ಎಲ್ಐಸಿ ದೀರ್ಘಾವಧಿ ಪಾಲಿಸಿಗಳಷ್ಟೇ ಅಲ್ಲದೆ, ಕಿರು ಅವಧಿಯ ಪ್ಲ್ಯಾನ್ ಗಳನ್ನು ಕೂಡ ರೂಪಿಸುತ್ತಿದೆ. ಇದರಲ್ಲಿ ಎಲ್ಐಸಿ ಜೀವನ್ ಪ್ರಗತಿ ಪಾಲಿಸಿ ಕೂಡ ಒಂದು. ಈ ಪಾಲಿಸಿಯಲ್ಲಿ ಹೂಡಿಕೆ ಮಾಡಿದರೆ ಅಧಿಕ ರಿಟರ್ನ್ ಪಡೆಯಲು ಸಾಧ್ಯವಿದೆ. ಅದು ಹೇಗೆ? ಇಲ್ಲಿದೆ ಮಾಹಿತಿ.
Business Desk:ಹೂಡಿಕೆ ಮಾಡುವಾಗ ನಾವು ಸಾಮಾನ್ಯವಾಗಿ ಸುರಕ್ಷತೆ ಹಾಗೂ ಉತ್ತಮ ರಿಟರ್ನ್ಸ್ ನೋಡುತ್ತೇವೆ. ಇದೇ ಕಾರಣಕ್ಕೆ ಭಾರತದಲ್ಲಿ ಅನೇಕ ಹೂಡಿಕೆದಾರರು ಇಂದಿಗೂ ಭಾರತೀಯ ಜೀವ ವಿಮಾ ನಿಗಮದ ಯೋಜನೆಗಳನ್ನು ನೆಚ್ಚಿಕೊಂಡಿದ್ದಾರೆ. ಎಲ್ಐಸಿ ಸುರಕ್ಷತೆಯ ಜೊತೆಗೆ ಉತ್ತಮ ರಿಟರ್ನ್ ನೀಡುವ ಯೋಜನೆಗಳನ್ನು ರೂಪಿಸುತ್ತದೆ. ಅಲ್ಲದೆ, ವಯೋಮಾನ, ಆದಾಯದ ಆಧಾರದಲ್ಲಿ ಎಲ್ಲ ವರ್ಗದವರಿಗೂ ಸರಿ ಹೊಂದುವ ಪಾಲಿಸಿಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಲೇ ಇರುತ್ತದೆ. ಇದೇ ಕಾರಣಕ್ಕೆ ಜೀವ ವಿಮೆ ವಿಚಾರಕ್ಕೆ ಬಂದಾಗ ಬೇರೆ ಯಾವ ಖಾಸಗಿ ಕಂಪನಿಗಳು ಎಲ್ಐಸಿಯನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ. ಎಲ್ಐಸಿ ದೀರ್ಘಾವಧಿ ಪಾಲಿಸಿಗಳಷ್ಟೇ ಅಲ್ಲದೆ, ಕಿರು ಅವಧಿಯ ಪ್ಲ್ಯಾನ್ ಗಳನ್ನು ಕೂಡ ರೂಪಿಸುತ್ತಿದೆ. ಇದರಲ್ಲಿ ಎಲ್ಐಸಿ ಜೀವನ್ ಪ್ರಗತಿ ಪಾಲಿಸಿ ಕೂಡ ಒಂದು. ಈ ಪಾಲಿಸಿಯಲ್ಲಿ ಹೂಡಿಕೆ ಮಾಡಿದರೆ ಅಧಿಕ ರಿಟರ್ನ್ ಪಡೆಯಲು ಸಾಧ್ಯವಿದೆ. ಈ ಪಾಲಿಸಿಯಲ್ಲಿ ಪ್ರತಿದಿನ 200ರೂ. ಹೂಡಿಕೆ ಮಾಡಿದರೆ ಮೆಚ್ಯೂರಿಟಿ ವೇಳೆ 28ಲಕ್ಷ ರೂ. ಪಡೆಯಬಹುದು. ಹಾಗಾದ್ರೆ ಎಲ್ಐಸಿ ಜೀವನ ಪ್ರಗತಿ ಯೋಜನೆಯ ಅವಧಿ ಎಷ್ಟು? ಯಾರು ಹೂಡಿಕೆ ಮಾಡಬಹುದು? ಇಲ್ಲಿದೆ ಮಾಹಿತಿ.
