ಪಿಎಫ್ ಖಾತೆದಾರರಿಗೆ ಶೀಘ್ರದಲ್ಲೇ ಕಹಿ ಸುದ್ದಿ| ಇಪಿಎಫ್ ಖಾತೆದಾರರ ಬಡ್ಡಿ ಕಡಿತಕ್ಕೆ ಮುಂದಾದ ನೌಕರರ ಭವಿಷ್ಯ ನಿಧಿ ಸಂಸ್ಥೆ| ಇಪಿಎಫ್‌ಒ ಗೆ ಪತ್ರ ಬರೆದು ತಿಳಿಸಿರುವ ಹಣಕಾಸು ಸಚಿವಾಲಯ| 85 ದಶಲಕ್ಷ ಇಪಿಎಫ್ ಖಾತೆದಾರರಿಗೆ ಕೇಂದ್ರದ ಶಾಕ್| ಶೇ. 8.65 ರಷ್ಟು ಬಡ್ಡಿದರ ಕಡಿತಕ್ಕೆ ಹಣಕಾಸು ಸಚಿವಾಲಯ ಪಟ್ಟು|
ಬೆಂಗಳೂರು(ಜೂ.28): ಪಿಎಫ್ ಖಾತೆದಾರರಿಗೆ ಶೀಘ್ರದಲ್ಲೇ ಕಹಿ ಸುದ್ದಿಯೊಂದು ಸಿಗುವ ಸಾಧ್ಯತೆ ಇದ್ದು, ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಸುಮಾರು 85 ದಶಲಕ್ಷ ಇಪಿಎಫ್ ಖಾತೆದಾರರಿಗೆ ನೀಡುತ್ತಿದ್ದ ಬಡ್ಡಿದರವನ್ನು ಕಡಿತಗೊಳಿಸಲು ಮುಂದಾಗಿದೆ.
ಈ ಕುರಿತು ಇಪಿಎಫ್‌ಒ ಗೆ ಪತ್ರ ಬರೆದಿರುವ ಹಣಕಾಸು ಸಚಿವಾಲಯ, ಸುಮಾರು 85 ದಶಲಕ್ಷ ಇಪಿಎಫ್ ಖಾತೆದಾರರಿಗೆ ನೀಡುತ್ತಿದ್ದ ಶೇ. 8.65 ರಷ್ಟು ಬಡ್ಡಿದರವನ್ನು ಕಡಿತಗೊಳಿಸಬೇಕೆಂದು ಹೇಳಿದೆ.
undefined
ಇಪಿಎಫ್‌ಗೆ ಹೆಚ್ಚಿನ ಬಡ್ಡಿದರ ನೀಡುವುದರಿಂದ ಬ್ಯಾಂಕುಗಳಿಗೆ ಆಕರ್ಷಕ ಬಡ್ಡಿದರಗಳನ್ನು ನೀಡಲು ಸಾಧ್ಯವಾಗುವುದಿಲ್ಲ ಎಂಬುದು ಹಣಕಾಸು ಸಚಿವಾಲಯದ ವಾದವಾಗಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪಿಎಫ್ ಖಾತೆದಾರರ ಬಡ್ಡಿ ದರವನ್ನು ಕಡಿಮೆ ಮಾಡುವ ಚಿಂತನೆ ನಡೆಸಿದ್ದು, ಈ ಕುರಿತು ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ.