ಮೋಜು – ಮಸ್ತಿ ಜೊತೆ ಸ್ವಂತ ಮನೆ, ಜಿನ್ ಜಿಗಳ ಆಸಕ್ತಿ ಬಹಳ ಭಿನ್ನ

Published : Nov 03, 2025, 01:22 PM IST
Gen Z

ಸಾರಾಂಶ

ಮಿಲೆನಿಯಲ್ಸ್ ಅಂದ್ಕೊಂಡಷ್ಟು ಬೇಜವಾಬ್ದಾರಿ Gen Zಗಳಿಗಿಲ್ಲ. ಜೀವನದ ಬಗ್ಗೆ ಸಾಕಷ್ಟು ಗಂಭೀರವಾಗಿರುವ ಅವ್ರು, ಸ್ವಂತ ಮನೆ ಕನಸು ಕಾಣ್ತಿದ್ದಾರೆ. ಇದು ರಿಯಲ್ ಎಸ್ಟೇಟ್ ಚಿತ್ರಣ ಬದಲಿಸ್ತಿದೆ.

ಜೆನ್ ಜಿ (Gen Z )ಗಳ ಕಮಿಟ್ಮೆಂಟ್ ಇಷ್ಟಪಡೋದಿಲ್ಲ, ಹಾಗಾಗಿ ಬಾಡಿಗೆ ಮನೆಯನ್ನೇ ಹೆಚ್ಚು ಲೈಕ್ ಮಾಡ್ತಾರೆ ಎನ್ನುವ ಗ್ರಹಿಕೆ ಒಂದಿದೆ. ಆದ್ರೆ ಜೆನ್ ಜಿಗಳು ಈ ನಂಬಿಕೆಯನ್ನು ಉಲ್ಟಾ ಮಾಡ್ತಿದ್ದಾರೆ. ಜೆನ್ ಜಿಗಳು, ರಿಯಲ್ ಎಸ್ಟೆಟ್ (Real estate) ಮಾರ್ಕೆಟ್ ಗೆ ಪ್ರವೇಶ ಮಾಡಿಯಾಗಿದೆ. ವರದಿ ಒಂದ್ರ ಪ್ರಕಾರ, ಭಾರತದಲ್ಲಿ ಬಹುತೇಕ ಜೆನ್ ಜಿಗಳು ಬಾಡಿಗೆ ಮನೆ ಬದಲು ಸ್ವಂತ ಮನೆ ಖರೀದಿಗೆ ಆಸಕ್ತಿ ತೋರ್ತಿದ್ದಾರೆ. ಇದು ಮಾರ್ಕೆಟ್ ನಲ್ಲಿ ಗಮನಾರ್ಹ ಬದಲಾವಣೆಯಾಗಿದೆ.

ಸ್ವಂತ ಮನೆ (Own house) ಕನಸು ಕಾಣ್ತಿದ್ದಾರೆ ಜೆನ್ ಜಿಗಳು : 

ಫ್ರಾಂಕ್ ಈ ಬಗ್ಗೆ ವರದಿಯೊ೦ದನ್ನು ಪ್ರಕಟಿಸಿದೆ. ಅದ್ರ ಪ್ರಕಾರ ಭಾರತದಲ್ಲಿ ಶೇಕಡಾ 71 ರಷ್ಟು ಜೆನ್ ಜಿಗಳು ಸ್ವಂತ ಮನೆ ಖರೀದಿಗೆ ಆಸಕ್ತಿ ಹೊಂದಿದ್ದಾರೆ. ಮಿಲೇನಿಯಲ್ಸ್ ಅಂದ್ರೆ 1981 ರಿಂದ 1996ರಲ್ಲಿ ಜನಿಸಿದವರು ಸ್ವಂತ ಮನೆ ಖರೀದಿಗೆ ಈಗ್ಲೂ ಭಯಪಡ್ತಾರೆ. ಉದ್ಯೋಗ ಅನಿಶ್ಚಿತತೆಯಿಂದಾಗಿ ಬಾಡಿಗೆ ಮನೆಗೆ ಅವರು ಆದ್ಯತೆ ನೀಡ್ತಾರೆ. ಕೆಲ್ಸ ಹೋದ್ರೆ, ಮನೆ ಸಾಲ ಹೇಗೆ ತೀರಿಸೋದು ಎನ್ನುವ ಭಯ ಅವರಲ್ಲಿ ಬಲವಾಗಿ ತಳವೂರಿದೆ. ರಿಸ್ಕ್ ತೆಗೆದುಕೊಂಡು ಸ್ವಂತ ಮನೆ ಖರೀದಿ ಮಾಡುವವರ ಸಂಖ್ಯೆ ಇಲ್ಲಿ ಬಹಳ ಕಡಿಮೆ. ಆದ್ರೆ ಜೆನ್ ಜಿಗಳು ಹಾಗಲ್ಲ. ಅವರಿಗೆ ಮನೆ, ಆಸ್ತಿ ಕೇವಲ ಹಣ ಗಳಿಸೋ ಸಾಧವ ಅಲ್ವೇ ಅಲ್ಲ. ಅವರು ಸ್ವಂತ ಮನೆಯನ್ನು ಸ್ಥಿರತೆ, ಗುರುತು, ದೊಡ್ಡ ಕನಸನ್ನು ಈಡೇರಿಸುವ ಸಂಕೇತ ಎನ್ನುವಂತೆ ನೋಡ್ತಾರೆ.

