ಇವರೇ ರಾಜ್ಯದ ಅಗ್ರ - 10 ಧನಿಕರು! ಯಾರಿದ್ದಾರೆ?

By Kannadaprabha NewsFirst Published Oct 8, 2021, 8:23 AM IST
Highlights
  • ಅಮೆರಿಕದ ಫೋರ್ಬ್ಸ್ ಮ್ಯಾಗಜಿನ್ ಭಾರತದ 100 ಶ್ರೀಮಂತರ ಪಟ್ಟಿಯೊಂದನ್ನು ರಿಲೀಸ್ ಮಾಡಿದೆ.
  • ಪಟ್ಟಿಯಲ್ಲಿ  ಕರ್ನಾಟಕ ಹಲವು ಮುಖಂಡರು ಸೇರಿದ್ದಾರೆ.

ನವದೆಹಲಿ (ಅ.08):ಅಮೆರಿಕದ ಫೋರ್ಬ್ಸ್ ಮ್ಯಾಗಜಿನ್ (Forbes magazine) ಭಾರತದ (India) 100 ಶ್ರೀಮಂತರ ಪಟ್ಟಿಯೊಂದನ್ನು ರಿಲೀಸ್ ಮಾಡಿದೆ. ಪಟ್ಟಿಯಲ್ಲಿ  ಕರ್ನಾಟಕದ ಹಲವು ಮುಖಂಡರು ಸೇರಿದ್ದಾರೆ. ಅದರಂತೆ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani) ಸತತ 14ನೇ ವರ್ಷವು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು 100 ಧನಿಕರ ಪಟ್ಟಿಯಲ್ಲಿ 6 ಮಹಿಳೆಯರು ಸ್ಥಾನ ಹೊಂದಿದ್ದಾರೆ. 

1. ಅಜೀಂ ಪ್ರೇಮ್‌ಜಿ

82800 ಕೋಟಿ ರುಪಾಯಿ

ಐಟಿ ಸೇರಿ ಅನೇಕ ಸೇವೆ ಒದಗಿಸುವ ವಿಪ್ರೋ ಸಂಸ್ಥೆಯ ಮುಖ್ಯಸ್ಥ

2. ಎನ್‌.ಆರ್‌.ನಾರಾಯಣಮೂರ್ತಿ

32190 ಕೋಟಿ ರುಪಾಯಿ

ದೇಶದ ಐಟಿ ಕ್ಷೇತ್ರದ ದಿಗ್ಗಜ ಇಸ್ಫೋಸಿಸ್‌ ಸಂಸ್ಥೆಯ ಸಂಸ್ಥಾಪಕ

ವಿಶ್ವದ ಶ್ರೀಮಂತರ ಗಾಯಕಿ ರಿಹಾನಾ ಒಟ್ಟು ಆಸ್ತಿ ಮೌಲ್ಯ ಇಷ್ಟಿದೆ!

3. ರವೀಂದ್ರನ್‌, ದಿವ್ಯಾ

29970 ಕೋಟಿ ರುಪಾಯಿ

ಶೈಕ್ಷಣಿಕ ರಂಗದಲ್ಲಿ ಪ್ರಸಿದ್ಧ ಬೈಜೂಸ್‌ ಸಂಸ್ಥೆಯ ಸ್ಥಾಪಕ ದಂಪತಿ

4. ಎಸ್‌.ಗೋಪಾಲಕೃಷ್ಣನ್‌

29822 ಕೋಟಿ ರುಪಾಯಿ

ಐಟಿ ಕ್ಷೇತ್ರದ ದಿಗ್ಗಜ ಇಸ್ಫೋಸಿಸ್‌ ಸಂಸ್ಥೆಯ ಸಂಸ್ಥಾಪಕರಲ್ಲೊಬ್ಬರು

ಸಾಲ ಮರುಪಾವತಿಗೆ ಬಿಡಿಗಾಸೂ ಇಲ್ಲ ಎಂದಿದ್ದ ಅಂಬಾನಿಗೆ ವಿದೇಶದಲ್ಲಿ 18 ಕಂಪನಿ!

