4 ವರ್ಷ ಸುಳ್ಳು ಹೇಳಿದ್ರಾ ಮೋದಿ: ಅವ್ರದ್ದೇ ಡಾಟಾ ಹೇಳ್ತಿದೆ ನೋಡಿ!

By Web Desk  |  First Published Dec 1, 2018, 2:11 PM IST

ಇಷ್ಟು ವರ್ಷ ಜಿಡಿಪಿ ಕುರಿತು ಬರೀ ಸುಳ್ಳು ಹೇಳ್ತಾ ಮೋದಿ ಸರ್ಕಾರ?! ಎರಡನೇ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಶೇ.7.1ಕ್ಕೆ ಕುಸಿತ! ಮೊದಲ ತ್ರೈಮಾಸಿಕ ಅವಧಿಯಲ್ಲಿ ಶೇ.8.2 ರಷ್ಟಿದ್ದ ಜಿಡಿಪಿ! ಸಿಎಸ್ ಒ ಬಿಡುಗಡೆ ಮಾಡಿರುವ ಅಂಕಿ ಅಂಶಗಳು! ಎರಡನೇ ತ್ರೈಮಾಸಿಕದಲ್ಲಿ ಸ್ಥಿರ ಜಿಡಿಪಿ 33.98 ಲಕ್ಷ ಕೋಟಿ ರೂ.


ನವದೆಹಲಿ(ಡಿ.1): ದೇಶದ ಆರ್ಥಿಕ ಅಭಿವೃದ್ಧಿ ದರ(ಜಿಡಿಪಿ) ಎರಡನೇ ತ್ರೈಮಾಸಿಕ ಅವಧಿಯಲ್ಲಿ ಶೇ.7.1ಕ್ಕೆ ಕುಸಿದಿರುವುದು ಸರ್ಕಾರದ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಮೊದಲ ತ್ರೈಮಾಸಿಕ ಅವಧಿಯಲ್ಲಿ ಶೇ.8.2 ರಷ್ಟಿದ್ದ ಜಿಡಿಪಿ, ಎರಡನೇ ತ್ರೈಮಾಸಿಕ ಅವಧಿಯಲ್ಲಿ ಶೇ,7.1 ಕ್ಕೆ ಕುಸಿದಿದೆ.

Latest Videos

undefined

ಸಿಎಸ್ ಒ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಜೂನ್ ತ್ರೈಮಾಸಿಕ ಅವಧಿಯಲ್ಲಿ ಶೇ 8.2ರಷ್ಟು ಬೆಳವಣಿಗೆ ಕಂಡಿದ್ದ ಜಿಡಿಪಿ, ಈಗ ಜುಲೈ- ಸೆಪ್ಟೆಂಬರ್ ಅವಧಿಯಲ್ಲಿ 7.1 ರಷ್ಟು ಮಾತ್ರ ಬೆಳವಣಿಗೆ ಹೊಂದಿದೆ.

ಸ್ಥಿರ ಜಿಡಿಪಿ (2011-12) 2018-19ರ ಎರಡನೇ ತ್ರೈಮಾಸಿಕದಲ್ಲಿ 33.98 ಲಕ್ಷ ಕೋಟಿ ರೂ. ಆದರೆ ಕಳೆದ ವರ್ಷ ಇದೇ ಅವಧಿಯಲ್ಲಿ ಅದು 31.72 ಲಕ್ಷ ಕೋಟಿ ರೂ. ಇತ್ತು ಎಂದು ಸಿಎಸ್ ಒ ತಿಳಿಸಿದೆ.

ಇದಪ್ಪಾ ವರಸೆ ಅಂದ್ರೆ - ಯುಪಿಎ ಜಿಡಿಪಿ ಇಳಿಸಿದ ಎನ್‌ಡಿಎ!

ಅಣ್ಣಾ ಬಿಟ್ಬಿಡು ಚಿಂತೆ: ಎಕಾನಮಿ ಮಜಬೂತ್ ಆಗೈತೆ!

ಚುನಾವಣೆಗೂ ಮೊದಲೇ ಮೋದಿಗೆ ‘ಮೂಡಿ’ ಹೊಡೆತ: ಇಲ್ಲ ಜಿಡಿಪಿ ನೆಗೆತ!

click me!