Gen Z: ಮದುವೆಯೇ ಬೇಡ ಅಂತಿರೋ 'ಜೆನ್‌ ಝೀ'.. ಡೇಟಿಂಗ್, ಲಿವ್‌ ಇನ್, ಫ್ರೆಂಡ್‌ಶಿಪ್

ಯಾವ ರೀತಿ ಆಸ್ತಿಯಲ್ಲಿ ಹೂಡಿಕೆ ಮಾಡಬಯಸ್ತಾರೆ ಜೆನ್ ಜಿಗಳು? : 

ವರದಿ ಪ್ರಕಾರ, ಜೆನ್ ಜಿಗಳು ರೆಡಿ ಟು ಮೂವ್ ಗಿಂತ ಈಗಷ್ಟೆ ಕಟ್ಟುತ್ತಿರುವ ಮನೆಗಳ ಮೇಲೆ ಹೂಡಿಕೆ ಮಾಡಲು ಆಸಕ್ತಿ ಹೊಂದಿದ್ದಾರೆ. ಜನರೇಷನ್ ಝಡ್ನ ಶೇಕಡಾ 73 ಜನರು ನಿರ್ಮಾಣ ಹಂತದಲ್ಲಿರುವ ಆಸ್ತಿ ಬಯಸ್ತಾರೆ. ಅವರ ಪ್ರಕಾರ, ನಿರ್ಮಾಣ ಹಂತದಲ್ಲಿರುವ ಮನೆಗಳು ಕಡಿಮೆ ಬೆಲೆಗೆ ಸಿಗುತ್ತವೆ. ಕಂತುಗಳಲ್ಲಿ ಹಣ ಪಾವತಿ ಮಾಡೋದು ಸುಲಭ. ಅಲ್ದೆ ತಮ್ಮ ಮನೆಯನ್ನು ಯಾವೇ ಕಸ್ಟಮೈಸ್ ಮಾಡುವ ಸ್ವಾತಂತ್ರ್ಯ ಸಿಗುತ್ತದೆ ಎಂಬುದು ಇದಕ್ಕೆ ಮುಖ್ಯ ಕಾರಣ. ಇನ್ನು ಜೆನ್ ಜಿಗಳ ಮುಖ್ಯ ಆಯ್ಕೆ ಅಂದ್ರೆ ಅಪಾರ್ಟ್ಮೆಂಟ್. ಸುಮಾರು ಶೇಕಡಾ 70ರಷ್ಟು ಜನರು ಅಪಾರ್ಟ್ ಮೆಂಟ್ ಆಯ್ಕೆ ಮಾಡಿಕೊಳ್ತಿದ್ದಾರೆ. ಅಪಾರ್ಟ್ಮೆಂಟ್ಗಳು ಕಮ್ಯೂನಿಟಿ ಲೈಫ್ ಸ್ಟೈಲ್ ಮತ್ತು ಅಗತ್ಯ ವಸ್ತುಗಳನ್ನು ಆರಾಮವಾಗಿ ಒದಗಿಸೋದ್ರಿಂದ ಜನರು ಇದನ್ನು ಆಯ್ಕೆ ಮಾಡ್ಕೊಳ್ತಿದ್ದಾರೆ. ಆದ್ರೆ ಇದ್ರಲ್ಲೂ ಆಸಕ್ತಿಕರ ವಿಷ್ಯ ಅಂದ್ರೆ ಶೇಕಡಾ 53ರಷ್ಟು ಯುವಕರು ಸ್ವಂತ ಮನೆ, ಆಸ್ತಿ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ಸಣ್ಣ ಜಾಗಕ್ಕಿಂತ ದೊಡ್ಡ ಜಾಗಕ್ಕೆ ಇನ್ವೆಸ್ಟ್ ಮಾಡಲು ಬಯಸ್ತಿದ್ದಾರೆ.

Gen Z honeymoon trends: ಜೆನ್ ಝಿ ಕಪಲ್ ಹನಿಮೂನ್ ರಹಸ್ಯ: ಬದಲಾದ ಯು

ಬೆಂಗಳೂರಿನಂತಹ ಪ್ರಮುಖ ನಗರಗಳಲ್ಲಿ, ಮಿಲೇನಿಯಲ್ಸ್ ಮತ್ತು ಜೆನ್ ಜಿಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇಕಡಾ 30 ರಿಂದ ಶೇಕಡಾ 45 ರಷ್ಟು ಹೆಚ್ಚಿನ ಆಸ್ತಿಗಳನ್ನು ಖರೀದಿಸಿದ್ದಾರೆ. 2024ರಲ್ಲಿ ಆನ್ಲೈನ್ ಆಸ್ತಿ ಪ್ಲಾಟ್ಫಾರ್ಮ್ ನಲ್ಲಿ ಖರೀದಿಯಾದ ಶೇಕಡಾ 60ರಷ್ಟು ಭಾಗವನ್ನು ಮಿಲೇನಿಯಲ್ಸ್ ಮತ್ತು ಜೆನ್ ಜಿ ಕಬಳಿಸಿದೆ. ಮಿಲೇನಿಯಲ್ಸ್ ಮತ್ತು ಜೆನ್ ಜಿಗಳ ಆಯ್ಕೆ ಭಿನ್ನವಾಗಿದೆ. ಇಬ್ಬರೂ ಸ್ವಂತ ಮನೆ ಖರೀದಿ ಕನಸು ಕಾಣ್ತಿದ್ದರು, ಖರೀದಿ ಉದ್ದೇಶ ಬೇರೆ ಬೇರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!