ಫ್ಲಿಪ್‌ಕಾರ್ಟ್, ಮಿಂತ್ರಾ ಶಾಪಿಂಗ್‌ಗೆ ಸೂಪರ್.ಮನಿ ಯುಪಿಐ ಆ್ಯಪ್‌ನಿಂದ ಭರ್ಜರಿ ಕೊಡುಗೆ!

By Sathish Kumar KH  |  First Published Aug 23, 2024, 2:19 PM IST

ಸೂಪರ್.ಮನಿ ತನ್ನ ಹೊಸ ಯುಪಿಐ ಆ್ಯಪ್‌ ಬಿಡುಗಡೆ ಮಾಡಿದ್ದು, ಪ್ರತಿ ವಹಿವಾಟಿನ ಮೇಲೆ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ನೀಡುತ್ತದೆ. ಫ್ಲಿಪ್‌ಕಾರ್ಟ್ ಮತ್ತು ಮಿಂತ್ರಾದಂತಹ ಪಾಲುದಾರ ಬಿಸಿನೆಸ್‌ಗಳಲ್ಲಿ ವಿಶೇಷ ಆಫರ್‌ಗಳನ್ನು ನೀಡಲಾಗುತ್ತದೆ.


ಬೆಂಗಳೂರು (ಆ.23): ಯುಪಿಐ ಸೇವೆ ಒದಗಿಸುವ, ಫ್ಲಿಪ್‌ಕಾರ್ಟ್ ಗ್ರೂಪ್‌ನ ಸೂಪರ್.ಮನಿ (super.money) ತನ್ನ ಹೊಸ ಯುಪಿಐ ಆ್ಯಪ್‌ ಬಿಡುಗಡೆ ಮಾಡಿದೆ. ಸೂಪರ್.ಮನಿ ಆ್ಯಪ್‌ ಪ್ರತೀ ವ್ಯಾಪಾರ ವಹಿವಾಟಿನ ಮೇಲೆ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ನೀಡುತ್ತದೆ. ವಿಶೇಷವಾಗಿ ಫ್ಲಿಪ್‌ಕಾರ್ಟ್ ಮತ್ತು ಮಿಂತ್ರಾ ಸೇರಿದಂತೆ ಪಾಲುದಾರ ಬಿಸಿನೆಸ್ ಗಳ ಉತ್ಪನ್ನಗಳ ಮೇಲೆ ವಿಶೇಷ ಆಫರ್ ನೀಡುತ್ತದೆ.

ಸೂಪರ್.ಮನಿ ಸಂಸ್ಥೆಯು ಈಗಾಗಲೇ ಯುಪಿಐ ಮೂಲಕ ಸಾಲ ಸೌಲಭ್ಯ ಒದಗಿಸುವ ಫೀಚರ್ ಅನ್ನು ಪರೀಕ್ಷೆ ಮಾಡಿದ್ದು, ಶೀಘ್ರವೇ ಆ ಪ್ರಯೋಜನವನ್ನು ಒದಗಿಸುವ ಉದ್ದೇಶ ಹೊಂದಿದೆ. ಅದಕ್ಕಾಗಿ ವೇಯ್ಟ್ ಲಿಸ್ಟ್ ಕಾರ್ಯಕ್ರಮವನ್ನೂ ಆರಂಭಿಸಿದೆ. ರುಪೇ ಕ್ರೆಡಿಟ್ ಕಾರ್ಡ್ ಸೂಪರ್.ಮನಿಯ ಮೊದಲ ಉತ್ಪನ್ನವಾಗಿತ್ತು. ಈ ರುಪೇ ಕಾರ್ಡ್ ಅನ್ನು ಯಾವುದೇ ಯುಪಿಐ ಜೊತೆ ಲಿಂಕ್ ಮಾಡಿಕೊಂಡು ವಹಿವಾಟು ನಡೆಸಬಹುದಾಗಿತ್ತು. ಇಂಥಹ ವ್ಯವಸ್ಥೆ ಜಾಗತಿಕ ಮಟ್ಟದಲ್ಲಿ ಮೊದಲು ಎಂಬ ಹೆಗ್ಗಳಿಕೆ ಪಡೆದಿತ್ತು.

