ಇಂದು ನಿರ್ಮಲಾ 8ನೇ ಕೇಂದ್ರ ಬಜೆಟ್ ಮಂಡನೆ: ಸ್ತ್ರೀಯರು, ಬಡವರು, ಮಧ್ಯಮ ವರ್ಗ ಪರ ಬಜೆಟ್‌, ಮೋದಿ

Published : Feb 01, 2025, 05:30 AM IST
ಇಂದು ನಿರ್ಮಲಾ 8ನೇ ಕೇಂದ್ರ ಬಜೆಟ್ ಮಂಡನೆ: ಸ್ತ್ರೀಯರು, ಬಡವರು, ಮಧ್ಯಮ ವರ್ಗ ಪರ ಬಜೆಟ್‌, ಮೋದಿ

ಸಾರಾಂಶ

ಈ ಸಲದ ಬಜೆಟ್ ಕುರಿತು ವಿವಿಧ ವಲಯಗಳು ನಾನಾ ನಿರೀಕ್ಷೆ ಇಟ್ಟುಕೊಂಡಿವೆಯಾದರೂ, ಬಜೆಟ್‌ನ ಪ್ರಮುಖ ಗುರಿ ಮಹಿಳೆಯರು, ಬಡವರು, ಮಧ್ಯಮ ವರ್ಗ. ಈ ಕುರಿತು ಸ್ವತಃ ಸುಳಿವು ನೀಡಿದ ಪ್ರಧಾನಿ ನರೇಂದ್ರ ಮೋದಿ  

ನವದೆಹಲಿ(ಫೆ.01): 140 ಕೋಟಿ ಭಾರತೀಯರ ಕನಸುಗಳನ್ನು ಈಡೇರಿಸುವ ಹಂಬಲ ಹೊತ್ತಿರುವ ಕೇಂದ್ರ ಸರ್ಕಾರದ ಬಹುನಿರೀಕ್ಷೆಯ ಬಜೆಟ್ ಫೆ.1ರ ಶನಿವಾರ ಪ್ರಕಟವಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬೆಳಗ್ಗೆ 11ಕ್ಕೆ ಬಜೆಟ್ ಮಂಡಿಸಲಿದ್ದು, ಇದರೊಂದಿಗೆ ಸತತ 8 ಬಜೆಟ್ ದಾಖಲಿಸಿದ ಮೊದಲ ಸಚಿವೆ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ.

ಈ ಸಲದ ಬಜೆಟ್ ಕುರಿತು ವಿವಿಧ ವಲಯಗಳು ನಾನಾ ನಿರೀಕ್ಷೆ ಇಟ್ಟುಕೊಂಡಿವೆಯಾದರೂ, ಬಜೆಟ್‌ನ ಪ್ರಮುಖ ಗುರಿ ಮಹಿಳೆಯರು, ಬಡವರು, ಮಧ್ಯಮ ವರ್ಗ. ಈ ಕುರಿತು ಸ್ವತಃ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸುಳಿವು ನೀಡಿದ್ದಾರೆ.

Budget 2025: ನಿರ್ಮಲಾ ಸೀತಾರಾಮನ್‌ ಭಾಷಣ ಮಾಡೋವಾಗ್ಲೇ ನೀವು ಕಣ್ಣಿಡಬೇಕಾದ

ಹಣದುಬ್ಬರ ಹೊಡೆತಕ್ಕೆ ಸಿಕ್ಕಿರುವ ಮಧ್ಯಮ ವರ್ಗವನ್ನು ರಕ್ಷಿಸುವ ಸಲುವಾಗಿ ತೆರಿಗೆ ದರ ಕಡಿತ ಅಥವಾ ತೆರಿಗೆ ಸ್ತರದಲ್ಲಿ ಬದಲಾವಣೆ ಸಾಧ್ಯತೆ ದಟ್ಟವಾಗಿದೆ. ಇನ್ನೊಂದೆಡೆ ಜಾಗತಿಕ ಪರಿಸ್ಥಿತಿಗಳ ಪರಿಣಾಮ ದೇಶದ ಆರ್ಥಿಕತೆಗೆ ಮಂದಗತಿಯ ಸ್ಪರ್ಶವಾಗಿರುವ ಹಿನ್ನೆಲೆ ಆರ್ಥಿಕ ಚಟುವಟಿಕೆ ಉತ್ತೇಜನಕ್ಕೆ ಪ್ರೋತ್ಸಾಹಕಗಳು ಮತ್ತು ಜನರ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಕೆಲವೊಂದು ಕ್ರಮಗಳನ್ನು ಸರ್ಕಾರ ಘೋಷಿಸುವ ಸಾಧ್ಯತೆ ಇದೆ. ಆದರೆ ವಿತ್ತೀಯ ಶಿಸ್ತನ್ನು ಕಾಪಾಡುವ ಗುರಿಯನ್ನೂ ಸರ್ಕಾರ ಹಾಕಿಕೊಂಡಿರುವ ಕಾರಣ, ಸರ್ಕಾರ ಎರಡರ ನಡುವೆ ಹೇಗೆ ಸಮತೋಲನ ಸಾಧಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

