2023ರಲ್ಲಿ ಈ ನಾಲ್ಕು ಬ್ಯಾಂಕುಗಳ ವಿಶೇಷ ಎಫ್ ಡಿ ಯೋಜನೆ ಸ್ಥಗಿತ

By Suvarna NewsFirst Published Dec 29, 2022, 7:03 PM IST
Highlights

ಕೋವಿಡ್-19 ಪೆಂಡಾಮಿಕ್ ಸಮಯದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಕೆಲವು ಬ್ಯಾಂಕ್ ಗಳು ಹಿರಿಯ ನಾಗರಿಕರಿಗೆ ನೆರವಾಗಲು ಅಧಿಕ ಬಡ್ಡಿದರ ನೀಡೋ ವಿಶೇಷ ಸ್ಥಿರ ಠೇವಣಿ ಯೋಜನೆಗಳನ್ನು ಪ್ರಾರಂಭಿಸಿದ್ದವು. ಈ ಯೋಜನೆ ಕಿರು ಅವಧಿಯದ್ದಾಗಿದ್ದು, ಕೆಲವು ಬ್ಯಾಂಕ್ ಗಳು 2023ರಲ್ಲಿ ಸ್ಥಗಿತಗೊಳಿಸಲಿವೆ. ಹಾಗಾದ್ರೆ ಯಾವೆಲ್ಲ ಬ್ಯಾಂಕ್ ಗಳು ವಿಶೇಷ ಎಫ್ ಡಿ ಯೋಜನೆಯನ್ನು ಸ್ಥಗಿತಗೊಳಿಸುತ್ತಿವೆ? ಇಲ್ಲಿದೆ ಮಾಹಿತಿ.

Business Desk: ಕಳೆದ ಆರು ತಿಂಗಳ ಅವಧಿಯಲ್ಲಿ ಪ್ರಮುಖ ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕ್ ಗಳ ಜೊತೆಗೆ ಅನೇಕ ಸಣ್ಣ ಹಣಕಾಸು ಬ್ಯಾಂಕ್ ಗಳು ಕೂಡ ಕಿರು ಹಾಗೂ ದೀರ್ಘಾವಧಿ ಸ್ಥಿರ ಠೇವಣಿ (ಎಫ್ ಡಿ) ಮೇಲಿನ ಬಡ್ಡಿದರ ಹೆಚ್ಚಳ ಮಾಡಿವೆ. ಅಲ್ಲದೆ,  ಕೋವಿಡ್-19 ಪೆಂಡಾಮಿಕ್ ಸಮಯದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್ ಡಿಎಫ್ ಸಿ ಬ್ಯಾಂಕ್ ಸೇರಿದಂತೆ ಕೆಲವು ಬ್ಯಾಂಕುಗಳು ಹಿರಿಯ ನಾಗರಿಕರಿಗೆ ನೆರವಾಗಲು ಅಧಿಕ ಬಡ್ಡಿದರ ನೀಡೋ ವಿಶೇಷ ಸ್ಥಿರ ಠೇವಣಿಗಳನ್ನು ಪ್ರಾರಂಭಿಸಿದ್ದವು. ವಿಶೇಷ ಎಫ್ ಡಿ (ಎಫ್ ಡಿ) ಯೋಜನೆಯನ್ನು ಅಲ್ಪಾವಧಿಗೆ ಪ್ರಾರಂಭಿಸಲಾಗಿತ್ತು, ಆದ್ರೆ ತೆರಿಗೆ ವ್ಯವಸ್ಥೆ ಮೇಲೆ ಕೋವಿಡ್ -19 ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರಿದ ಹಿನ್ನೆಲೆಯಲ್ಲಿ ಬ್ಯಾಂಕುಗಳು ಈ ಯೋಜನೆಯನ್ನು ವಿಸ್ತರಿಸಿದ್ದವು. ನಾಲ್ಕು ಬ್ಯಾಂಕುಗಳ ಇಂಥ ವಿಶೇಷ ಎಫ್ ಡಿ ಯೋಜನೆಗಳು 2023ರಲ್ಲಿ ಕೊನೆಗೊಳ್ಳಲಿವೆ. ಹಾಗಾದ್ರೆ ಯಾವೆಲ್ಲ ಬ್ಯಾಂಕ್ ಗಳು ವಿಶೇಷ ಎಫ್ ಡಿ ಯೋಜನೆಯನ್ನು ಮುಕ್ತಾಯಗೊಳಿಸಲಿವೆ. ಇಲ್ಲಿದೆ ಮಾಹಿತಿ. 

ಎಸ್ ಬಿಐ
ಹಿರಿಯ ನಾಗರಿಕರಿಗೆ ಎಸ್ ಬಿಐ ವಿ ಕೇರ್ (SBI we care) ಎಫ್ ಡಿ ಯೋಜನೆ ಪ್ರಾರಂಭಿಸಿತ್ತು. ಈ ಎಫ್ ಡಿಗೆ (FD) ಅಧಿಕ ಬಡ್ಡಿದರ (Interest rate) ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ಮೆಚ್ಯೂರ್ ಆದ ಖಾತೆಗಳನ್ನು ರಿನ್ಯೂ (Renew) ಮಾಡಲು ಹಾಗೂ ಹೊಸ ಖಾತೆ ತೆರೆಯಲು ಅವಕಾಶವಿದೆ. ಈ ಯೋಜನೆಯನ್ನು ಬ್ಯಾಂಕ್ (Bank) ಕನಿಷ್ಠ 5 ವರ್ಷಗಳು ಹಾಗೂ ಗರಿಷ್ಠ 10 ವರ್ಷಗಳ ಅವಧಿಗೆ ನೀಡುತ್ತಿದೆ. ಎಸ್ ಬಿಐಯ ಈ ವಿಶೇಷ ಎಫ್ ಡಿ ಯೋಜನೆ 2023ರ ಮಾರ್ಚ್ 31ರಂದು ಕೊನೆಗೊಳ್ಳಲಿದೆ. 