Tap to resize

Latest Videos

undefined

ನೋಟಿನ ಕಂತೆ ಆಕಾಶಕ್ಕೆಸದ ಯೂಟ್ಯೂಬರ್, ರಸ್ತೆಯಲ್ಲಿ ಬಿದ್ದ ದುಡ್ಡಿಗಾಗಿ ಮುಗಿಬಿದ್ದ ಜನ!

ಇನ್ನು ದೈನಂದಿನ ವಹಿವಾಟುಗಳ ಮೇಲೆ ಕೊಡುಗೆಗಳನ್ನು ಒದಗಿಸುವ ಮತ್ತು ಸಾಲ ಪ್ರಯೋಜನಗಳನ್ನು ಒದಗಿಸುವ ಅನುಭವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸೂಪರ್.ಮನಿ ತನ್ನ ಯುಪಿಐ ಸೇವೆಯನ್ನು ಆರಂಭಿಸಿದೆ. ಈ ಆ್ಯಪ್‌ ಪ್ರತೀ ವ್ಯಾಪಾರ ವಹಿವಾಟಿನ ಮೇಲೆ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ನೀಡುತ್ತದೆ. ವಿಶೇಷವಾಗಿ ಫ್ಲಿಪ್‌ಕಾರ್ಟ್ ಮತ್ತು ಮಿಂತ್ರಾ ಸೇರಿದಂತೆ ಪಾಲುದಾರ ಬಿಸಿನೆಸ್ ಗಳ ಉತ್ಪನ್ನಗಳ ಮೇಲೆ ವಿಶೇಷ ಆಫರ್ ನೀಡುತ್ತದೆ. ಈವರೆಗೆ ಸೂಪರ್.ಮನಿ ಆ್ಯಪ್‌ ನ ಬೀಟಾ ವರ್ಷನ್ ಚಾಲ್ತಿಯಲ್ಲಿದ್ದು, 1 ಕೋಟಿ ರೂ.ವರೆಗಿನ ವಹಿವಾಟು ಮಾಡಿದ ಸಾಧನೆ ಮಾಡಿದೆ. ಅಲ್ಲದೇ ಬೀಟಾ ವರ್ಷನ್ ಆ್ಯಪ್‌ 10 ಲಕ್ಷ ಡೌನ್ ಲೋಡ್ ಆಗಿದ್ದು, ಸಂಸ್ಥೆಯ ಯಶಸ್ಸಿಗೆ ಸಾಕ್ಷಿಯಾಗಿದೆ.

ಸೂಪರ್.ಮನಿ ಸಂಸ್ಥೆಯು ತನ್ನ ಸೂಪರ್‌ನೇಮ್‌ಡ್ರಾಪ್, ರಾಫಲ್ ಮತ್ತು ಮೀಮ್-ಮನಿಯಂತಹ ಹೊಸ ರೀತಿಯ ರಿವಾರ್ಡ್ ಕಾರ್ಯಕ್ರಮಗಳನ್ನು ಆರಂಭಿಸಿದ್ದು, ಪಾವತಿ ಮಾಡುವ ಪ್ರಕ್ರಿಯೆಯನ್ನು ವಿಶಿಷ್ಟ ಅನುಭವವಾಗಿ ಮಾರ್ಪಡಿಸುತ್ತಿದೆ. ಸೂಪರ್‌ನೇಮ್‌ಡ್ರಾಪ್ ನಲ್ಲಿ ಬಳಕೆದಾರರು ಒಂದು ವಾರದಲ್ಲಿ ಸಂಸ್ಥೆಯು ಆಯ್ಕೆ ಮಾಡಿದ ಹೆಸರುಳ್ಳ ಯಾರಿಗಾದರೂ ಹಣ ಹಳುಹಿಸಿದರೆ ತಕ್ಷಣ ಕ್ಯಾಶ್ ಬ್ಯಾಕ್ ದೊರೆಯುತ್ತದೆ. ರಾಫಲ್ ಫೀಚರ್ ಇನ್ನಷ್ಟೇ ಬಿಡುಗಡೆಯಾಗಬೇಕಿದ್ದು, ಇಲ್ಲಿ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ ಲಭ್ಯವಾಗುತ್ತದೆ. ಮೀಮ್-ಮನಿ ಆರ್ಥಿಕ ವಹಿವಾಟುಗಳನ್ನು ಇಂಟರೆಸ್ಟಿಂಗ್ ಮಾಡುತ್ತದೆ. ಇಲ್ಲಿ ಸಾಮಾಜಿಕವಾಗಿ ತೊಡಗಿಸಿಕೊಳ್ಳುವ ಅವಕಾಶ ಮತ್ತು ರಿವಾರ್ಡ್ ಪಡೆಯುವ ಅವಕಾಶ ಎರಡೂ ಸಿಗುತ್ತದೆ.

