ಸರಳವಾಗಿ ಆಪ್ತರ ಸಮ್ಮುಖದಲ್ಲಿ ಜೀತ್ ಅದಾನಿ ಮದುವೆ, ಕ್ಷಮೆ ಕೇಳಿದ ತಂದೆ ಗೌತಮ್ ಅದಾನಿ

Published : Feb 07, 2025, 10:21 PM ISTUpdated : Feb 07, 2025, 10:30 PM IST
ಸರಳವಾಗಿ ಆಪ್ತರ ಸಮ್ಮುಖದಲ್ಲಿ ಜೀತ್ ಅದಾನಿ ಮದುವೆ, ಕ್ಷಮೆ ಕೇಳಿದ ತಂದೆ ಗೌತಮ್ ಅದಾನಿ

ಸಾರಾಂಶ

ಗೌತಮ್ ಅದಾನಿ ಅವರ ಕಿರಿಯ ಪುತ್ರ ಜೀತ್ ಅದಾನಿ ಹಾಗೂ ವಜ್ರ ವ್ಯಾಪಾರಿ ಜೈಮಿನ್ ಶಾ ಅವರ ಪುತ್ರಿ ದಿವಾ ಶಾ ಮದುವೆ ಅಹಮದಾಬಾದ್‌ನಲ್ಲಿ ನಡೆದಿದೆ. ಸರಳವಾಗಿ ನಡೆದ ಮದುವೆ ಬೆನ್ನಲ್ಲೇ ಗೌತಮ್ ಅದಾನಿ ಕ್ಷಮೆ ಕೇಳಿದ್ದಾರೆ.

ಅಹಮ್ಮದಾಬಾದ್(ಫೆ.07) ದೇಶದ ಎರಡನೇ ಶ್ರೀಮಂತ ಉದ್ಯಮಿ ಮತ್ತು ಅದಾನಿ ಗ್ರೂಪ್‌ನ ಮಾಲೀಕ ಗೌತಮ್ ಅದಾನಿ ಅವರ ಕಿರಿಯ ಪುತ್ರ ಜೀತ್ ಫೆಬ್ರವರಿ 7 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೀತ್ ಗುಜರಾತ್‌ನ ದಿವಾ ಶಾ ಅವರನ್ನು ವಿವಾಹವಾದರು. ಅದಾನಿ ಟೌನ್‌ಶಿಪ್ ಆದ ಶಾಂತಿಗ್ರಾಮದಲ್ಲಿ ನಡೆದ ಈ ಮದುವೆ ಸಾಂಪ್ರದಾಯಿಕ ಜೈನ ಮತ್ತು ಗುಜರಾತಿ ಸಂಪ್ರದಾಯಗಳನ್ನು ಅನುಸರಿಸಿ ನಡೆಯಿತು. ಮಧ್ಯಾಹ್ನ 2 ಗಂಟೆಗೆ ಆರಂಭವಾದ ಸಮಾರಂಭದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರು ಭಾಗವಹಿಸಿದ್ದರು.

ಜೀತ್ ಅದಾನಿ ವಜ್ರ ವ್ಯಾಪಾರಿ ಜೈಮಿನ್ ಶಾ ಅವರ ಪುತ್ರಿ ದಿವಾ ಜೈಮಿನ್ ಶಾ ಅವರನ್ನು ವಿವಾಹವಾದರು. ಗೌತಮ್ ಅದಾನಿ ಈ ಹಿಂದೆ ಹೇಳಿದಂತೆ, ಹೈ-ಪ್ರೊಫೈಲ್ ಸೆಲೆಬ್ರಿಟಿ ಮದುವೆ ಇದಲ್ಲ ಎಂದಿದ್ದರು. ಜನಸಾಮಾನ್ಯರಂತೆ ಮದುವೆ ನಡೆಯಲಿದೆ. ನಮ್ಮ ಆಚರಣೆ, ಪದ್ಧತಿ ಜನಸಾಮಾನ್ಯರಂತೆ. ಹೀಗಾಗಿ ಮದುವೆ ಕೂಡ ಸರಳವಾಗಿ ಹಾಗೂ ಸಂಪ್ರದಾಯ ಬದ್ಧವಾಗಿ ನಡೆಯಲಿದೆ ಎಂದಿದ್ದರು. ಇದರಂತೆ ಮದುವೆ ಆಯೋಜಿಸಲಾಗಿತ್ತು. 

