Business Classನಲ್ಲಿ ಪ್ರಯಾಣಿಸೋರಿಗೆ ಏನೆಲ್ಲಾ ಸೌಲಭ್ಯ ಸಿಗುತ್ತೆ ಐಡಿಯಾ ಇದ್ಯಾ?

By Suvarna News  |  First Published Jan 5, 2023, 2:56 PM IST

ವಿಮಾನ ಪ್ರಯಾಣ ಅಂದಾಗ ಮಧ್ಯಮ ವರ್ಗದ ಜನರ ಆಯ್ಕೆ ಎಕಾನಮಿ ಕ್ಲಾಸ್ ಮೇಲಿರುತ್ತದೆ. ಬ್ಯುಸಿನೆಸ್ ಕ್ಲಾಸ್ ದುಬಾರಿ ಎಂಬುದು ಅವರ ಆಲೋಚನೆ. ಅದು ನಿಜ. ಆದ್ರೆ ಬ್ಯುಸಿನೆಸ್ ಕ್ಲಾಸ್ ನಲ್ಲಿ ಸಿಗುವ ಸೌಲಭ್ಯ ಹೆಚ್ಚಿರುತ್ತದೆ. ಆರಾಮದಾಯಕ ಪ್ರಯಾಣದ ಜೊತೆ ಆಹಾರವನ್ನು ಉಚಿತವಾಗಿ ಪಡೆಯಬಹುದು.
 


ರೈಲು, ರಸ್ತೆ ಸಾರಿಗೆಗೆ ಹೋಲಿಕೆ ಮಾಡಿದ್ರೆ ವಿಮಾನ ಪ್ರಯಾಣ ತುಂಬ ದುಬಾರಿ. ಇದೇ ಕಾರಣಕ್ಕೆ ಜನಸಾಮಾನ್ಯರು ವಿಮಾನ ಪ್ರಯಾಣವನ್ನು ಹೆಚ್ಚಾಗಿ ಆಯ್ದುಕೊಳ್ಳುವುದಿಲ್ಲ. ಆಗಾಗ ವಿಮಾನ ಪ್ರಯಾಣ ಬೆಳೆಸುವವರು ಕೂಡ ಎಕಾನಮಿ  ಕ್ಲಾಸ್ ನಲ್ಲಿ ಪ್ರಯಾಣ ಬೆಳೆಸ್ತಾರೆ. ಬ್ಯುಸಿನೆಸ್ ಕ್ಲಾಸ್ ಗೆ ಹೋಲಿಸಿದ್ರೆ ಇದರ ಟಿಕೆಟ್ ಬೆಲೆ ಕಡಿಮೆ. ಆದ್ರೆ ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣ ಬೆಳೆಸುವವರಿಗೆ ಅನೇಕ ಸೌಲಭ್ಯ ಲಭ್ಯವಿದೆ. ಇದು ಅನೇಕ ಜನರಿಗೆ ತಿಳಿದಿಲ್ಲ. ನೀವೂ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಮಾಡುವವರಿದ್ದರೆ ಬ್ಯುಸಿನೆಸ್ ಕ್ಲಾಸ್ ನಲ್ಲಿ ಏನೆಲ್ಲ ಸೌಲಭ್ಯ ಲಭ್ಯವಿದೆ ಎಂಬುದನ್ನು ತಿಳಿದುಕೊಳ್ಳಿ. 

