3 ಬಿಲಿಯನ್ ಲೀ.ತೈಲ ಕಳ್ಳತನ: ಯಾರ ಮೇಲೆ ಇರಾನ್ ಅನುಮಾನ?

By Web DeskFirst Published Dec 6, 2018, 6:44 PM IST
Highlights

ಇರಾನ್‌ನಿಂದ ನಿರಂತರ ತೈಲ ಕಳ್ಳಸಾಗಣೆ| ತೈಲ ಕಳ್ಳರಿಂದ ಪೇಚಿಗೆ ಸುಲುಕಿದ ಇರಾನ್| ಬರೋಬ್ಬರಿ 3 ಬಿಲಿಯನ್ ಲೀ. ತೈಲ ಕಳ್ಳಸಾಗಾಣೆ| ಆರ್ಥಿಕ ದಿಗ್ಬಂಧನ ಜಾರಿಯಾದ ಬಳಿಕ ಹೆಚ್ಚಿದ ಕಳ್ಳಸಾಗಾಣಿಕೆ

ಟೆಹರನ್(ಡಿ.06): ಕಳೆದ ಮೂರು ತಿಂಗಳ ಅವಧಿಯಲ್ಲಿ ಇರಾನ್‌ನಿಂದ ಬರೋಬ್ಬರಿ 3 ಬಿಲಿಯನ್ ಲೀ. ತೈಲವನ್ನು ಕಳ್ಳಸಾಗಾಣಿಕೆ ಮಾಡಲಾಗಿದೆ ಎಂದು ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ.

ಹೌದು, ಇರಾನ್ ಮೇಲೆ ಅಮೆರಿಕದ ಆರ್ಥಿಕ  ದಿಗ್ಬಂಧನ ಒಂದು ಕಡೆಯಾದರೆ, ತೈಲ ರಫ್ತನ್ನೇ ನೆಚ್ಚಿಕೊಂಡಿರುವ ಇರಾನ್‌ಗೆ ಇದೀಗ ತೈಲ ಕಳ್ಳಸಾಗಾಣಿಕೆ ಹೊಸ ತಲೆನೋವು ತಂದಿತ್ತಿದೆ. 

ಕೇವಲ ಮೂರು ಅವಧಿಯಲ್ಲಿ ಇರಾನ್‌ನಿಂದ ಬರೋಬ್ಬರಿ 3 ಬಿಲಿಯನ್ ಲೀ. ಕಚ್ಚಾ ತೈಲವನ್ನು ಕಳ್ಳಸಾಗಾಣಿಕೆ ಮಾಡಲಾಗಿದೆ ಎಂದು ಕಳ್ಳಸಾಗಾಣಿಕೆ ವಿರೋಧಿ ಪಡೆಯ ಬ್ರಿಗೇಡಿಯರ್ ಜನರಲ್ ಅಬ್ದುಲ್ಲಾ ಹೆಂದ್ಯೆನಿ ಮಾಹಿತಿ ನೀಡಿದ್ದಾರೆ.

ಕಳ್ಳಾಸಾಗಾಣಿಕೆ ತಡೆಯಲು ಇರಾನ್ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ತನ್ನ ತೈಲಕ್ಕೆ ವಿಶೇಷ ಕಾರ್ಡ್ ಗಳನ್ನೂ ವಿತರಣೆ ಮಾಡುತ್ತಿದೆ. ಆದರೆ ಇದ್ಯಾವುದಕ್ಕೂ ಬಗ್ಗದ ಕಳ್ಳಸಾಗಾಣೆದಾರರು ಇರಾನ್‌ನಿಂದ ಕಚ್ಚಾ ತೈಲವನ್ನು ನಿರಂತರವಾಗಿ ಕಳ್ಳಸಾಗಣೆ ಮಾಡುತ್ತಲೇ ಇದ್ದಾರೆ ಎನ್ನಲಾಗಿದೆ.

ಅದರಲ್ಲೂ ಇರಾನ್ ಮೇಲೆ ಅಮೆರಿಕದ ಆರ್ಥಿಕ ದಿಗ್ಬಂಧನ ಜಾರಿಯಾದ ಬಳಿಕ ಈ ಕಳ್ಳಸಾಗಾಣೆ ದುಪ್ಪಟ್ಟುಗೊಂಡಿದ್ದು, ಇರಾನ್‌ಗೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂದು ಮೂಲಗಳು ತಿಳಿಸಿವೆ.

click me!