ಎಲ್ಐಸಿಯ ಈ ಪಾಲಿಸಿಯಲ್ಲಿ ದಿನಕ್ಕೆ 200ರೂ. ಹೂಡಿಕೆ ಮಾಡಿದ್ರೆ ಸಿಗುತ್ತೆ 28 ಲಕ್ಷ ರೂ. ರಿಟರ್ನ್!

ಎಚ್ ಡಿಎಫ್ ಸಿ
ಸೀನಿಯರ್ ಸಿಟಿಜನ್ ಕೇರ್ ಎಫ್ ಡಿ ಅನ್ನೋದು ಹಿರಿಯ ನಾಗರಿಕರಿಗಾಗಿ ಖಾಸಗಿ ವಲಯದ ಬ್ಯಾಂಕ್ ಎಚ್ ಡಿಎಫ್ ಸಿ ರೂಪಿಸಿರುವ ವಿಶೇಷ ಸ್ಥಿರ ಠೇವಣಿ ಯೋಜನೆ. ಈ ಯೋಜನೆಯನ್ನು 2020ರ ಮೇ 18ರಂದು ಪ್ರಾರಂಭಿಸಲಾಗಿತ್ತು. ಆ ಬಳಿಕ ಈ ಯೋಜನೆಯನ್ನು ಬ್ಯಾಂಕ್ ಸ್ಥಗಿತಗೊಳಿಸಿತ್ತು. ಆದರೆ, ನಂತರ ಮರಳಿ ಈ ಯೋಜನೆಯನ್ನು ಪ್ರಾರಂಭಿಸಿತ್ತು. 

ಐಸಿಐಸಿಐ
ಐಸಿಐಸಿಐ (ICICI) ಬ್ಯಾಂಕಿನ ಹಿರಿಯ ನಾಗರಿಕರ ಸ್ಥಿರ ಠೇವಣಿ ಯೋಜನೆ ಹಿರಿಯ ನಾಗರಿಕರಿಗೆ ಇತರ ಎಫ್ ಡಿಗಿಂತ (FD) ಹೆಚ್ಚುವರಿ 10 ಬೇಸಿಸ್ ಪಾಯಿಂಟ್ಸ್ ಬಡ್ಡಿದರವನ್ನು ನೀಡುತ್ತದೆ. ಅಂದರೆ ಹಿರಿಯ ನಾಗರಿಕರ ಎಫ್ ಡಿಗೆ ನೀಡುತ್ತಿರುವ ಹೆಚ್ಚುವರಿ 50 ಬೇಸಿಸ್ ಪಾಯಿಂಟ್ಸ್ ಮೇಲೆ ಹೆಚ್ಚುವರಿ 10 ಬೇಸಿಸ್ ಪಾಯಿಂಟ್ಸ್ ಬಡ್ಡಿ ನೀಡುತ್ತಿದೆ. ಐದು ವರ್ಷ ಒಂದು ದಿನದಿಂದ ಹಿಡಿದು 10 ವರ್ಷಗಳ ತನಕದ ಎಫ್ ಡಿ ಮೇಲೆ ಈ ಹೆಚ್ಚುವರಿ ಬಡ್ಡಿದರ ಅನ್ವಯಿಸುತ್ತದೆ. 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಎಫ್ ಡಿ ಮೇಲೆ ಈ ಬಡ್ಡಿದರ ಅನ್ವಯಿಸುತ್ತದೆ. ಈ ಯೋಜನೆ 2023ರ ಏಪ್ರಿಲ್ 7ರ ತನಕ ಮಾತ್ರ ಲಭ್ಯವಿರುತ್ತದೆ.

ಪೇಟಿಎಂ ವ್ಯಾಲೆಟ್ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ

ಪಿಎನ್ ಬಿ
ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ಸಾಮಾನ್ಯ ವರ್ಗದ ಜನರಿಗೆ ಶೇ.7.25 ಬಡ್ಡಿದರ ನೀಡುತ್ತಿದೆ. ಆದರೆ, ಹಿರಿಯರ ನಾಗರಿಕರ ಎಫ್ ಡಿಗೆ ಶೇ.7.75 ಬಡ್ಡಿದರ ನೀಡುತ್ತಿದೆ. ಇನ್ನು ಸೂಪರ್ ಸೀನಿಯರ್ ಸಿಟಿಜನ್ಸ್ ಠೇವಣಿಗಳ ಮೇಲೆ ಶೇ.8.05 ಬಡ್ಡಿದರ ನೀಡುತ್ತಿದೆ. ಈ ವಿಶೇಷ ಎಫ್ ಡಿ ಯೋಜನೆ 666 ದಿನಗಳ ಮೆಚ್ಯೂರಿಟಿ ಅವಧಿಯನ್ನು ಹೊಂದಿದೆ. 

click me!