ಕೊರೋನಾ ಕಾಲದಲ್ಲಿ 10 ಪಟ್ಟು ಹೆಚ್ಚಾಯ್ತು ಅದಾನಿ ಆಸ್ತಿ, ಎಲಾನ್ ಮಸ್ಕ್‌ಗೇ ಟಕ್ಕರ್!

By Contributor Asianet  |  First Published Feb 8, 2022, 4:30 PM IST

* ಗೌತಮ್ ಅದಾನಿ ಈಗ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ

* ಸಂಪತ್ತಿನ ವಿಚಾರದಲ್ಲಿ ಜುಕರ್‌ಬರ್ಗ್‌ರನ್ನೇ ಹಿಂದಿಕ್ಕಿದ ಅದಾನಿ

* 10 ಪಟ್ಟು ಹೆಚ್ಚಾಯ್ತು ಅದಾನಿ ಆಸ್ತಿ, ಎಲಾನ್ ಮಸ್ಕ್‌ಗೇ ಟಕ್ಕರ್


ಮುಂಬೈ(ಫೆ.08): ಗೌತಮ್ ಅದಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗುವುದರೊಂದಿಗೆ ವಿಶ್ವದ ಟಾಪ್ 10 ಶ್ರೀಮಂತ ವ್ಯಕ್ತಿಗಳ ಪಟ್ಟಿಗೆ ಸೇರಿದ್ದಾರೆ. ಫೋರ್ಬ್ಸ್‌ನ ಅಂಕಿಅಂಶಗಳ ಪ್ರಕಾರ, ಕೊರೋನಾ ಅವಧಿಯಲ್ಲಿ ಅದಾನಿ ಅವರ ಸಂಪತ್ತು (Gautam Adani Net Worth) ಸುಮಾರು 10 ಪಟ್ಟು ಹೆಚ್ಚಾಗಿದೆ. ಅಲ್ಲದೇ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ರನ್ನೂ ಹಿಂದಿಕ್ಕಿದ್ದಾರೆ. ಇನ್ನೂ ವಿಶೇಷವೆಂದರೆ ಗೌತಮ್ ಅದಾನಿ ಸಂಪತ್ತು ಹೆಚ್ಚಳಗೊಂಡ ವಿಚಾರದಲ್ಲಿ ಎಲಾನ್ ಮಸ್ಕ್‌ಗೇ ನೇರ ಪೈಪೋಟಿಯೊಡ್ಡಿದ್ದಾರೆ. ಏಕೆಂದರೆ ಏಪ್ರಿಲ್ 2020 ರಿಂದ, ಇಬ್ಬರು ಬಿಲಿಯನೇರ್‌ಗಳ ಸಂಪತ್ತು ಕೇವಲ 10 ಪಟ್ಟು ಹೆಚ್ಚಾಗಿದೆ. ಮತ್ತೊಂದೆಡೆ, ಗೌತಮ್ ಅದಾನಿ ಈ ವರ್ಷವೂ ತಮ್ಮ ಸಂಪತ್ತನ್ನು ತ್ವರಿತ ಗತಿಯಲ್ಲಿ ಹೆಚ್ಚಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಆದರೆ ಎಲಾನ್ ಮಸ್ಕ್ ಈ ವಿಷಯದಲ್ಲಿ ಗೌತಮ್ ಅದಾನಿಯವರಿಗಿಂತ ಬಹಳ ಹಿಂದೆ ಉಳಿದಿದ್ದಾರೆ. ಇನ್ನು ಕೊರೋನಾ ಅವಧಿಯಲ್ಲಿ ಗೌತಮ್ ಅದಾನಿ ಅವರ ಆಸ್ತಿ ಎಷ್ಟು ಹೆಚ್ಚಳವಾಗಿದೆ? ಇಲ್ಲಿದೆ ವಿವರ.

