ್ಲಿ ಸಹ ಚಿನ್ನದ ಬೆಲೆ ಶುಕ್ರವಾರ 48,900 ರೂ. ಆಗಿದ್ದು, ಯಥಾಸ್ಥಿತಿಯಲ್ಲಿದೆ.

ಇಂದಿನ ಬೆಳ್ಳಿ ದರ
ಇನ್ನು ದೇಶದಲ್ಲಿ ಬೆಳ್ಳಿಯ ದರದಲ್ಲಿ ಕೊಂಚ ಇಳಿಕೆಯಾಗಿದೆ. ಕೋಲ್ಕತ ಹಾಗೂ ಮುಂಬೈನಲ್ಲಿ 1 ಕೆಜಿ ಬೆಳ್ಳಿ ದರದಲ್ಲಿ ತಲಾ 800 ರೂಪಾಯಿ ಕಡಿಮೆ ಆಗಿದ್ದರೆ, ಉಳಿದ ಮೆಟ್ರೋಪಾಲಿಟಿನ್‌ ನಗರಗಳಲ್ಲಿ ತಲಾ 200 ರೂಪಾಯಿ ಕಡಿಮೆಯಾಗಿದೆ.  ರೂಪಾಯಿ ಮೌಲ್ಯದಲ್ಲಿ ಏರಿಕೆ - ಇಳಿಕೆಯಾದಂತೆ, ಜಾಗತಿಕ ವಿದ್ಯಮಾನಗಳು ಘಟಿಸಿದಂತೆ ಚಿನ್ನ - ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ. 

ಬೆಂಗಳೂರು ಹಾಗೂ ಇತರೆಡೆ ಸಿಲ್ವರ್ ರೇಟ್
ದೇಶದ ಹಲವು ನಗರಗಳಲ್ಲಿ ಬೆಳ್ಳಿ ದರದಲ್ಲಿ ಇಳಿಕೆಯಾಗಿದೆ. ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಕೆಜಿಯ ಮೇಲೆ 200 ರೂಪಾಯಿ ಕಡಿಮೆಯಾಗಿದ್ದರೆ, ಉಳಿದ ನಗರಗಳಲ್ಲಿ 800 ರೂಪಾಯಿ ಕಡಿಮೆ ಆಗಿದೆ. ಇಂದು, ಬೆಂಗಳೂರಿನಲ್ಲಿ 10 gm, 100 gm, 1000 gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 670, ರೂ. 6,700 ಹಾಗೂ ರೂ. 67,000 ಗಳಾಗಿವೆ. ಇನ್ನು, ದೇಶದ ಇತರೆ ಪ್ರಮುಖ ನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 67,000 ಆಗಿದ್ದರೆ, ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ರೂ. 61,200, ಕೋಲ್ಕತ್ತದಲ್ಲಿ ರೂ. 61,200 ಹಾಗೂ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಸಹ ಇಂದಿನ ಬೆಳ್ಳಿ ದರ ರೂ. 61,200 ಆಗಿದ್ದು, ಸಮ ಪ್ರಮಾಣದಲ್ಲಿ ಇಳಿಕೆಯಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