ಇಂದಿನ ಪೆಟ್ರೋಲ್ ದರ: ಹಿಂದೆ ಕೇಳಿಲ್ಲ, ಮುಂದೆ ಕೇಳೊದೂ ಬೇಡ!

By Web Desk  |  First Published Sep 7, 2018, 1:57 PM IST

ಸಾರ್ವಕಾಲಿಕ ದಾಖಲೆ ಏರಿಕೆ ಕಂಡ ತೈಲದರ! ಹಿಂದಿನ ದಾಖಲೆ ಪುಡಿಪುಡಿ ಮಾಡಿದ ಇಂದಿನ ದರ! ಪ್ರತಿಪಕ್ಷಗಳ ಭಾರತ್ ಬಂದ್‌ಗೆ ಹೆಚ್ಚಿನ ಬಲ! ಎಲ್ಲಾ ಮಹಾನಗರಗಳಲ್ಲಿ ತೈಲದರಲ್ಲಿ ಭಾರೀ ಏರಿಕೆ


ನವದೆಹಲಿ(ಸೆ.7): ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು, ಈ ಹಿಂದಿನ ಎಲ್ಲ ದರ ಏರಿಕೆ ದಾಖಲೆಗಳನ್ನು ಪುಡಿಪುಡಿ ಮಾಡಿ ದರ ಏರಿಕೆಯಾಗುತ್ತಿದೆ.

ದೇಶದ ಹಲವು ಮಹಾನಗರಗಳಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ದರದಲ್ಲಿ ಶುಕ್ರವಾರವೂ ಗಣನೀಯ ಏರಿಕೆ ಕಂಡಿದೆ. ಹೀಗಾಗಿ ಇದೇ 10ರಂದು ಪ್ರತಿಪಕ್ಷಗಳು ಕರೆ ನೀಡಿರುವ ಭಾರತ್​ ಬಂದ್ ಗೆ ಮತ್ತಷ್ಟು ಬಲ ಬಂದಂತಾಗಿದೆ.

Tap to resize

Latest Videos

ದೆಹಲಿಯಲ್ಲಿ ಇಂದು ಪ್ರತೀ ಲೀಟರ್ ಪೆಟ್ರೋಲ್​ ದರ ಏಕಾಏಕಿ 48 ಪೈಸೆ ಏರಿಕೆಯಾಗಿದ್ದು, ಪೆಟ್ರೋಲ್ ಪ್ರತೀ ಲೀಟರ್ ಗೆ 79.99 ರೂ.ಗಳಿಗೆ ಮಾರಾಟವಾಗುತ್ತಿದೆ. ಇನ್ನು ಡಿಸೇಲ್​ ಬೆಲೆ ಲೀಟರ್ ಗೆ 72.07 ರೂ. ಆಗಿದ್ದು, 52 ಪೈಸೆ ಏರಿಕೆಯಾಗಿದೆ. ಮುಂಬೈನಲ್ಲಿ ಪ್ರತಿ ಲೀ.ಗೆ ಪೆಟ್ರೋಲ್ 87.39 ರೂ ಏರಿಕೆಯಾಗಿದ್ದು, ಡಿಸೇಲ್​ 76.51 ರೂ.ಗೆ ಏರಿಕೆಯಾಗಿದೆ.

Petrol & Diesel prices in are Rs.79.99 per litre & Rs.72.07 per litre, respectively. Petrol & Diesel prices in are Rs.87.39 per litre & Rs.76.51 per litre, respectively. pic.twitter.com/iBdzvAB2rW

— ANI (@ANI)

ಬೆಂಗಳೂರಿನಲ್ಲಿ ಲೀಟರ್​ ಪೆಟ್ರೋಲ್​ ಬೆಲೆ 82.19 ರೂ. ಆಗಿದ್ದು, 21 ಪೈಸೆಯಷ್ಟು ಏರಿಕೆಯಾಗಿದೆ. ಡೀಸೆಲ್​ ಬೆಲೆ ಕೂಡ 73.93 ರೂ. ಆಗಿದ್ದು, 21 ಪೈಸೆ ಏರಿಕೆಯಾಗಿದೆ.

ಪೆಟ್ರೋಲ್​ ಮತ್ತು ಡಿಸೇಲ್​ ಬೆಲೆಯಲ್ಲಿ ನಿತ್ಯವೂ ಏರಿಕೆಯಾಗುತ್ತಿರುವುದರಿಂದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಸೆಪ್ಟೆಂಬರ್ 10ರಂದು ಭಾರತ್​ ಬಂದ್ ಗೆ ಕರೆ ನೀಡಿದ್ದು, ಮತ್ತಷ್ಟು ಬೆಂಬಲ ಸಿಗುವ ಸಾಧ್ಯತೆ ಇವೆ.

click me!