ಬ್ಯುಸಿನೆಸ್ (Business) ಕ್ಲಾಸ್ ಅಂದ್ರೇನು ಗೊತ್ತಾ? : ವಿಮಾನ (Plane) ದಲ್ಲಿ ಮೂರು ಕ್ಲಾಸ್ ಗಳಿರುತ್ತವೆ. ಒಂದು ಎಕಾನಮಿ (Economy) ಕ್ಲಾಸ್. ಎರಡನೇಯದು ಸೆಕೆಂಡ್ ಕ್ಲಾಸ್ ಹಾಗೂ ಮೂರನೇಯದು ಬ್ಯುಸಿನೆಸ್ ಕ್ಲಾಸ್. ಮೊದಲೇ ಹೇಳಿದಂತೆ ಈ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ದರ ಹೆಚ್ಚಿರುತ್ತದೆ. ಬಹುತೇಕ ಭಾರತೀಯರು ಎಕಾನಮಿ ಕ್ಲಾಸ್ ನಲ್ಲಿ ಪ್ರಯಾಣ ಬೆಳೆಸಲು ಇಷ್ಟಪಡ್ತಾರೆ. ಕಡಿಮೆ ದರದಲ್ಲಿ ಪ್ರಯಾಣ ಮುಗಿಸುವುದು ಅವರ ಉದ್ದೇಶವಾಗಿರುತ್ತದೆ. ನಿಮಗೆ ಬ್ಯುಸಿನೆಸ್ ಕ್ಲಾಸ್ ನಲ್ಲಿ ಸಿಕ್ಕ ಎಲ್ಲ ಸೌಲಭ್ಯ ಈ ಎಕಾನಮಿ ಕ್ಲಾಸ್ ನಲ್ಲಿ ಸಿಗೋದಿಲ್ಲ.

ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆಗಳನ್ನು ಹೊಂದಿದ್ದೀರಾ? ಹಾಗಿದ್ರೆ ಈ 5 ಸಮಸ್ಯೆಗಳಾಗೋ ಸಾಧ್ಯತೆ ಅಧಿಕ

Tap to resize

Latest Videos

ಬ್ಯುಸಿನೆಸ್ ಕ್ಲಾಸ್ ನಲ್ಲಿ ಸಿಗುತ್ತೆ ಈ ಎಲ್ಲ ಸೌಲಭ್ಯ : ಬ್ಯುಸಿನೆಸ್ ಕ್ಲಾಸ್ ಹಾಗೂ ಎಕಾನಮಿ ಕ್ಲಾಸ್ ಅಂತರದಲ್ಲಿ ಮೊದಲನೇಯದು ನೀವು ಸರತಿ ಸಾಲಿನಲ್ಲಿ ನಿಂತು ವಿಮಾನ ಏರಬೇಕಾಗಿಲ್ಲ. ಮೊದಲೇ ನಿಮ್ಮನ್ನು ವಿಮಾನದೊಳಗೆ ಬಿಡಲಾಗುತ್ತದೆ. ಅಗಲವಾದ, ಮೆತ್ತನೆಯ   ಆಸನಗಳನ್ನು ಬ್ಯುಸಿನೆಸ್ ಕ್ಲಾಸ್ ಹೊಂದಿರುತ್ತದೆ. ಇಲ್ಲಿ ಸೀಟನ್ನು ಹಿಂದೆ ತಳ್ಳಿ, ಕಾಲಿನ ಭಾಗದಲ್ಲಿರುವ ಸೀಟನ್ನು ಮೇಲಕ್ಕೆ ಎತ್ತಿ ಮಲಗಬಹುದು. ಕೈ ಇಡಲು ಇಲ್ಲಿ ದೊಡ್ಡ ಸ್ಥಳವಿರುತ್ತದೆ. ಎರಡು ಸೀಟಿನ ಮಧ್ಯೆಯೂ ಜಾಗವಿರುತ್ತದೆ. ಎದ್ದು ಹೋಗ್ಬೇಕೆಂದ್ರೆ ಇನ್ನೊಬ್ಬರಿಗೆ ತೊಂದರೆ ನೀಡಬೇಕಾಗಿಲ್ಲ. ಯಾಕೆಂದ್ರೆ ಒಂದು ಕಡೆ ಬರೀ ಎರಡು ಸೀಟ್ ಮಾತ್ರ ಇರುತ್ತದೆ. ಆದ್ರೆ ಎಕಾನಮಿ ಕ್ಲಾಸ್ ನಲ್ಲಿ ಹಾಗಲ್ಲ. ಒಂದೊಂದು ಪಕ್ಕದಲ್ಲಿ ಮೂರು ಕುರ್ಚಿಗಳಿರುತ್ತವೆ. ಇಲ್ಲಿ ಸೀಟ್ ಸೇರಿಕೊಂಡಿರುತ್ತದೆ. ನೀವು ಕಿಟಕಿ ಕಡೆ ಕುಳಿತಿದ್ರೆ ಎದ್ದು ಹೋಗೋದು ಕಷ್ಟ. 
ಇಷ್ಟೇ ಅಲ್ಲ, ಬ್ಯುಸಿನೆಸ್ ಕ್ಲಾಸ್‌ನಲ್ಲಿ ನೀಡಲಾದ ಸೀಟಿನ ಮುಂದೆ, ವೀಡಿಯೊ ವೀಕ್ಷಿಸುವ ಸೌಲಭ್ಯವಿರುತ್ತದೆ. ಪ್ರಯಾಣಿಕರಿಗೆ ಹೆಡ್ ಫೋನ್, ಮ್ಯಾಗಜೀನ್, ದಿಂಬು, ಆಹಾರವನ್ನು ಕಾಲಕಾಲಕ್ಕೆ ನೀಡಲಾಗುತ್ತದೆ. ವಿಮಾನ ಏರಿದ ತಕ್ಷಣ ನಿಮಗೆ ಕರವಸ್ತ್ರ ನೀಡಲಾಗುತ್ತದೆ. ಯಾವುದೇ ಪಾನೀಯವನ್ನು ಆರ್ಡರ್ ಮಾಡಬಹುದು. ದೀರ್ಘವಾದ ಮೆನು ನೀಡಲಾಗುತ್ತದೆ. ಇದರಲ್ಲಿ ನಿಮಗೆ ಸಸ್ಯಾಹಾರಿ ಮತ್ತು ಮಾಂಸಾಹಾರಿ ಖಾದ್ಯ ಲಭ್ಯವಿದೆ, ನಿಮ್ಮ ಆಯ್ಕೆಯ ಪ್ರಕಾರ ನೀವು ಆಹಾರ ಪಡೆಯಬಹುದು. ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸುವವರ ಜೊತೆಗೆ ವಿಮಾನದ ಸಿಬ್ಬಂದಿ ಇರ್ತಾರೆ.  

