ಬಂತು ದೀಪಾವಳಿ: ನಿಂತಿಲ್ಲ ಖಾಸಗಿ ಬಸ್‌ಗಳ ಸುಲಿಗೆ ಚಾಳಿ!

By nikhil vkFirst Published Oct 10, 2018, 6:06 PM IST
Highlights

ಹಬ್ಬದ ಸೀನಸ್ ಶುರುವಾಯ್ತು! ಬಸ್ ದರ ಸಮರಕ್ಕೂ ಸಾಕ್ಷಿಯಾಯ್ತು! ಗಗನಕ್ಕೇರಿದ ಖಾಸಗಿ ಬಸ್ ದರ! ಯಾವ ಬಸ್? ಏನು ದರ? ಇಲ್ಲಿದೆ ಮಾಹಿತಿ! ಬಸ್‌ಗಿಂತ ವಿಮಾನವೇ ಚೀಪ್ ಆಯ್ತು! ಹುಬ್ಬಳ್ಳಿಗೆ ವಿಮಾನ ಪ್ರಯಾಣವೇ ಉತ್ತಮ 

ಬೆಂಗಳೂರು(ನ.2): ಇನ್ನೇನು ಹಬ್ಬಗಳ ಸಾಲು ಸಾಲು ರಜಾಗಳು ನಮ್ಮ ಮುಂದಿವೆ. ಎಲ್ಲರೂ ಹಬ್ಬವನ್ನು ತಮ್ಮ ತಮ್ಮ ಸ್ವಂತ ಗೂಡಲ್ಲೇ ಆಚರಿಸಲು ನಿರ್ಧರಿಸಿ ಹುಟ್ಟೂರಿಗೆ ಹೊರಡಲು ಗಂಟು ಮೂಟೆ ಕಟ್ಟುತ್ತಿದ್ದಾರೆ. 

ಆದರೆ ತಮ್ಮೂರಿಗೆ ಹೋಗುವ ಬಸ್ ಹತ್ತಲು ಯಾರ ಕಾಲುಗಳೂ ಮುಂದಾಗುತ್ತಿಲ್ಲ. ಕಾರಣ ಹಬ್ಬದ ಸೀಸನ್‌ನಲ್ಲಿ ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಟಿಕೆಟ್ ದರ ಕೇಳಿ ಎಲ್ಲರ ಕಾಲು ಥರಥರ ನಡುಗುತ್ತಿವೆ.

ಹೌದು, ಹಬ್ಬದ ಸೀಸನ್ ಹೆಸರಲ್ಲಿ ಖಾಸಗಿ ಬಸ್ ಸಂಸ್ಥೆಗಳಷ್ಟೇ ಅಲ್ಲ, ಸರ್ಕಾರಿ ಬಸ್ ರೇಟ್ ಕೂಡ ಏರಿದೆ. ವಿಶೇಷ ಅಂದರೆ ಬಸ್ ದರಕ್ಕಿಂತ ವಿಮಾನ ಪ್ರಯಾಣವೇ ಇದೀಗ ಅತ್ಯಂತ ಸುಲಭವಾಗಿದೆ. ಖಾಸಗಿ ಬಸ್ ದರಗಳಿಗಿಂತ ಖಾಸಗಿ ವಿಮಾನಯಾನ ಸಂಸ್ಥೆಗಳು ಅತ್ಯಂತ ಕಡಿಮೆ ದರದ ಆಫರ್ ನೀಡುತ್ತಿವೆ.

"

ಮೊದಲಿಗೆ ಬಸ್ ಪ್ರಯಾಣ ದರ ನೋಡುವುದಾದರೆ..

(ಕೆಳಗೆ ಕೊಟ್ಟಿರುವ ಬಸ್ ದರಗಳು ಬೆಂಗಳೂರಿನಿಂದ ಹುಬ್ಬಳ್ಳಿಗೆ ಮಾತ್ರ ಅನ್ವಯ):

1. ವಿಆರ್‌ಎಲ್: ರಾಜ್ಯದ ಅತ್ಯಂತ ಪ್ರತಿಷ್ಠಿತ ಖಾಸಗಿ ಬಸ್ ಸಂಸ್ಥೆಯಾದ ವಿಆರ್ ಎಲ್, ಹಬ್ಬದ ಸೀಸನ್ ಗಾಗಿ ತನ್ನ ಟಿಕೆಟ್ ದರದಲ್ಲಿ ಭಾರೀ ಬದಲಾವಣೆ ಮಾಡಿದೆ. ಅದರಂತೆ ತನ್ನ ವಿವಿಧ ಮಾದರಿಯ ಬಸ್ ಗಳ ಟಿಕೆಟ್ ದರದಲ್ಲಿ ಸಂಸ್ಥೆ ಏರಿಕೆ ಮಾಡಿದೆ.

A. ಎ.ಸಿ ಸ್ಲೀಪರ್- 2500 ರೂ.
B. ಮಲ್ಟಿ ಆ್ಯಕ್ಸೆಲ್-1300 ರೂ.
C. ನಾನ್ ಎ.ಸಿ. ಸ್ಲೀಪರ್-1300 ರೂ.
D. ಸೆಮಿ ಸ್ಲೀಪರ್-1500 ರೂ.
E. ಸೀಟರ್- 1200 ರೂ.

(ಸೂಚನೆ: ವಿವಿಧ ಮಾದರಿಯ ಬಸ್ ಗಳು ವಿವಿಧ ಸಮಯದಲ್ಲಿ ಸಂಚರಿಸುವುದರಿಂದ ಸಮಯಕ್ಕೆ ಅನುಗುಣವಾಗಿಯೂ ಬಸ್ ದರದಲ್ಲಿ ವ್ಯತ್ಯಾಸ ಇದೆ).