ಮೋದಿ ಸುಳಿವು: 

ಶುಕ್ರವಾರ ಸಂಸತ್ತಿನ ಬಜೆಟ್ ಅಧಿವೇಶನಕ್ಕೂ ಮುನ್ನ ಮಾಧ್ಯಮದವರನ್ನುದ್ದೇ ಶಿಸಿ ಮಾತನಾಡಿದ ಪ್ರಧಾನಿ ಮೋದಿ, 'ಬಡವರು ಹಾಗೂ ಮಧ್ಯಮ ವರ್ಗದವರ ಮೇಲೆ ಕೃಪೆ ತೋರುವಂತೆಲಕ್ಷ್ಮೀದೇವಿಯಲ್ಲಿಪ್ರಾರ್ಥಿಸಿದ್ದೇನೆ. ಮಹಿಳೆಯರಿಗೆ ಸಮಾನ ಅವಕಾಶ ಲಭಿಸುವಂತೆ ಅವರ ಸಶಕ್ತಿಕ ರಣಕ್ಕೆ ಅಗತ್ಯವಾದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಹಾಗೂ ತಾರತಮ್ಯಗಳನ್ನು ತೊಡೆದುಹಾಕಲಾಗುವುದು' ಎಂದರು.
ಈ ಬಾರಿಯ ಬಜೆಟ್ 'ವಿಕಸಿತ ಭಾರತ'ದ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಹೊಸ ಆತ್ಮ ವಿಶ್ವಾಸ ಮತ್ತು ಶಕ್ತಿಯನ್ನು ತುಂಬುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಮೋದಿ, ಅಧಿವೇಶನದ ವೇಳೆ ಹಲವು ಐತಿಹಾಸಿಕ ಬಿಲ್‌ಗಳ ಬಗ್ಗೆಯೂ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ."

Union Budget 2025: ಬ್ರಿಟಿಷ್ ಭಾರತದ ಮೊದಲ ಬಜೆಟ್‌ನಲ್ಲಿ ವಾರ್ಷಿಕ 500 ರೂಪಾಯಿ

ಬಜೆಟ್ ನಿರೀಕ್ಷೆಗಳು

• ಆದಾಯ ತೆರಿಗೆ ವಿನಾಯ್ತಿ ಮಿತಿ 2.5 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ. ಶೇ.30ರಷ್ಟು ತೆರಿಗೆ ಸ್ಲಾಬ್‌ನ ಆದಾಯ ಮಿತಿ 15ರಿಂದ 20 ಲಕ್ಷಕ್ಕೇರಿಕೆ
• ಆದಾಯ ತೆರಿಗೆ ಕಾಯ್ದೆ ಸರಳೀಕರಣಕ್ಕೆ ನೇರ ತೆರಿಗೆ ಕೋಡ್ ಪರಿಚಯ ಮಾಡುವ ಸಾಧ್ಯತೆ
• ಗೃಹ ಸಾಲಗಳಿಗೆ ವಿಧಿಸಲಾಗುವ ತೆರಿಗೆಯ ವಿನಾಯಿತಿ ಮಿತಿಯಲ್ಲಿ ಹೆಚ್ಚಳ ಸಂಭವ
• ಮಹಿಳಾ ಸ್ಕೀಂ, ಉತ್ತೇಜನ, ಹೊಸ ಸ್ಕೀಂ ಪ್ರಕಟ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!