ಗುಜರಾತ್‌ನ ಈ ಗ್ರಾಮ ಏಷ್ಯಾದಲ್ಲೇ ಶ್ರೀಮಂತ; ಇಲ್ಲಿನ ಒಬ್ಬೊಬ್ಬರ ಆದಾಯ ಎಷ್ಟು ಗೊತ್ತಾ?

ಭಾರತದಲ್ಲಿ ಬೆಳೆಯುತ್ತಿರುವ ಗ್ರಾಹಕ ಸಾಲ ವಿಭಾಗದ ಕಡೆಗೆ ಗಮನ ಹರಿಸಿರುವ ಸೂಪರ್.ಮನಿ ತನ್ನ ಕ್ರೆಡಿಟ್ ಕಾರ್ಡ್ ಅನ್ನು ಎನ್‌ಪಿಸಿಐನ ರುಪೇ ಜೊತೆ ಸಂಯೋಜಿಸಲ್ಪಟ್ಟಿದೆ. ಮುಂದಿನ ದಿನಗಳಲ್ಲಿ ಯುಪಿಐ ಮೂಲಕವೇ ಸಾಲ ಲಭ್ಯವಾಗುವಂತೆ ಮಾಡುವ ಫೀಚರ್ ಅನ್ನು ಸೂಪರ್.ಮನಿ ಪರಿಚಯಿಸಲಿದೆ. ಅದರ ಜೊತೆಗೆ ಆರ್ಥಿಕ ಸಂಸ್ಥೆಗಳ ಜೊತೆಗಿನ ಪಾಲುದಾರಿಕೆ ಮೂಲಕ ಕೋ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್, ಫಿಕ್ಸೆಡ್ ಡಿಪಾಸಿಟ್‌ (ಎಫ್‌ಡಿ) ಮತ್ತು ಪೂರ್ವ-ಅನುಮೋದಿತ ವೈಯಕ್ತಿಕ ಸಾಲ ಸೌಲಭ್ಯ ಇತ್ಯಾದಿ ಸೌಲಭ್ಯಗಳನ್ನು ಒದಗಿಸುವ ಯೋಜನೆಗಳನ್ನು ಒದಗಿಸಲು ಸೂಪರ್.ಮನಿ ಯೋಜನೆ ಹಾಕಿಕೊಂಡಿದೆ.

ಸೂಪರ್.ಮನಿಯ ಸಂಸ್ಥಾಪಕ ಮತ್ತು ಸಿಇಓ ಪ್ರಕಾಶ್ ಸಿಕಾರಿಯಾ ಅವರು ಸೂಪರ್.ಮನಿಯ ಹೊಸ ಆ್ಯಪ್‌ ಬಿಡುಗಡೆ ಮಾಡಿದ್ದಾರೆ. ಪ್ರಸ್ತುತ ಸೂಪರ್.ಮನಿ ಆ್ಯಪ್‌ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿದೆ. ಶೀಘ್ರದಲ್ಲೇ ಐಓಎಸ್ ನಲ್ಲಿ ಆ್ಯಪ್‌ ಬಿಡುಗಡೆ ಮಾಡುವುದಾಗಿ ಕಂಪನಿ ತಿಳಿಸಿದೆ.

click me!