ಬ್ಯುಸಿನೆಸ್ ಕ್ಲಾಸ್ ಟಿಕೆಟ್ ತೋರಿಸಿದ್ರೆ ವಿಮಾನ ನಿಲ್ದಾಣದಲ್ಲಿಯೂ ನಿಮಗೆ ವಿಶೇಷ ಸೌಲಭ್ಯ ಸಿಗುತ್ತದೆ. ಲಾಂಜ್‌ನಲ್ಲಿ ಉಚಿತವಾಗಿ ವಿಶ್ರಾಂತಿ ಪಡೆಯಲು ನಿಮಗೆ ಅವಕಾಶ ಸಿಗುತ್ತದೆ. ಬಫೆ ಆಹಾರವನ್ನು ಕೂಡ ನೀವು ಆನಂದಿಸಬಹುದು. ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಹೊಂದಿರುವವರಿಗೆ ಇದು ಉಚಿತ. ಆದ್ರೆ ಸಾಮಾನ್ಯ ಜನರಿಗೆ ಇಲ್ಲಿನ ಆಹಾರ ದುಬಾರಿಯಾಗುತ್ತದೆ.  

ಮನೆ ಇರೋರು ಎಲ್ಲರೂ ಹಿಡಿ ಬಳಸ್ತಾರೆ, ವ್ಯಾಪಾರ ಆಗೋದು ಪಕ್ಕಾ

ಬ್ಯುಸಿನೆಸ್ ಕ್ಲಾಸ್ ನಲ್ಲಿ ಹೆಚ್ಚು ಪ್ರಯಾಣಿಸ್ತಾರೆ ಇವರು : ಸೆಲೆಬ್ರಿಟಿಗಳು, ಉದ್ಯಮಿಗಳು, ರಾಜಕಾರಣಿಗಳು ಸಾಮಾನ್ಯವಾಗಿ ಈ ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣ ಬೆಳೆಸುತ್ತಾರೆ. ಇವರಲ್ಲದೆ ಅಪರೂಪಕ್ಕೊಮ್ಮೆ ಜನಸಾಮಾನ್ಯರು ಕೂಡ ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣ ಬೆಳೆಸುತ್ತಾರೆ. 
 

click me!