5. ಕಿರಣ್‌ ಮಜುಂದಾರ್‌ ಶಾ

28860 ಕೋಟಿ ರುಪಾಯಿ

ಜೈವಿಕ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಬಯೋಕಾನ್‌ ಸಂಸ್ಥೆಯ ಸ್ಥಾಪಕಿ

6. ನಂದನ್‌ ನಿಲೇಕಣಿ

24790 ಕೋಟಿ ರುಪಾಯಿ

ಐಟಿ ಕ್ಷೇತ್ರದ ದಿಗ್ಗಜ ಇಸ್ಫೋಸಿಸ್‌ ಸಂಸ್ಥೆಯ ಸಂಸ್ಥಾಪಕರಲ್ಲೊಬ್ಬರು

7. ಕೆ. ದಿನೇಶ್‌

20424 ಕೋಟಿ ರುಪಾಯಿ

ಐಟಿ ಕ್ಷೇತ್ರದ ದಿಗ್ಗಜ ಇಸ್ಫೋಸಿಸ್‌ ಸಂಸ್ಥೆಯ ಸಂಸ್ಥಾಪಕರಲ್ಲೊಬ್ಬರು

8. ಸುಂದರ್‌ ಜೆನೋಮಲ್‌

19462 ಕೋಟಿ ರುಪಾಯಿ

‘ಜಾಕಿ’ ಸೇರಿ ಒಳಉಡುಪು ತಯಾರಕ ಪೇಜ್‌ ಇಂಡಸ್ಟ್ರೀಸ್‌ ಮಾಲಿಕ

9. ನಿತಿನ್‌, ನಿಖಿಲ್‌ ಕಾಮತ್‌

19166 ಕೋಟಿ ರುಪಾಯಿ

ಷೇರು ಸೇರಿ ವಿತ್ತ ಸೇವೆ ಒದಗಿಸುವ ಜೆರೋದಾ ಸಂಸ್ಥೆ ಮಾಲಿಕರು

10. ಜಿತೇಂದ್ರ ವೀರ್ವಾನಿ

17760 ಕೋಟಿ ರು.

ಖ್ಯಾತ ರಿಯಲ್‌ ಎಸ್ಟೇಟ್‌ ಕಂಪನಿ ಎಂಬೆಸಿ ಸಮೂಹದ ಮಾಲಿಕ

ಭಾರತದ ಟಾಪ್‌ 10 ಶ್ರೀಮಂತರು

ಮುಕೇಶ್‌ ಅಂಬಾನಿ 6.85 ಲಕ್ಷ ಕೋಟಿ

ಗೌತಮ್‌ ಅದಾನಿ 5.53 ಲಕ್ಷ ಕೋಟಿ

ಶಿವ ನಾಡಾರ್‌ 2.29 ಲಕ್ಷ ಕೋಟಿ

ರಾಧಾಕೃಷ್ಣ ಧಮಾನಿ 2.17 ಲಕ್ಷ ಕೋಟಿ

ಸೈರಸ್‌ ಪೂನಾವಾಲಾ 1.40 ಲಕ್ಷ ಕೋಟಿ

ಲಕ್ಷ್ಮೇ ನಿವಾಸ್‌ ಮಿತ್ತಲ್‌ 1.39 ಲಕ್ಷ ಕೋಟಿ

ಸಾವಿತ್ರಿ ಜಿಂದಾಲ್‌ 1.33 ಲಕ್ಷ ಕೋಟಿ

ಉದಯ್‌ ಕೋಟಕ್‌ 1.22 ಲಕ್ಷ ಕೋಟಿ

ಪಲ್ಲೋನ್‌ಜಿ ಮಿಸ್ತ್ರೀ 1.21 ಲಕ್ಷ ಕೋಟಿ

ಕುಮಾರ ಮಂಗಲಂ ಬಿರ್ಲಾ 1.16 ಲಕ್ಷ ಕೋಟಿ

click me!