
Gold Rate on December 13th 2022: ಹಲವು ದಿನಗಳಿಂದ ಹೆಚ್ಚಾಗುತ್ತಿದ್ದ ಬಂಗಾರದ (Gold) , ದರ ಏರಿಕೆಗೆ ಬ್ರೇಕ್ ಬಿದ್ದಿದ್ದು, ಇದು ಆಭರಣ (Jewellery) ಪ್ರಿಯರ ಮೊಗದಲ್ಲಿ ಸಂತಸ ತಂದಿದೆ. ದೇಶದಲ್ಲಿ ಆಭರಣ ಪ್ರಿಯರು, ಶುಭ ಸಮಾರಂಭಗಳ ಸಂಖ್ಯೆ ಹೆಚ್ಚಿರುತ್ತದೆ. ಈ ಹಿನ್ನೆಲೆ, ಪ್ರತಿನಿತ್ಯ ಹಲವರು ಚಿನ್ನ, ಬೆಳ್ಳಿ (Silver) ದರವನ್ನು ಪರಿಶೀಲಿಸುತ್ತಾರೆ. ಹಾಗೆ, ಸಮಾರಂಭಗಳು ಹೆಚ್ಚಿರುವ ಹಿನ್ನೆಲೆ ಚಿನ್ನ, ಬೆಳ್ಳಿ ಖರೀದಿಯೂ ಹೆಚ್ಚಿರುತ್ತದೆ. ನೀವೂ ಸಹ ಚಿನ್ನ , ಬೆಳ್ಳಿ ಖರೀದಿಗೆ ಪ್ಲ್ಯಾನ್ ಮಾಡಿದ್ದೀರಾ..?
ಇಂದು ಬೆಂಗಳೂರಿನಲ್ಲಿ (Bengaluru) ಬಂಗಾರ, ಬೆಳ್ಳಿ ಬೆಲೆ ಎಷ್ಟಿದೆ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ದರ ಹೇಗಿದೆ ಎಂಬ ಬಗ್ಗೆ ತಿಳ್ಕೋಬೇಕಾ.. ಇಲ್ಲಿದೆ ವಿವರ..
ಇದನ್ನು ಓದಿ: Petrol, Diesel Price Today: ಚಿತ್ರದುರ್ಗದಲ್ಲಿ ಹೆಚ್ಚಾದ, ಚಿಕ್ಕಮಗಳೂರಲ್ಲಿ ಇಳಿಕೆಯಾದ ಪೆಟ್ರೋಲ್ ಡೀಸೆಲ್ ಬೆಲೆ..
ಒಂದು ಗ್ರಾಂ ಚಿನ್ನ (1GM)
ಎಂಟು ಗ್ರಾಂ ಚಿನ್ನ (8GM)
ಹತ್ತು ಗ್ರಾಂ ಚಿನ್ನ (10GM)
ನೂರು ಗ್ರಾಂ ಚಿನ್ನ (100GM)
ಬೆಂಗಳೂರು ಹಾಗೂ ಇತರೆಡೆ ಇಂದಿನ ಗೋಲ್ಡ್ ರೇಟ್
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 49,850 ರೂ. ಆಗಿದ್ದು, ನಿನ್ನೆ ಸಹ ಇಷ್ಟೇ ಬೆಲೆ ಇತ್ತು. ಇನ್ನು, ದೇಶದ ಪ್ರಮುಖ ಮೆಟ್ರೋಪಾಲಿಟನ್ ನಗರಗಳಾದ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾದಲ್ಲಿ ಕ್ರಮವಾಗಿ ಚಿನ್ನದ ಬೆಲೆ ರೂ. 50,400, ರೂ. 49,800, ರೂ. 49,800 ಆಗಿದೆ. ಅದೇ ರೀತಿ, ರಾಷ್ಟ್ರ ರಾಜಧಾನಿ ಹೊಸ ದೆಹಲಿಯಲ್ಲಿ ಸಹ ಚಿನ್ನದ ಬೆಲೆ ಮಂಗಳವಾರ 49,950 ರೂ. ಆಗಿದ್ದು, ನಿನ್ನೆ ಸಹ ಇಷ್ಟೇ ಬೆಲೆ ಇತ್ತು.
ಇಂದಿನ ಬೆಳ್ಳಿ ದರ
ಇನ್ನು, ದೇಶದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಬೆಳ್ಳಿ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ - ಇಳಿಕೆಯಾದಂತೆಯೂ ಚಿನ್ನ - ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ.
ಬೆಂಗಳೂರು ಹಾಗೂ ಇತರೆಡೆ ಸಿಲ್ವರ್ ರೇಟ್
ದೇಶಾದ್ಯಂತ ಇಂದು ಬಂಗಾರದ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಂತೆ ಬೆಳ್ಳಿ ದರದಲ್ಲೂ ವ್ಯತ್ಯಾಸವಾಗಿಲ್ಲ. ಆದರೆ, ಬೆಂಗಳೂರಿನಲ್ಲಿ ಬೆಳ್ಳಿ ದರ ಹೆಚ್ಚಾಗಿದೆ. ಇಂದು, ಬೆಂಗಳೂರಿನಲ್ಲಿ 10 gm, 100 gm, 1000 gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 730, ರೂ. 7,300 ಹಾಗೂ ರೂ. 73,000 ಗಳಾಗಿವೆ. ಇನ್ನು, ದೇಶದ ಇತರೆ ಪ್ರಮುಖ ನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 73,000 ಆಗಿದ್ದು, ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ರೂ. 69,000, ಕೋಲ್ಕತ್ತದಲ್ಲಿ ರೂ. 69,000 ಹಾಗೂ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಇಂದಿನ ಬೆಳ್ಳಿ ದರ ರೂ. 69,000 ಆಗಿದ್ದು, ನಿನ್ನೆ ಸಹ ಇಷ್ಟೇ ದರ ಇತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.