
ನವದೆಹಲಿ(ಜೂ.09): ಸೋಮವಾರವಷ್ಟೇ ಹೊಸದಾಗಿ ಬಿಡುಗಡೆಯಾದ ಆದಾಯ ತೆರಿಗೆ ಇಲಾಖೆಯ ಹೊಸ ವೆಬ್‌ಸೈಟ್ ಗೊಂದಲ ಮಂಗಳವಾರವೂ ಮುಂದುವರೆದಿದೆ. ಪರಿಣಾಮ ಮಂಗಳವಾರವೂ ಗ್ರಾಹಕರಿಗೆ ವೆಬ್‌ಸೈಟ್‌ನ ದರ್ಶನವಾಗಲಿಲ್ಲ.
ಪರಿಣಾಮ ಸ್ವತಃ ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ಟ್ವೀಟರ್ ಮೂಲಕ, ವೆಬ್‌ಸೈಟ್ ಆಧುನೀಕರಿಸಿದ್ದ ಇಸ್ಫೋಸಿಸ್ ಮತ್ತು ಅದರ ಮುಖ್ಯಸ್ಥ ನಂದನ್ ನಿಲೇಕಣಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಲವು ಬಳಕೆದಾರರು ಪೋರ್ಟಲ್ ಬಗ್ಗೆ ಟ್ವೀಟರ್‌ನಲ್ಲಿ ಸಾಲು ಸಾಲು ದೂರು ದಾಖಲಿಸಿದ ಬಳಿಕ ನಿರ್ಮಲಾ ಸೀತಾರಾಮನ್, ಇನ್ಪೋಸಿಸ್ ಸಂಸ್ಥೆ ಮತ್ತು ಅಧ್ಯಕ್ಷ ನಂದನ್ ನಿಕಲೇಣಿ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.
‘ನನ್ನ ಟ್ವೀಟರ್ ಲೈಮ್‌ಲೈನ್‌ನಲ್ಲಿ ವೆಬ್‌ಪೋರ್ಟಲ್ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಸೇವೆಯ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಇನ್ಪೋಸಿಸ್ ಮತ್ತು ನಂದನ್ ನಿಕಲೇಣಿ ತೆರಿಗೆದಾರರನ್ನು ನಿರಾಸೆ ಮಾಡುವುದಿಲ್ಲ ಎಂದು ಭಾವಿಸುತ್ತೇನೆ. ತೆರಿಗೆದಾರರಿಗೆ ಗುಣಮಟ್ಟದ ಸೇವೆ ನೀಡುವುದು ನಮ್ಮ ಆದ್ಯತೆಯಾಗಿರಬೇಕು’ ಎಂದಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.