ಗೌತಮ್ ಅದಾನಿ ಸಂಪತ್ತು 10 ಪಟ್ಟು ವೃದ್ಧಿ

Tap to resize

Latest Videos

undefined

ಕೊರೋನಾ ಅವಧಿಯಲ್ಲಿ, ಪ್ರಪಂಚದಾದ್ಯಂತದ ಬಿಲಿಯನೇರ್‌ಗಳ ಸಂಪತ್ತಿನಲ್ಲಿ ಹೆಚ್ಚಳ ಕಂಡುಬಂದಿದೆ. ಇದರಲ್ಲಿ ಗೌತಮ್ ಅದಾನಿ ಹೆಸರೂ ಸೇರಿದೆ. ಫೋರ್ಬ್ಸ್ ಅಂಕಿಅಂಶಗಳ ಪ್ರಕಾರ, ಏಪ್ರಿಲ್‌ನಲ್ಲಿ ಗೌತಮ್ ಅದಾನಿ ಅವರ ಒಟ್ಟು ಮೊತ್ತ 8.9 ಬಿಲಿಯನ್ ಡಾಲರ್ ಆಗಿತ್ತು. ಇದು ಫೆಬ್ರವರಿ 2022 ರಲ್ಲಿ 90.3 ಬಿಲಿಯನ್ ಡಾಲರ್ ತಲುಪಿತು. ಅಂದರೆ ಕೇವಲ 22 ತಿಂಗಳಲ್ಲಿ ಗೌತಮ್ ಅದಾನಿ ಸಂಪತ್ತು 10 ಪಟ್ಟು ಏರಿಕೆ ಕಂಡಿದೆ. 10 ತಿಂಗಳ ಬಗ್ಗೆ ಹೇಳುವುದಾದರೆ, ಸುಮಾರು 40 ಬಿಲಿಯನ್ ಡಾಲರ್ ಹೆಚ್ಚಳ ಕಂಡುಬಂದಿದೆ. ಏಪ್ರಿಲ್ 2021 ರಲ್ಲಿ, ಗೌತಮ್ ಅದಾನಿ ಅವರ ಸಂಪತ್ತು 50.5 ಬಿಲಿಯನ್ ಡಾಲರ್ ಆಗಿತ್ತು.

ಕಂಪನಿಗಳ ಷೇರು ಮೌಲ್ಯ ಏರಿಕೆಯಿಂದ ಸಂಪತ್ತು ಹೆಚ್ಚಳ

ಗೌತಮ್ ಅದಾನಿ ಕಂಪನಿಗಳ ಷೇರುಗಳ ಮೌಲ್ಯ ಏರಿಕೆಯಿಂದಾಗಿ ಗೌತಮ್ ಅದಾನಿ ಅವರ ನಿವ್ವಳ ಮೌಲ್ಯದಲ್ಲಿ ಹೆಚ್ಚಳವಾಗಿದೆ. ಅಂಕಿಅಂಶಗಳ ಬಗ್ಗೆ ನೋಡುವುದಾದರೆ ಅದಾನಿ ಎಂಟರ್‌ಪ್ರೈಸಸ್‌ನ ಷೇರುಗಳು ಪ್ರತಿ ಷೇರಿಗೆ 129 ರಿಂದ 1700 ರೂ.ಗೆ ಅಂದರೆ 1200 ಪ್ರತಿಶತಕ್ಕೂ ಹೆಚ್ಚು ಜಿಗಿದಿದೆ. ಅದಾನಿ ಪೋರ್ಟ್ ಷೇರುಗಳು ಪ್ರತಿ ಷೇರಿಗೆ 245 ರೂ.ನಿಂದ 715 ರೂ.ಗೆ ಬಂದು ನಿಂತಿವೆ. ಅದೇ ಸಮಯದಲ್ಲಿ, ಅದಾನಿ ಪವರ್‌ನ ಷೇರುಗಳು ಏಪ್ರಿಲ್ 2020 ರಿಂದ ಸುಮಾರು 4 ಪಟ್ಟು ಏರಿಕೆ ಕಂಡಿವೆ. ಏಪ್ರಿಲ್ 2020 ರಿಂದ ಅದಾನಿ ಟ್ರಾನ್ಸ್‌ಮಿಷನ್ ಷೇರುಗಳು ಶೇಕಡಾ 916 ರಷ್ಟು ಜಿಗಿತವನ್ನು ಕಂಡಿವೆ. ಅದೇ ಸಮಯದಲ್ಲಿ, ಅದಾನಿ ಗ್ರೀನ್ ಷೇರುಗಳು 22 ತಿಂಗಳುಗಳಲ್ಲಿ 1184 ರಷ್ಟು ಏರಿಕೆ ಕಂಡಿವೆ. ಅದಾನಿ ಟೋಟಲ್ ಗ್ರೀನ್ ಷೇರುಗಳು ಲಿಸ್ಟಿಂಗ್ ದಿನದಂದು ಶೇಕಡಾ 405 ರಷ್ಟು ಏರಿಕೆ ಕಂಡಿವೆ.