  
2. ಎಸ್‌ಆರ್‌ಎಸ್: ಮತ್ತೊಂದು ಜನಪ್ರಿಯ ಖಾಸಗಿ ಸಾರಿಗೆ ಸಂಸ್ಥೆಯಾದ ಎಸ್ ಆರ್ ಎಸ್ ಕೂಡ ತನ್ನ ಟಿಕೆಟ್ ದರದಲ್ಲಿ ಬದಲಾವಣೆ ಮಾಡಿದೆ. 

A. ಸೆಮಿ ಸ್ಲೀಪರ್-1400 ರೂ.
B. ನಾನ್ ಎ.ಸಿ. ಸ್ಲೀಪರ್-1400 ರೂ.
C. ನಾನ್ ಎ.ಸಿ. ಸ್ಲೀಪರ್-1500 ರೂ.
D. ಮಲ್ಟಿ ಆ್ಯಕ್ಸೆಲ್ ವೋಲ್ವೋ-3000 ರೂ.
E. ಮಲ್ಟಿ ಆ್ಯಕ್ಸೆಲ್ ವೋಲ್ವೋ ಸ್ಲೀಪರ್-3500 ರೂ.

(ಸೂಚನೆ: ವಿವಿಧ ಮಾದರಿಯ ಬಸ್ ಗಳು ವಿವಿಧ ಸಮಯದಲ್ಲಿ ಸಂಚರಿಸುವುದರಿಂದ ಸಮಯಕ್ಕೆ ಅನುಗುಣವಾಗಿಯೂ ಬಸ್ ದರದಲ್ಲಿ ವ್ಯತ್ಯಾಸ ಇದೆ).

3. ಇನ್ನು ವಿವಿಧ ಖಾಸಗಿ ಸಂಸ್ಥೆಗಳು ಕೂಡ ಹಬ್ಬದ ಸೀಸನ್ ನ ಲಾಭ ಪಡೆದು ತನ್ನ ಟಿಕೆಟ್ ದರಗಳನ್ನು ಏರಿಸಿವೆ.ದೆ.

A. ಸುಗಮಾ ಟ್ರಾವೆಲ್ಸ್: ಎ.ಸಿ. ಸ್ಲೀಪರ್-1300 ರೂ.
B. ನ್ಯಾಶನಲ್ ಟ್ರಾವೆಲ್ಸ್: ನಾನ್ ಎ.ಸಿ. ಸ್ಲೀಪರ್-1200 ರೂ.
C. ಎಸ್‌ಆರ್ ಟ್ರಾವೆಲ್ಸ್: ಎ.ಸಿ. ಸ್ಲೀಪರ್-2000 ರೂ.

4. ಇನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಟಿಕೆಟ್ ದರದಲ್ಲಿ ಅಂತಹ ವ್ಯತ್ಯಾಸ ಏನು ಮಾಡಿಲ್ಲ. KSRTC

A. ಎ.ಸಿ. ಸ್ಲೀಪರ್-1200 ರೂ.
B. ನಾನ್ ಎ.ಸಿ. ಸ್ಲೀಪರ್-900 ರೂ.
C. ಮಲ್ಟಿ ಆ್ಯಕ್ಸೆಲ್ ವೋಲ್ವೋ-1000 ರೂ.
D. ರಾಜಹಂಸ ಎಕ್ಸಿಕ್ಯೂಟಿವ್-800 ರೂ.
E. ಕರ್ನಾಟಕ ಸಾರಿಗೆ-527 ರೂ.


ಇದೇ ವೇಳೆ ಖಾಸಗಿ ವಿಮಾನಯಾನ ಸಂಸ್ಥೆಗಳು ನೀಡಿರುವ ಆಫರ್ ಗಮನಿಸಿದರೆ..

(ಕೆಳಗೆ ಕೊಟ್ಟಿರುವ ವಿಮಾನ ದರಗಳು ಬೆಂಗಳೂರಿನಿಂದ ಹುಬ್ಬಳ್ಳಿಗೆ ಮಾತ್ರ ಅನ್ವಯ)


1. ಇಂಡಿಗೋ ಏರಲೈನ್ಸ್: ಬೆಂಗಳೂರಿನಿಂದ ಹುಬ್ಬಳ್ಳಿಗೆ ಇಂಡಿಗೋ ಏರಲೈನ್ಸ್ ಕೇವಲ 1600 ರೂ. ಟಿಕೆಟ್ ದರ ನಿಗದಿಗೊಳಿಸಿದೆ.

2. ಏರ್ ಇಂಡಿಯಾ: ಹುಬ್ಬಳ್ಳಿಗೆ ಈ ಮೊದಲು 1600 ರೂ. ಟಿಕೆಟ್ ದರ ಇದ್ದು, ಹಬ್ಬದ ಸೀಸನ್ ಗಾಗಿ 2000 ರೂ. ಗೆ ಏರಿಸಲಾಗಿದೆ.

 

"
ಒಟ್ಟಿನಲ್ಲಿ ಹಬ್ಬಕ್ಕಾಗಿ ಊರಿಗೆ ಹೋಗಬೇಕು ಎಂಬ ಜನಸಾಮಾನ್ಯರ ಆಸೆಗೆ ಈ ಟಿಕೆಟ್ ದರಗಳು ಹೆಚ್ಚು ಕಡಿಮೆ ತಣ್ಣೀರು ಎರಚಿದ್ದು, ಬಸ್ ಪ್ರಯಾಣಕ್ಕಿಂತ ವಿಮಾನ ಪ್ರಯಾಣವೇ ಉತ್ತಮ ಎಂಬ ನಿರ್ಧಾರಕ್ಕೆ ಜನ ಬಂದಂತಿದೆ. 

click me!