ಎಲ್ಐಸಿ ಜೀವನ ಪ್ರಗತಿ ಯೋಜನೆ (LIC Jeevan Pragati policy)ಕಡಿಮೆ ಅವಧಿಯ ಪಾಲಿಸಿಯಾಗಿದೆ. ಈ ಪಾಲಿಸಿ ವಿಮಾ ಸುರಕ್ಷತೆಯ ಜೊತೆಗೆ ಕಡಿಮೆ ಅವಧಿಯಲ್ಲಿ ಉತ್ತಮ ರಿಟರ್ನ್ (Return) ಕೂಡ ನೀಡುತ್ತದೆ. ಈ ಯೋಜನೆಯಲ್ಲಿ 12ರಿಂದ 20 ವರ್ಷಗಳ ನಡುವಿನ ಹೂಡಿಕೆ ಅವಧಿ ಆಯ್ಕೆ ಮಾಡಿಕೊಳ್ಳಬಹುದು. ಇನ್ನು ಇದರಲ್ಲಿ ಪ್ರತಿದಿನ 200ರೂ. ಅಂದ್ರೆ ಮಾಸಿಕ 6,000ರೂ. ಹೂಡಿಕೆ ಮಾಡಬೇಕು. ಅಂದರೆ ವಾರ್ಷಿಕ 72 ಸಾವಿರ ರೂ. ಹೂಡಿಕೆ ಮಾಡಿದಂತೆ ಆಗುತ್ತದೆ. 20 ವರ್ಷಗಳ ಮೆಚ್ಯೂರಿಟಿ ಅವಧಿ ಮುಗಿದ ಬಳಿಕ 28 ಲಕ್ಷ ರೂ. ಗಳಿಸಬಹುದು. ಇದು ನಿಮಗೆ ಜೀವನ ಸುರಕ್ಷತೆಯನ್ನು ಕೂಡ ಒದಗಿಸುತ್ತದೆ. ಒಂದು ವೇಳೆ ಪಾಲಿಸಿದಾರ (Policyholder) ಮರಣ ಹೊಂದಿದರೆ ಆತನ ನಾಮಿನಿಗೆ ವಿಮಾ ಮೊತ್ತ (Policy amount) ಲಭಿಸುತ್ತದೆ.
ಅಂಚೆ ಕಚೇರಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಸಿಗುತ್ತೆ ಬ್ಯಾಂಕ್ ಎಫ್ ಡಿಗಿಂತ ಅಧಿಕ ಬಡ್ಡಿ!
ಈ ಎಲ್ಐಸಿ ಪಾಲಿಸಿಯಲ್ಲಿ ಹೂಡಿಕೆ (Invest) ಮಾಡಿದ್ರೆ ಪಾಲಿಸಿದಾರನ ವಿಮಾ ಮೊತ್ತ ಪ್ರತಿ ಐದು ವರ್ಷಕ್ಕೊಮ್ಮೆ ಹೆಚ್ಚಾಗುತ್ತದೆ. ಉದಾಹರಣೆಗೆ ಒಬ್ಬ ವ್ಯಕ್ತಿ 4ಲಕ್ಷ ರೂ. ಮೊತ್ತದ ವಿಮಾ ಪಾಲಿಸಿ ಖರೀದಿಸಿದ್ರೆ, ಐದು ವರ್ಷಗಳ ಬಳಿಕ ವಿಮಾ ಮೊತ್ತ ಐದು ಲಕ್ಷ ರೂ. ಆಗುತ್ತದೆ. 10-15 ವರ್ಷಗಳ ಬಳಿಕ ಆರು ಲಕ್ಷ ರೂ. ಆಗುತ್ತದೆ. ಇನ್ನು 20 ವರ್ಷಗಳ ಬಳಿಕ 7ಲಕ್ಷ ರೂ. ಆಗುತ್ತದೆ.
ಯಾರು ಈ ಪಾಲಿಸಿ ಖರೀದಿಸಬಹುದು?
12 ಹಾಗೂ 45 ವರ್ಷಗಳ ನಡುವಿನ ವಯಸ್ಸಿನವರು ಈ ಪಾಲಿಸಿ ಖರೀದಿಸಬಹುದು. ಈ ಪಾಲಿಸಿಯಲ್ಲಿ ಭರವಸೆ ನೀಡಿರುವ ಕನಿಷ್ಠ ಮೊತ್ತ 1.5ಲಕ್ಷ ರೂ. ಇನ್ನು ಗರಿಷ್ಠ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ.
ಪೇಟಿಎಂ ವ್ಯಾಲೆಟ್ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ
ವಾಟ್ಸ್ಆ್ಯಪ್ ಸೇವೆ
ನೀವು ಮೊಬೈಲ್ (Mobile) ಮುಖಾಂತರ ಎಲ್ಐಸಿ ವಾಟ್ಸ್ಆ್ಯಪ್ (Whatsapp) ಸೇವೆಗಳನ್ನು ಪಡೆಯಲು ಎಲ್ಐಸಿ ಪೋರ್ಟಲ್ ನಲ್ಲಿ ಎಲ್ ಐಸಿ (LIC) ಪಾಲಿಸಿ ನೋಂದಣಿ ಮಾಡಿಸೋದು ಅಗತ್ಯ. ಆ ಬಳಿಕ ನೀವು ನಿಮ್ಮ ವಾಟ್ಸ್ಆ್ಯಪ್ ನಿಂದ 8976862090 ಸಂಖ್ಯೆಗೆ "Hi" ಎಂದು ಮೆಸೇಜ್ ಕಳುಹಿಸಬೇಕು. ಆ ಬಳಿಕ ನಿಮಗೆ ಯಾವೆಲ್ಲ ಸೇವೆಗಳು (Services) ಲಭ್ಯವಿವೆ ಎಂಬ ಮಾಹಿತಿ ಸಿಗಲಿದೆ. ಅಲ್ಲಿ ಆಯಾ ಸೇವೆಗೆ ಸಂಬಂಧಿಸಿದ ಸಂಖ್ಯೆ ಆಯ್ಕೆ ಮಾಡಿದರೆ ಅಗತ್ಯವಿರುವ ಮಾಹಿತಿ ಲಭಿಸುತ್ತದೆ.