ಎಲಾನ್ ಮಸ್ಕ್‌ಗೆ ಟಕ್ಕರ್

ಸಂಪತ್ತು ಹೆಚ್ಚಿಸಿಕೊಳ್ಳುವ ವಿಚಾರದಲ್ಲಿ ಗೌತಮ್ ಅದಾನಿ ಜಗತ್ತಿನ ಅತಿ ಶ್ರೀಮಂತ ಎಲಾನ್ ಮಸ್ಕ್ ಜೊತೆ ಪೈಪೋಟಿ ನಡೆಸುತ್ತಿದ್ದಾರೆ. ಫೋರ್ಬ್ಸ್ ಮಾಹಿತಿಯ ಪ್ರಕಾರ, ಏಪ್ರಿಲ್ 2020 ರಲ್ಲಿ 24.6 ಬಿಲಿಯನ್ ಡಾಲರ್ ಆಗಿತ್ತು. ಇದು ಇಂದು 236 ಬಿಲಿಯನ್ ಡಾಲರ್ ತಲುಪಿದೆ. ಈ ಸಮಯದಲ್ಲಿ, ಅವರ ನಿವ್ವಳ ಮೌಲ್ಯವು ಸುಮಾರು 10 ಪಟ್ಟು ಹೆಚ್ಚಾಗಿದೆ. ಏಪ್ರಿಲ್ 2021 ರಲ್ಲಿ, ಎಲಾನ್ ಮಸ್ಕ್ ಅವರ ನಿವ್ವಳ ಮೌಲ್ಯವು 151 ಬಿಲಿಯನ್ ಡಾಲರ್ ಆಗಿತ್ತು. ಎಲಾನ್ ಮಸ್ಕ್ ಅವರ ನಿವ್ವಳ ಮೌಲ್ಯವು ನವೆಂಬರ್ ಮೊದಲ ತಿಂಗಳಲ್ಲಿ 340 ಶತಕೋಟಿ ಡಾಲರ್ ಮತ್ತು ಜನವರಿ 2022 ರ ಆರಂಭದಲ್ಲಿ 304 ಶತಕೋಟಿ ಡಾಲರ್ ಆಗಿದ್ದರೂ, ಟೆಸ್ಲಾ ಷೇರುಗಳು ಈ ವರ್ಷ ಸಾಕಷ್ಟು ಕುಸಿತ ಕಂಡಿವೆ. ಈ ಕಾರಣದಿಂದಾಗಿ ಮಸ್ಕ್ ಅವರ ನಿವ್ವಳ ಮೌಲ್ಯವು ಮೂರು ತಿಂಗಳಲ್ಲಿ ಸುಮಾರು 100 ಬಿಲಿಯನ್ ಡಾಲರ್ ಕಡಿಮೆಯಾಗಿದೆ.

click me!