ಗೌತಮ್ ಅದಾನಿ ಅವರೇ ತಮ್ಮ X ಹ್ಯಾಂಡಲ್‌ನಲ್ಲಿ ಜೀತ್-ದಿವಾ ಅವರ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.  ದೇವರ ಆಶೀರ್ವಾದದಿಂದ ಜೀತ್ ಮತ್ತು ದಿವಾ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿವಾಹವು ಅಹಮದಾಬಾದ್‌ನಲ್ಲಿ ಆಪ್ತರ ಸಮ್ಮುಖದಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಇದು ಸಣ್ಣ ಮತ್ತು ಅತ್ಯಂತ ಖಾಸಗಿ ಸಮಾರಂಭವಾಗಿದ್ದರಿಂದ, ನಾವು ಎಲ್ಲಾ ಶುಭಾಕಾಂಕ್ಷಿಗಳನ್ನು ಆಹ್ವಾನಿಸಲು ಸಾಧ್ಯವಾಗಲಿಲ್ಲ, ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ನಾನು ನಿಮ್ಮೆಲ್ಲರಿಂದ ನನ್ನ ಮಗಳು ದಿವಾ ಮತ್ತು ಜೀತ್‌ಗೆ ಪ್ರೀತಿ ಮತ್ತು ಆಶೀರ್ವಾದವನ್ನು ಹೃತ್ಪೂರ್ವಕವಾಗಿ ಬಯಸುತ್ತೇನೆ ಎಂದು ಗೌತಮ್ ಅದಾನಿ ಹೇಳಿದ್ದಾರೆ.

ಗೌತಮ್ ಅದಾನಿ ಅವರ ಕಿರಿಯ ಸೊಸೆ ದಿವಾ ಶಾ ಪ್ರಸಿದ್ಧ ವಜ್ರ ವ್ಯಾಪಾರಿ ಜೈಮಿನ್ ಶಾ ಅವರ ಪುತ್ರಿ. ಜೈಮಿನ್ ಶಾ ಸಿ. ದಿನೇಶ್ ಮತ್ತು ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಪಾಲುದಾರರಾಗಿದ್ದಾರೆ. ಮುಂಬೈ ಜೊತೆಗೆ ಸೂರತ್‌ನಲ್ಲಿ ವಜ್ರದ ವ್ಯಾಪಾರವಿದೆ. ದಿವಾ ಶಾ ಮತ್ತು ಜೀತ್ ಅದಾನಿ ಅವರ ನಿಶ್ಚಿತಾರ್ಥ ಮಾರ್ಚ್ 2023 ರಲ್ಲಿ ನಡೆದಿತ್ತು. ನಿಶ್ಚಿತಾರ್ಥದ ಸುಮಾರು ಎರಡು ವರ್ಷಗಳ ನಂತರ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಎಂಜಿನಿಯರಿಂಗ್ ಮತ್ತು ಅಪ್ಲೈಡ್ ಸೈನ್ಸಸ್‌ನಲ್ಲಿ ಅಧ್ಯಯನ ಮಾಡಿದ ನಂತರ 2019 ರಲ್ಲಿ ಅದಾನಿ ಗ್ರೂಪ್ ಸೇರಿದ ಜೀತ್ ಅದಾನಿ, ಪ್ರಸ್ತುತ ಅದಾನಿ ಏರ್‌ಪೋರ್ಟ್ಸ್ ವ್ಯವಹಾರ ಮತ್ತು ಅದಾನಿ ಡಿಜಿಟಲ್ ಲ್ಯಾಬ್ಸ್‌ಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ.


 

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!